Earthquake: ಪೂರ್ವ ಟರ್ಕಿಯಲ್ಲಿ 5.5 , ಜಪಾನ್ನಲ್ಲಿ 6.3 ತೀವ್ರತೆಯ ಭೂಕಂಪ
ಪೂರ್ವ ಟರ್ಕಿಯಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಜತೆಗೆ ