ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಉಪಟಳ ದಿನೇದಿನೆ ಹೆಚ್ಚುತ್ತಿದೆ. ನಾವು ಶಾಂತಿಪ್ರಿಯರು ಎನ್ನುತ್ತಲೇ ಹಲವರನ್ನು ಕೊಲ್ಲುತ್ತಿದ್ದಾರೆ. ಹಾಗೇ, ಶುಕ್ರವಾರ ರಾತ್ರಿ ಕೂಡ ಕಾಬೂಲ್ನಲ್ಲಿ ತಾಲಿಬಾನಿಗಳ ಸಂಭ್ರಮಕ್ಕೆ ಹಲವರು ಬಲಿಯಾಗಿದ್ದಾರೆ. ಉಗ್ರರು ಗಾಳಿಯಲ್ಲಿ ಗುಂಡು ಹೊಡೆದ ಪರಿಣಾಮ ಮಕ್ಕಳೂ ಸೇರಿ ಹಲವರು ಜೀವಕಳೆದುಕೊಂಡಿದ್ದಾರೆ ಎಂದು ಅಫ್ಘಾನಿಸ್ತಾನ ಸ್ಥಳೀಯ ಮಾಧ್ಯಮ ಅಸ್ವಾಕಾ ವರದಿ ಮಾಡಿದೆ.
ನಿನ್ನೆ ಪಂಜ್ಶಿರ್ ಕಣಿವೆಯನ್ನೂ ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ. ಈ ಪ್ರದೇಶವನ್ನು ಸ್ಥಳೀಯರಿಂದ ವಶಪಡಿಸಿಕೊಳ್ಳುವುದು ಅಷ್ಟು ಸಲೀಸಾಗಿರಲಿಲ್ಲ. ತುಂಬದಿನಗಳ ನಂತರ ಅಲ್ಲಿನ ನ್ಯಾಶನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನ್ (NRFA) ಸಂಘಟನೆಯನ್ನು ಸೋಲಿಸಿ, ಪಂಜಶಿರ್ ಕಣಿವೆಯನ್ನೂ ತಾಲಿಬಾನಿಗಳು ಕೈವಶ ಮಾಡಿಕೊಂಡಿದ್ದಾರೆ. ಅದರಿಂದ ಖುಷಿಯಾದ ತಾಲಿಬಾನಿಗಳು ಕಾಬೂಲ್ನಲ್ಲಿ ಗಾಳಿಯಲ್ಲಿ ಗುಂಡುಹೊಡೆದು ಸಂಭ್ರಮಿಸಿದ್ದಾರೆ. ಆದರೆ ತಾಲಿಬಾನಿಗ ಸಂಭ್ರಮ ಅನೇಕರ ಪ್ರಾಣ ತೆಗೆದಿದೆ. ಅದೆಷ್ಟೋ ಜನರು ಗಾಯಗೊಂಡಿದ್ದಾರೆ. ಈ ಫೋಟೊ, ವಿಡಿಯೋಗಳು ಸಿಕ್ಕಾಪಟೆ ವೈರಲ್ ಆಗಿವೆ.
The #Taliban carried out cheerful shootings in most parts of Kabul last night, believing that they had taken control of #Panjshir province, while the Resistance Front denied the Taliban’s claim, saying they had inflicted heavy casualties on the Taliban. pic.twitter.com/GbheJ0pSNH
— Aśvaka – آسواکا News Agency (@AsvakaNews) September 3, 2021
ಅಲ್ಲಾನ ಕೃಪೆಯಿಂದ ನಾವೀಗ ಇಡೀ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದೇವೆ. ಪಂಜಶಿರ್ ಪ್ರದೇಶ ಒಂದು ನಮಗೆ ಸಿಕ್ಕಿರಲಿಲ್ಲ. ಇದೀಗ ಆ ತೊಂದರೆಯೂ ದೂರವಾಯಿತು. ಪಂಜಶಿರ್ ವ್ಯಾಲಿ ಕೂಡ ನಮ್ಮದಾಯಿತು ಎಂದು ತಾಲಿಬಾನ್ ಕಮಾಂಡರ್ ಒಬ್ಬ ರಾಯಿಟರ್ಸ್ ಬಳಿ ಹೇಳಿದ್ದಾನೆ. ಹಾಗೇ, ಪಂಜಶಿರ್ ಸ್ಥಳೀಯ ಸಂಘಟನೆಯ ನಾಯಕ ಅಹ್ಮದ್ ಮಸೂದ್ ಟ್ವೀಟ್ ಮಾಡಿದ್ದು, ಪಂಜಶಿರ್ನ್ನು ತಾಲಿಬಾನಿಗಳು ವಶ ಪಡಿಸಿಕೊಂಡಿದ್ದಾರೆ ಎಂದು ಪಾಕಿಸ್ತಾನ ಮೀಡಿಯಾಗಳಲ್ಲಿ ಸುದ್ದಿಯಾಗುತ್ತಿದೆ. ಆದರೆ ಇದು ಸುಳ್ಳು. ಯಾವತ್ತು ಪಂಜಶಿರ್ ತಾಲಿಬಾನಿಗಳ ಕೈವಶ ಆಗುತ್ತದೆಯೋ ಅಂದು ನನ್ನ ಜೀವವೂ ಇರುವುದಿಲ್ಲ ಎಂದಿದ್ದಾರೆ.
News of Panjshir conquests is circulating on Pakistani media. This is a lie. Conquering Panjshir will be my last day in Panjshir, inshallah.
— Ahmad Massoud (@Mohsood123) September 3, 2021
ಇದನ್ನೂ ಓದಿ: ‘ಆ ಸಿದ್ದಾರ್ಥ್ ಬದಲು ಈ ಸಿದ್ದಾರ್ಥ್ ಸಾಯಬೇಕಿತ್ತು’ ಎಂದು ದ್ವೇಷಕಾರಿದ ನೆಟ್ಟಿಗರು; ನಟನ ಪ್ರತಿಕ್ರಿಯೆ ಏನು?
Rohit Sharma: ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾ-ಉಮೇಶ್ ಯಾದವ್
Published On - 9:07 am, Sat, 4 September 21