AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Transman Pregnancy: ಮಗುವಿಗೆ ಜನ್ಮ ನೀಡಿದ ತೃತೀಯಲಿಂಗಿ

ಇತ್ತೀಚೆಗೆ ತೃತೀಯಲಿಂಗಿ ಗರ್ಭಿಣಿಯಾಗಿರುವ ಸುದ್ದಿ ದೇಶದ್ಯಾಂತ ಚರ್ಚೆ ಗ್ರಾಸವಾಗಿತ್ತು. ಇದೀಗ ಕೇರಳದ ತೃತೀಯಲಿಂಗಿ ದಂಪತಿಗಳು ಬುಧವಾರ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ

Transman Pregnancy: ಮಗುವಿಗೆ ಜನ್ಮ ನೀಡಿದ ತೃತೀಯಲಿಂಗಿ
Transman Pregnancy
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 08, 2023 | 4:25 PM

ಕೋಝಿಕ್ಕೋಡ್: ಇತ್ತೀಚೆಗೆ ಭಾರೀ ವೈರಲ್ ಆಗುತ್ತಿದ್ದ ತೃತೀಯಲಿಂಗಿ ಗರ್ಭಿಣಿಯಾಗಿರುವ (Transman Pregnancy) ಸುದ್ದಿ ದೇಶದ್ಯಾಂತ ಚರ್ಚೆ ಗ್ರಾಸವಾಗಿತ್ತು. ಇದೀಗ ಕೇರಳದ ತೃತೀಯಲಿಂಗಿ ದಂಪತಿಗಳು ಬುಧವಾರ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹೇಳಲಾಗಿದೆ. ಇದು ದೇಶದ ಮೊದಲ ಪ್ರಕರಣ ಎಂದು ಪರಿಗಣಿಸಲಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಿಸೇರಿಯನ್ ವಿಭಾಗದ ಮೂಲಕ ಬೆಳಿಗ್ಗೆ 9.30 ರ ಸುಮಾರಿಗೆ ಮಗು ಜನಿಸಿತು ಎಂದು ಜಿಯಾ ಪಾವಲ್ ಪಿಟಿಐಗೆ ತಿಳಿಸಿದರು.

ಮಗು ಮತ್ತು ಮಗುವಿಗೆ ಜನ್ಮ ನೀಡಿದ ಜಿಯಾ ಪಾವಲ್ ಸಂಗಾತಿ ಜಹ್ಹಾದ್ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಪಾವಲ್ ಹೇಳಿದರು. ಟ್ರಾನ್ಸ್ ವ್ಯಕ್ತಿ ನವಜಾತ ಶಿಶುವಿನ ಲಿಂಗ ಗುರುತನ್ನು ಬಹಿರಂಗಪಡಿಸಲು ನಿರಾಕರಿಸಿದರು ಮತ್ತು ಇದೀಗ ಅದನ್ನು ಸಾರ್ವಜನಿಕವಾಗಿ ತಿಳಿಸಲು ಬಯಸುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Transman Pregnancy: ದೇಶದಲ್ಲೇ ಮೊದಲ ಬಾರಿಗೆ ತೃತೀಯಲಿಂಗಿ​ ಗರ್ಭಧಾರಣೆ! ಇಲ್ಲಿದೆ ಫೋಟೋ

ಜಿಯಾ ಪಾವಲ್ ಇತ್ತೀಚೆಗೆ Instagramನಲ್ಲಿ ಜಹ್ಹಾದ್ ಎಂಟು ತಿಂಗಳ ಗರ್ಭಿಣಿ ಎಂದು ಘೋಷಿಸಿದರು ನಾವು ನನ್ನ ತಾಯಿಯಾಗುವ ನನ್ನ ಕನಸು ಮತ್ತು ತಂದೆಯಾಗುವ ಅವನ ಕನಸನ್ನು ನನಸಾಗಿಸಿಕೊಳ್ಳಲಿದ್ದೇವೆ. ಎಂಟು ತಿಂಗಳ ಭ್ರೂಣವು ಈಗ (ಜಹಾದ್) ಹೊಟ್ಟೆಯಲ್ಲಿದೆ. ನಮಗೆ ತಿಳಿದುಬಂದ ಪ್ರಕಾರ, ಇದು ಭಾರತದಲ್ಲಿ ಮೊದಲ ಟ್ರಾನ್ಸ್ ಮ್ಯಾನ್ ಗರ್ಭಾವಸ್ಥೆಯಾಗಿದೆ. ಪಾವಲ್ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹೇಳಿದ್ದಾರೆ. ಪಾವಲ್ ಮತ್ತು ಜಹದ್ ಕಳೆದ ಮೂರು ವರ್ಷಗಳಿಂದ ಒಟ್ಟಿಗೆ ಇದ್ದಾರೆ.