AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Transman Pregnancy: ಮಹಿಳಾ ದಿನದಂದು ಮಗುವಿಗೆ ನಾಮಕರಣ ಮಾಡಿದ ಕೇರಳದ ತೃತೀಯಲಿಂಗಿ ದಂಪತಿ

ಮಹಿಳಾ ದಿನವಾದ ಮಾರ್ಚ್ 8 ಬುಧವಾರ ಸಂಜೆ ಕೇರಳದ ತೃತೀಯಲಿಂಗಿ ದಂಪತಿ ತಮ್ಮ ಮಗುವಿನ ನಾಮಕರಣ ಸಮಾರಂಭವನ್ನು ಆಯೋಜಿಸಿದ್ದರು.

Transman Pregnancy: ಮಹಿಳಾ ದಿನದಂದು ಮಗುವಿಗೆ ನಾಮಕರಣ ಮಾಡಿದ ಕೇರಳದ ತೃತೀಯಲಿಂಗಿ ದಂಪತಿ
ಮಹಿಳಾ ದಿನದಂದು ಮಗುವಿಗೆ ನಾಮಕರಣ ಮಾಡಿದ ತೃತೀಯಲಿಂಗಿ ದಂಪತಿ
ಅಕ್ಷಯ್​ ಪಲ್ಲಮಜಲು​​
|

Updated on:Mar 09, 2023 | 6:02 PM

Share

ಕೋಝಿಕ್ಕೋಡ್: ಮಹಿಳಾ ದಿನವಾದ ಮಾರ್ಚ್ 8 ಬುಧವಾರ ಸಂಜೆ ಕೇರಳದ ತೃತೀಯಲಿಂಗಿ (Transman Pregnancy) ದಂಪತಿ ತಮ್ಮ ಮಗುವಿನ ನಾಮಕರಣ ಸಮಾರಂಭವನ್ನು ಆಯೋಜಿಸಿದ್ದರು. ಮಗುವಿಗೆ ಜಬಿಯಾ ಜಹಾದ್ ಎಂದು ನಾಮಕರಣ ಮಾಡಿದ್ದಾರೆ. ಇತ್ತೀಚಿಗಷ್ಟೇ ಮಗುವಿಗೆ ಜನ್ಮ ನೀಡಿದ ಕೇರಳದ ತೃತೀಯಲಿಂಗಿ ದಂಪತಿಗಳು ಅಂತರಾಷ್ಟ್ರೀಯ ಮಹಿಳಾ ದಿನದಂದು ತಮ್ಮ ನವಜಾತ ಶಿಶುವಿಗೆ ನಾಮಕರಣ ಮಾಡಿದ್ದಾರೆ. ಬುಧವಾರ ಸಂಜೆ ತೆರೆದ ಸ್ಥಳದಲ್ಲಿ ನಡೆದ ಅದ್ಧೂರಿ ನಾಮಕರಣ ಸಮಾರಂಭದಲ್ಲಿ ಮಗುವಿಗೆ ಜಬಿಯಾ ಜಹಾದ್ ಎಂದು ಹೆಸರಿಡಲಾಯಿತು. ಈ ಕಾರ್ಯಕ್ರಮದಲ್ಲಿ ಹಲವಾರು ತೃತೀಯಲಿಂಗಿ ಸಮುದಾಯದ ವ್ಯಕ್ತಿಗಳು ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಹಿತೈಷಿಗಳು ಭಾಗವಹಿಸಿದ್ದರು. ಮಗುವನ್ನು ಪಡೆದ ಉತ್ಸುಕತೆಯಲ್ಲಿ ಜೀಯಾ ಪಾವಲ್ ಮತ್ತು ಜಹಾದ್ ದಂಪತಿಗಳು ತಮ್ಮ ಮಗು ಸಮಾಜದಲ್ಲಿ ಬೆಳಕನ್ನು ಹರಡಲಿ ಎಂದು ಹಾರೈಸಿದರು. ಮಗುವಿನ ಲಿಂಗವನ್ನು ಬಹಿರಂಗ ಪಡಿಸಲು ಬಯಸುವುದಿಲ್ಲ ಎಂದು ಹೇಳಿದ ಈ ದಂಪತಿ ಈ ಬಗ್ಗೆ ಕೇಳಿದಾಗ  ಜಿಯಾ ಪಾವಲ್ ಅದನ್ನು ಜಗತ್ತಿಗೆ ಬಹಿರಂಗಪಡಿಸುವ ಸಂದರ್ಭಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.

