AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ತನ್ನಂತೇ ಕಾಣುವ ಯುವತಿಯನ್ನು ಕೊಂದು, ತಾನೇ ಸತ್ತಿದ್ದೇನೆಂದು ನಂಬಿಸಿದ ಮಹಿಳೆ; ಕೊನೆಗೂ ಬಯಲಾಯ್ತು ಸತ್ಯ

ಶರಬನ್ ಕುಟುಂಬದ ಕೆಲವು ಸದಸ್ಯರು ಆ ಶವದ ಮೇಲಿದ್ದ ಬಟ್ಟೆ, ಅಲ್ಲಿದ್ದ ವಸ್ತುಗಳನ್ನು ನೋಡಿ ಮೃತದೇಹವನ್ನು ಗುರುತಿಸಿದ್ದರು. ಆದರೆ, ಮರುದಿನ ಶವಪರೀಕ್ಷೆ ವರದಿಯಲ್ಲಿ ಹಲವು ಅನುಮಾನಗಳು ಮೂಡಿದ್ದವು.

Shocking News: ತನ್ನಂತೇ ಕಾಣುವ ಯುವತಿಯನ್ನು ಕೊಂದು, ತಾನೇ ಸತ್ತಿದ್ದೇನೆಂದು ನಂಬಿಸಿದ ಮಹಿಳೆ; ಕೊನೆಗೂ ಬಯಲಾಯ್ತು ಸತ್ಯ
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on: Feb 01, 2023 | 4:52 PM

Share

ನವದೆಹಲಿ: ಜರ್ಮನಿಯ (German) 23 ವರ್ಷದ ಯುವತಿಯೊಬ್ಬಳು ತಾನು ಸತ್ತಿದ್ದೇನೆ ಎಂದು ಎಲ್ಲರನ್ನೂ ನಂಬಿಸಲು ತನ್ನದೇ ರೀತಿ ಕಾಣುವ ಯುವತಿಯನ್ನು ಇನ್​ಸ್ಟಾಗ್ರಾಂನಲ್ಲಿ(Instagram) ಹುಡುಕಿ, ಆಕೆಯ ಪರಿಚಯ ಮಾಡಿಕೊಂಡು, ತನ್ನ ಸ್ನೇಹಿತನೊಂದಿಗೆ ಸೇರಿ ಅವಳನ್ನು ಕೊಲೆ (Murder) ಮಾಡಿರುವ ಆಘಾತಕಾರಿ ಘಟನೆ (Shocking News) ನಡೆದಿದೆ. ಕಳೆದ ಆಗಸ್ಟ್‌ನಲ್ಲಿ ದಕ್ಷಿಣ ಜರ್ಮನಿಯ ಇಂಗೋಲ್‌ಸ್ಟಾಡ್‌ನಲ್ಲಿ ನಿಲುಗಡೆ ಮಾಡಲಾದ ಮರ್ಸಿಡಿಸ್‌ ಬೆಂಜ್ ಕಾರಿನಲ್ಲಿ ಯುವತಿಯ ರಕ್ತಸಿಕ್ತವಾದ ಮೃತದೇಹ ಪತ್ತೆಯಾಗಿತ್ತು. ಅಲ್ಲಿದ್ದ ಸಾಕ್ಷಿಗಳನ್ನು ನೋಡಿ ಆ ಮೃತದೇಹ ಮ್ಯೂನಿಚ್ ಮೂಲದ 23 ವರ್ಷದ ಬ್ಯೂಟಿಷಿಯನ್ ಶರಬನ್ ಎಂಬ ಮಹಿಳೆಯದ್ದು ಎಂದು ಗುರುತಿಸಲಾಗಿತ್ತು. ಆದರೆ, ಅದೆಲ್ಲವೂ ಆಕೆಯ ಪ್ಲಾನ್ ಎಂಬುದು ಇದೀಗ ಬಯಲಾಗಿದೆ.

