AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cow Hug Day: ಫೆ.14ರಂದು ‘ಆಕಳನ್ನು ಆಲಂಗಿಸುವ ದಿನ’ ಆಚರಿಸಲು ಪ್ರಾಣಿ ಕಲ್ಯಾಣ ಮಂಡಳಿ ಕರೆ

ಪಾಶ್ಚಿಮಾತ್ಯ ಸಂಸ್ಕೃತಿಯು ವೈದಿಕ ಸಂಪ್ರದಾಯಗಳ ಅಳಿವಿಗೆ ಕಾರಣವಾಗುತ್ತಿರುವ ಕಾರಣ, ಈ ರೀತಿಯ ದಿನ ಅಗತ್ಯವಿದೆ. "ಗೋವಿನ ಅಪಾರ ಪ್ರಯೋಜನದ ದೃಷ್ಟಿಯಿಂದ ದನವನ್ನು ಅಪ್ಪಿಕೊಳ್ಳುವುದು ಭಾವನಾತ್ಮಕ ಶ್ರೀಮಂತಿಕೆಯನ್ನು ತರುತ್ತದೆ. ಅದು ನಮ್ಮ ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷವನ್ನು ಹೆಚ್ಚಿಸುತ್ತದೆ"

Cow Hug Day: ಫೆ.14ರಂದು ‘ಆಕಳನ್ನು ಆಲಂಗಿಸುವ ದಿನ’ ಆಚರಿಸಲು ಪ್ರಾಣಿ ಕಲ್ಯಾಣ ಮಂಡಳಿ ಕರೆ
ದನ ಆಲಂಗಿಸುವ ದಿನ
ರಶ್ಮಿ ಕಲ್ಲಕಟ್ಟ
|

Updated on:Feb 08, 2023 | 6:15 PM

Share

ದೆಹಲಿ: ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು (Animal Welfare Board of India) ಫೆಬ್ರವರಿ 14 ಅನ್ನು ‘ ಆಕಳನ್ನು ಆಲಂಗಿಸುವ ದಿನ’ (Cow Hug Day ) ಎಂದು ಆಚರಿಸಬೇಕು ಎಂದು ಹೇಳಿದೆ. ಹಸುಗಳ ಬಗ್ಗೆ ತಿಳಿಯುವುದಕ್ಕೆ ಮತ್ತು ಅದು ಹೇಗೆ ಭಾರತದ ಸಮಾಜ ಮತ್ತು ಆರ್ಥಿಕತೆಯ ಬೆನ್ನೆಲುಬು ಆಗಿದೆ ಎಂಬುದನ್ನು ಸಂಭ್ರಮಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಗೋವು ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಎಂದು ನಮಗೆಲ್ಲರಿಗೂ ತಿಳಿದಿದೆ, ನಮ್ಮ ಜೀವನಕ್ಕೆ ಇದು ಬೇಕು. ಇದು ಜಾನುವಾರು ಸಂಪತ್ತು ಮತ್ತು ಜೀವವೈವಿಧ್ಯತೆಯನ್ನು ಪ್ರತಿನಿಧಿಸುತ್ತದೆ. ತಾಯಿಯಂತೆ ಪೋಷಿಸುವ ಸ್ವಭಾವದ ಕಾರಣದಿಂದ ಇದನ್ನು ‘ಕಾಮಧೇನು’ ಮತ್ತು ‘ಗೋಮಾತಾ’ ಎಂದು ಕರೆಯಲಾಗುತ್ತದೆ. ಮಾನವೀಯತೆಗೆ ಎಲ್ಲಾ ಸಂಪತ್ತನ್ನು ನೀಡುವವಳು ಎಂದು ಮಂಡಳಿಯು ಫೆಬ್ರವರಿ 6 ರಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಪಾಶ್ಚಿಮಾತ್ಯ ಸಂಸ್ಕೃತಿಯು ವೈದಿಕ ಸಂಪ್ರದಾಯಗಳ ಅಳಿವಿಗೆ ಕಾರಣವಾಗುತ್ತಿರುವ ಕಾರಣ, ಈ ರೀತಿಯ ದಿನ ಅಗತ್ಯವಿದೆ. “ಗೋವಿನ ಅಪಾರ ಪ್ರಯೋಜನದ ದೃಷ್ಟಿಯಿಂದ ದನವನ್ನು ಅಪ್ಪಿಕೊಳ್ಳುವುದು ಭಾವನಾತ್ಮಕ ಶ್ರೀಮಂತಿಕೆಯನ್ನು ತರುತ್ತದೆ. ಅದು ನಮ್ಮ ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಎಲ್ಲಾ ಹಸು ಪ್ರೇಮಿಗಳು ಫೆಬ್ರವರಿ 14 ಅನ್ನು ಆಕಳನ್ನು ಆಲಂಗಿಸುವ ದಿನವನ್ನಾಗಿ ಆಚರಿಸಬಹುದು, ತಾಯಿ ಹಸುವಿನ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಜೀವನವನ್ನು ಸಂತೋಷದಿಂದ ಮತ್ತು ಸಕಾರಾತ್ಮಕ ಶಕ್ತಿಯಿಂದ ಮಾಡಬಹುದು” ಎಂದು ಸರ್ಕಾರದ ಪ್ರಕಟಣೆಯಲ್ಲಿ ಹೇಳಿದೆ.

ಇದನ್ನೂ ಓದಿ: Parliament: 2014ರ ಹಿಂದಿನ ದಶಕವನ್ನು ಕಳೆದುಹೋದ ದಶಕ ಎಂದು ನೆನಪಿಸಿಕೊಳ್ಳಲಾಗುತ್ತದೆ: ಪ್ರಧಾನಿ ಮೋದಿ

ಹಸುವನ್ನು ತಬ್ಬಿಕೊಳ್ಳುವುದು ಒಂದು ರೀತಿಯಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ನಿರಾಕರಣೆ ಎಂದು ಮಂಡಳಿಯು ವಾದಿಸಿದರೂ, ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಈಗ ಸ್ವಲ್ಪ ಸಮಯದವರೆಗೆ ಹಸುವನ್ನು ಮುದ್ದಿಸುವುದು ಒಂದು ಪ್ರವೃತ್ತಿಯಾಗಿದೆ. ನೆದರ್ಲ್ಯಾಂಡ್ಸ್ನಲ್ಲಿ, “ಕೋ ಕ್ನಫ್ಲೆನ್” (ಹಸುವನ್ನು ತಬ್ಬಿಕೊಳ್ಳುವುದು) ಇದ್ದು,  ಫಾರ್ಮ್ ಮಾಲೀಕರಿಂದ ಸೇವೆಯನ್ನು ನೀಡಲಾಗುತ್ತದೆ. “ಹಸು ಮುದ್ದಾಡುವವರು ಸಾಮಾನ್ಯವಾಗಿ ಎರಡು ಅಥವಾ ಮೂರು ಗಂಟೆಗಳ ಕಾಲ ಒಂದು ಹಸುವಿನ ಜತೆ ವಿಶ್ರಾಂತಿ ಪಡೆಯುವ ಮೊದಲು ಜಮೀನಿನ ಪ್ರವಾಸವನ್ನು ಕೈಗೊಳ್ಳುವ ಮೂಲಕ ಪ್ರಾರಂಭಿಸುತ್ತಾರೆ” ಎಂದು ಬಿಬಿಸಿ ಅಕ್ಟೋಬರ್ 2020 ರಲ್ಲಿ ಈ ಪ್ರವೃತ್ತಿಯ ಬಗ್ಗೆ ಬರೆದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:59 pm, Wed, 8 February 23