ಕೊರೊನಾ ಬೆನ್ನಲ್ಲೇ ಚೀನಾದಿಂದ ಬರುತ್ತಿದೆ ಮತ್ತೊಂದು ಘಾತಕ ವೈರಸ್‌

|

Updated on: Aug 07, 2020 | 4:58 PM

ಬೀಜಿಂಗ್‌: ಚೀನಾ ವೀಶ್ವದ ಪಾಲಿಗೆ ಈಗ ವಿಲನ್‌ ಆಗಿ ಬಿಟ್ಟಿದೆ. ಕಳೆದ ವರ್ಷ ಕೊಟ್ಟ ಕೊರೊನಾ ವೈರಸ್‌ಗೆ ಇಡೀ ಜಗತ್ತೇ ಥಂಡಾ ಹೊಡೆದಿದೆ. ಇದರಿಂದಲೇ ಇನ್ನು ಚೇತರಿಸಿಕೊಂಡಿಲ್ಲ, ಆಗಲೇ ಮತ್ತೊಂದು ವೈರಸ್‌ ಬಾಂಬ್‌ ಹಾಕಿದೆ. ಅದುವೇ ಬನ್‌ಯಾ ವೈರಸ್‌. ಹೌದು ಕೊರೊನಾ ವೈರಸ್‌ಗೆ ಜಗತ್ತೇ ಕಂಗಾಲಾಗಿರುವಾಗ ಚೀನಾ ಈಗ ಮತ್ತೊಂದು ವೈರಸ್‌ ಬಾಂಬ್‌ ಹಾಕಿದೆ. ಬನ್‌ಯಾ ವೈರಸ್‌ ಎಂಬ ಹೊಸ ಸಾಂಕ್ರಾಮಿಕಕ್ಕೆ ಈಗಾಗಲೇ ಚೀನಾದಲ್ಲಿ 7ಜನರು ಸಾವನ್ನಪ್ಪಿದ್ದಾರೆ. 60ಕ್ಕೂ ಹೆಚ್ಚು ಜನರು ಆಸ್ಪತ್ರೆಯಲ್ಲಿದ್ದಾರೆ. ಚೀನಾದ ಜಿಯಾಂಗ್‌ ಸು […]

ಕೊರೊನಾ ಬೆನ್ನಲ್ಲೇ ಚೀನಾದಿಂದ ಬರುತ್ತಿದೆ ಮತ್ತೊಂದು ಘಾತಕ ವೈರಸ್‌
Follow us on

ಬೀಜಿಂಗ್‌: ಚೀನಾ ವೀಶ್ವದ ಪಾಲಿಗೆ ಈಗ ವಿಲನ್‌ ಆಗಿ ಬಿಟ್ಟಿದೆ. ಕಳೆದ ವರ್ಷ ಕೊಟ್ಟ ಕೊರೊನಾ ವೈರಸ್‌ಗೆ ಇಡೀ ಜಗತ್ತೇ ಥಂಡಾ ಹೊಡೆದಿದೆ. ಇದರಿಂದಲೇ ಇನ್ನು ಚೇತರಿಸಿಕೊಂಡಿಲ್ಲ, ಆಗಲೇ ಮತ್ತೊಂದು ವೈರಸ್‌ ಬಾಂಬ್‌ ಹಾಕಿದೆ. ಅದುವೇ ಬನ್‌ಯಾ ವೈರಸ್‌.

ಹೌದು ಕೊರೊನಾ ವೈರಸ್‌ಗೆ ಜಗತ್ತೇ ಕಂಗಾಲಾಗಿರುವಾಗ ಚೀನಾ ಈಗ ಮತ್ತೊಂದು ವೈರಸ್‌ ಬಾಂಬ್‌ ಹಾಕಿದೆ. ಬನ್‌ಯಾ ವೈರಸ್‌ ಎಂಬ ಹೊಸ ಸಾಂಕ್ರಾಮಿಕಕ್ಕೆ ಈಗಾಗಲೇ ಚೀನಾದಲ್ಲಿ 7ಜನರು ಸಾವನ್ನಪ್ಪಿದ್ದಾರೆ. 60ಕ್ಕೂ ಹೆಚ್ಚು ಜನರು ಆಸ್ಪತ್ರೆಯಲ್ಲಿದ್ದಾರೆ. ಚೀನಾದ ಜಿಯಾಂಗ್‌ ಸು ಮತ್ತು ಌನ್‌ಹುಯಿ ಪ್ರದೇಶಗಳಲ್ಲಿ ಈ ವೈರಸ್‌ ಈಗ ವ್ಯಾಪಕವಾಗಿ ಹಬ್ಬುತ್ತಿದೆ.

ಟಿಕ್‌ ಅಥವಾ ಜೇಡರ ಥರ ಇರುವ ಹುಳು ಕಡಿತದಿಂದ ಈ ವೈರಸ್‌ ಹಬ್ಬುತ್ತೆ. ಆದರೆ ಇದು ಈಗ ಚೀನಾದಲ್ಲಿ ಮಾನವನಿಂದ ಮಾನವನಿಗೆ ಹರಡುತ್ತಿದ್ದು ಮತ್ತೊಂದು ಸಂಕಷ್ಟದ ಆತಂಕ ಸೃಷ್ಟಿಸಿದೆ. ತೀವ್ರವಾದ ತಲೆನೋವು, ಜ್ವರ, ಆಯಾಸ ಮತ್ತು ಅಲರ್ಜಿಯ ಕಲೆಗಳು ಈ ಬುನ್‌ಯಾ ವೈರಸ್‌ನ ಲಕ್ಷಣಗಳು. ಈ ವೈರಸ್‌ ಸೋಂಕಿದ್ರೆ ಕೊರೊನಾದಷ್ಟೇ ಆತಂಕ ಪಡಬೇಕು. ಯಾಕಂದ್ರೆ ಇದಕ್ಕೆ ಇನ್ನು ಯಾವುದೇ ಔಷಧವಾಗಲಿ ಅಥವಾ ವ್ಯಾಕ್ಸಿನ್‌ ಆಗಲಿ ಕಂಡು ಹಿಡಿದಿಲ್ಲ.