ಕೆನಡಾದಲ್ಲಿ ಹಿಂದೂ ದೇವಾಲಯದ ಅಧ್ಯಕ್ಷ ಸತೀಶ್ ಕುಮಾರ್ ಮನೆ ಮೇಲೆ ಖಲಿಸ್ತಾನಿ ಬೆಂಬಲಿಗರು ಗುಂಡಿನ ದಾಳಿ ನಡೆಸಿದ್ದಾರೆ. ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆಯಲ್ಲಿ ಪ್ರಸಿದ್ಧ ಹಿಂದೂ ದೇವಾಲಯದ ಅಧ್ಯಕ್ಷರ ಮೇಲೆ ಖಲಿಸ್ತಾನಿ ಬೆಂಬಲಿಗರು ದಾಳಿ ನಡೆಸಿದ್ದಾರೆ.
ಮನೆಯ ಮೇಲೆ ಒಂದರ ಹಿಂದೆ ಒಂದರಂತೆ 14 ಸುತ್ತು ಗುಂಡು ಹಾರಿಸಲಾಯಿತು. ಗುರುವಾರ ರಾತ್ರಿ ಲಕ್ಷ್ಮಿ ನಾರಾಯಣ ದೇವಸ್ಥಾನದ ಅಧ್ಯಕ್ಷ ಸತೀಶ್ ಕುಮಾರ್ ಅವರ ಮನೆ ಮೇಲೆ ಖಾಲಿಸ್ತಾನಿ ಬೆಂಬಲಿಗರು ದಾಳಿ ಮಾಡಿದ್ದಾರೆ. ಗುಂಡಿನ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲದಿದ್ದರೂ, ಗುಂಡು ತಗುಲಿ ಮನೆಗೆ ಹಾನಿಯಾಗಿದೆ.
ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆಯಲ್ಲಿ ಪ್ರಸಿದ್ಧ ಹಿಂದೂ ದೇವಾಲಯದ ಅಧ್ಯಕ್ಷರ ಮೇಲೆ ಖಲಿಸ್ತಾನಿ ಬೆಂಬಲಿಗರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಮತ್ತಷ್ಟು ಓದಿ: ಕೆನಡಾದಲ್ಲಿ ಮತ್ತೆ ಹಿಂದೂ ದೇವಾಲಯಗಳ ಮೇಲೆ ಖಲಿಸ್ತಾನಿ ಬೆಂಬಲಿಗರಿಂದ ದಾಳಿ
ಪೊಲೀಸರು ಹಲವಾರು ಗಂಟೆಗಳ ಕಾಲ ಘಟನಾ ಸ್ಥಳದಲ್ಲಿಯೇ ಇದ್ದರು, ಸಾಕ್ಷ್ಯವನ್ನು ಪರಿಶೀಲಿಸಿದರು. ಈ ದಾಳಿಯನ್ನು ಖಲಿಸ್ತಾನಿ ಉಗ್ರರ ವಿರುದ್ಧ ದೇವಾಲಯದಲ್ಲಿ ಪ್ರತಿಭಟನೆ ನಡೆಸಿದರು. ಈ ಹಿಂದೆ ಮೂರು ಬಾರಿ ಖಲಿಸ್ತಾನಿ ಉಗ್ರರು ದೇವಸ್ಥಾನವನ್ನು ಗುರಿಯಾಗಿಸಿದ್ದರು.
ಕೆನಡಾದ ಸರ್ಕಾರವು ದಾಳಿಯನ್ನು ಖಂಡಿಸಿದೆ ಮತ್ತು ಪೀಡಿತ ಸಮುದಾಯಗಳನ್ನು ಬೆಂಬಲಿಸುವುದಾಗಿ ವಾಗ್ದಾನ ಮಾಡಿದೆ. ಈ ಭರವಸೆಗಳ ಹೊರತಾಗಿಯೂ, ಹಿಂದೂ ಸಮುದಾಯವು ಆತಂಕದಲ್ಲಿದೆ. ಕೆನಡಾದೊಂದಿಗೆ ಹಿಂದೂ ದೇವಾಲಯಗಳನ್ನು ವಿರೂಪಗೊಳಿಸಿರುವ ವಿಷಯವನ್ನು ಭಾರತವು ಅನೇಕ ಸಂದರ್ಭಗಳಲ್ಲಿ ಪ್ರಸ್ತಾಪಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:02 am, Fri, 29 December 23