ಶರಬನ್ ಕುಟುಂಬದ ಕೆಲವು ಸದಸ್ಯರು ಆ ಶವದ ಮೇಲಿದ್ದ ಬಟ್ಟೆ, ಅಲ್ಲಿದ್ದ ವಸ್ತುಗಳನ್ನು ನೋಡಿ ಮೃತದೇಹವನ್ನು ಗುರುತಿಸಿದ್ದರು. ಆದರೆ, ಮರುದಿನ ಶವಪರೀಕ್ಷೆ ವರದಿಯಲ್ಲಿ ಹಲವು ಅನುಮಾನಗಳು ಮೂಡಿದ್ದವು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಆ ಶವ ಖಡಿಡ್ಜಾ ಎಂಬ 23 ವರ್ಷದ ಯುವತಿಯದ್ದು ಎಂದು ಗೊತ್ತಾಗಿದೆ. ನೆರೆಯ ರಾಜ್ಯವಾದ ಬಾಡೆನ್-ವಾರ್ಟೆಂಬರ್ಗ್‌ನಲ್ಲಿರುವ ಹೈಲ್‌ಬ್ರಾನ್‌ನಿಂದ ಅಲ್ಜೀರಿಯಾದ ಸೌಂದರ್ಯ ಬ್ಲಾಗರ್ ಆಗಿರುವ ಆಕೆ ಶರಬನ್​ಗೆ ಇನ್​ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದಳು.

ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲೊಂದು ಭೀಕರ ಘಟನೆ; ಗರ್ಲ್​ಫ್ರೆಂಡ್​ನ 3 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ, ಕೊಲೆ

ಶರಬನ್ ಮತ್ತು ಖಡಿಡ್ಜಾಳ ಮೈಬಣ್ಣ ಮತ್ತು ಕಪ್ಪು ಕೂದಲಿನ ಸಾಮ್ಯತೆ, ದೇಹದ ಆಕಾರ ಹಾಗೂ ಮುಖದ ಹೋಲಿಕೆಯಿಂದ ಎಲ್ಲರೂ ಅದು ಶರಬನ್​ಳ ಮೃತದೇಹ ಎಂದು ನಂಬಿದ್ದರು. ಅವರಿಬ್ಬರೂ ಒಂದೇ ರೀತಿ ಕಾಣುತ್ತಿದ್ದರು. ಹೀಗಾಗಿ, ಶರಬನ್ ಆಕೆಯನ್ನು ಪರಿಚಯ ಮಾಡಿಕೊಂಡು ಭೇಟಿಯಾಗಿ, ಸ್ನೇಹ ಬೆಳೆಸಿದ್ದಳು.

ಇದೀಗ ಪೊಲೀಸರು ಶರಬನ್ ಹಾಗೂ ಆಕೆಯ ಗೆಳೆಯನನ್ನು ಬಂಧಿಸಿದ್ದಾರೆ. ಆದರೆ, ಕೊಲೆಗೆ ಕಾರಣವೇನೆಂಬ ಬಗ್ಗೆ ಇನ್ನೂ ನಿಖರ ಕಾರಣ ಹೊರಬಿದ್ದಿಲ್ಲ. ಆ ಯುವತಿಯನ್ನು ಶರಬನ್ ಹಾಗೂ ಆಕೆಯ ಗೆಳೆಯ 50ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿದ್ದಾರೆ. ಆಕೆಯ ಮುಖದ ಮೇಲೂ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಆಕೆಯ ಮುಖ ಸುಲಭವಾಗಿ ಗೊತ್ತಾಗುವಂತಿರಲಿಲ್ಲ. ಬಂಧಿತರಾಗಿರುವ ಶರಬನ್ ಹಾಗೂ ಆಕೆಯ ಸ್ನೇಹಿತನ ಆರೋಪ ಸಾಬೀತಾದರೆ ಇಬ್ಬರೂ ಆರೋಪಿಗಳು ಜೀವಾವಧಿ ಶಿಕ್ಷೆಗೆ ಗುರಿಯಾಗಲಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!