ನಮ್ಮ ಮಗುವಿನ ಜನನದ ಬಗ್ಗೆ ಎಲ್ಲರಿಗೂ ತಿಳಿಯಬೇಕೆಂದು ನಾವು ಬಯಸಿದ್ದೆವು. ನನ್ನ ಈ ಆಸೆ ಈಡೇರಿದ್ದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ. ಈ ಕಾರ್ಯವು ನನ್ನ ಕನಸಾಗಿತ್ತು ಎಂದು ಅವರು ಹೇಳಿದರು. ಮುಂದಿನ ಆರು ತಿಂಗಳವರೆಗೆ ಒಂದು ರೀತಿಯಲ್ಲಿ ನಮಗೆ ಸಂಪೂರ್ಣ ವಿಶ್ರಾಂತಿಯ ಸಮಯವಾಗಿದ್ದು, ಆರು ತಿಂಗಳ ನಂತರ ಮಗುವಿನ ಜೊತೆಗೆ ನಮ್ಮ ಜೀವನದ ಪಯಣವನ್ನು ಮುಂದುವರಿಸುತ್ತೇವೆ, ಈ ಸಾಮಾಜಿಕ ಜೀವನದಲ್ಲಿ ನಮ್ಮ ಮಗು ಕೂಡ ಬದುಕಬೇಕಿದೆ ಎಂದು ತಿಳಿಸಿದ್ದಾರೆ. ಈ ತೃತೀಯಲಿಂಗಿ ದಂಪತಿಗಳು ಫೆಬ್ರವರಿ 8ರಂದು ಸಿಸೇರಿಯನ್ ಡೆಲಿವರಿ ಮೂಲಕ ಮಗುವನ್ನು ಬರಮಾಡಿಕೊಂಡರು. ಇದು ದೇಶದ ಮೊದಲ ತೃತೀಯಲಿಂಗಿ ಮಗುವಿನ ಜನನ ಎಂದು ಹೇಳಲಾಗಿತ್ತು.

ನವಜಾತ ಶಿಶುವಿನ ಜನನ ಪ್ರಮಾಣಪತ್ರ ಮತ್ತು ಇತರ ದಾಖಲೆಗಳಲ್ಲಿ ತಮ್ಮ ಮಗುವಿನ ಹೆಸರು ಮತ್ತು ಗುರುತನ್ನು ನೋಂದಾಯಿಸಲು ಆಸ್ಪತ್ರೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಜಹಾದ್ ಮಗುವಿಗೆ ಜನ್ಮ ನೀಡಿದ ನಂತರ ಮಗುವಿನ ಹೆಸರನ್ನು ಕೂಡ ಸೂಚಿಸಿದ್ದರು, ಆದರೆ ಮಗುವಿನ ಲಿಂಗ ಯಾವುದು ಎಂದು ಹೇಳಲಾಗಿಲ್ಲ. ಇದೀಗ ಮಗುವಿನ ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ತಂದೆ ತಾಯಿಯ ಹೆಸರು, ದಾಖಲೆಗಳನ್ನು ನೀಡಿದ್ದಾರೆ.

ಇದನ್ನೂ ಓದಿ: Transman Pregnancy: ಮಗುವಿಗೆ ಜನ್ಮ ನೀಡಿದ ತೃತೀಯಲಿಂಗಿ

ಇತ್ತೀಚೆಗೆ ಭಾರೀ ವೈರಲ್ ಆಗುತ್ತಿದ್ದ ತೃತೀಯಲಿಂಗಿ ಗರ್ಭಿಣಿಯಾಗಿರುವ ಸುದ್ದಿ ದೇಶದ್ಯಾಂತ ಚರ್ಚೆ ಗ್ರಾಸವಾಗಿತ್ತು. ಕೇರಳದ ತೃತೀಯಲಿಂಗಿ ದಂಪತಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ತೃತೀಯಲಿಂಗಿ ಗರ್ಭಿಣಿಯಾಗಿರುವುದು ದೇಶದ ಮೊದಲ ಪ್ರಕರಣ ಎಂದು ಪರಿಗಣಿಸಲಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಿಸೇರಿಯನ್ ವಿಭಾಗದ ಮೂಲಕ ಮಗು ಜನಿಸಿತು ಎಂದು ಜಿಯಾ ಪಾವಲ್ ಪಿಟಿಐಗೆ ತಿಳಿಸಿದರು.

ಜಿಯಾ ಪಾವಲ್ ಇತ್ತೀಚೆಗೆ Instagramನಲ್ಲಿ ಜಹ್ಹಾದ್ ಎಂಟು ತಿಂಗಳ ಗರ್ಭಿಣಿ ಎಂದು ಘೋಷಿಸಿದರು ನಾವು ನನ್ನ ತಾಯಿಯಾಗುವ ನನ್ನ ಕನಸು ಮತ್ತು ತಂದೆಯಾಗುವ ಅವನ ಕನಸನ್ನು ನನಸಾಗಿಸಿಕೊಳ್ಳಲಿದ್ದೇವೆ. ಎಂಟು ತಿಂಗಳ ಭ್ರೂಣವು ಈಗ (ಜಹಾದ್) ಹೊಟ್ಟೆಯಲ್ಲಿದೆ. ನಮಗೆ ತಿಳಿದುಬಂದ ಪ್ರಕಾರ, ಇದು ಭಾರತದಲ್ಲಿ ಮೊದಲ ಟ್ರಾನ್ಸ್ ಮ್ಯಾನ್ ಗರ್ಭಾವಸ್ಥೆಯಾಗಿದೆ. ಪಾವಲ್ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹೇಳಿದ್ದರು. ಪಾವಲ್ ಮತ್ತು ಜಹದ್ ಕಳೆದ ಮೂರು ವರ್ಷಗಳಿಂದ ಒಟ್ಟಿಗೆ ಇದ್ದಾರೆ.

Published On - 5:51 pm, Thu, 9 March 23

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