ಅಮೆರಿಕ ಅಧ್ಯಕ್ಷ ಟ್ರಂಪ್ ಪರ ಬೋಟ್​ ಱಲಿ ಚುನಾವಣಾ ಪ್ರಚಾರದ ವೇಳೆ ದೋಣಿ ದುರಂತ..

| Updated By: KUSHAL V

Updated on: Sep 06, 2020 | 1:12 PM

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ ನಡೆಯುತ್ತಿದ್ದ ಚುನಾವಣಾ ಪ್ರಚಾರದ ಬೋಟ್ ಱಲಿ ವೇಳೆ ದೋಣಿಗಳು ಮುಳುಗಿರುವ ಘಟನೆ ಟೆಕ್ಸಾಸ್​ನ ಆಸ್ಟಿನ್​ ನಗರದ ಟ್ರಾವಿಸ್ ಸರೋವರದಲ್ಲಿ ನಡೆದಿದೆ. ಚುನಾವಣಾ ಬೋಟ್ ಱಲಿಯಲ್ಲಿ 2,600ಕ್ಕೂ ಹೆಚ್ಚು ಜನರು ಭಾಗಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಘಟನೆ ಸಂಭವಿಸಿದ ವೇಳೆ ಎಷ್ಟು ಮಂದಿ ಇದ್ದರು ಎಂಬುವುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಜೊತೆಗೆ, ಈವರೆಗೆ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ. ಆದರೆ, ಬೋಟ್​ಗಳು ಮುಳುಗಿರುವುದರ ಬಗ್ಗೆ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಖಚಿತಪಡಿಸಿದ್ದಾರೆ […]

ಅಮೆರಿಕ ಅಧ್ಯಕ್ಷ ಟ್ರಂಪ್ ಪರ ಬೋಟ್​ ಱಲಿ ಚುನಾವಣಾ ಪ್ರಚಾರದ ವೇಳೆ ದೋಣಿ ದುರಂತ..
Follow us on

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ ನಡೆಯುತ್ತಿದ್ದ ಚುನಾವಣಾ ಪ್ರಚಾರದ ಬೋಟ್ ಱಲಿ ವೇಳೆ ದೋಣಿಗಳು ಮುಳುಗಿರುವ ಘಟನೆ ಟೆಕ್ಸಾಸ್​ನ ಆಸ್ಟಿನ್​ ನಗರದ ಟ್ರಾವಿಸ್ ಸರೋವರದಲ್ಲಿ ನಡೆದಿದೆ.

ಚುನಾವಣಾ ಬೋಟ್ ಱಲಿಯಲ್ಲಿ 2,600ಕ್ಕೂ ಹೆಚ್ಚು ಜನರು ಭಾಗಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಘಟನೆ ಸಂಭವಿಸಿದ ವೇಳೆ ಎಷ್ಟು ಮಂದಿ ಇದ್ದರು ಎಂಬುವುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಜೊತೆಗೆ, ಈವರೆಗೆ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ. ಆದರೆ, ಬೋಟ್​ಗಳು ಮುಳುಗಿರುವುದರ ಬಗ್ಗೆ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಖಚಿತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, ಬೋಟ್ ಮುಳುಗಿರುವುದರ ಕುರಿತು ಸ್ಥಳೀಯ ಆಡಳಿತಕ್ಕೆ ಅನೇಕ ತುರ್ತು ಕರೆಗಳು ಸಹ ಬಂದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.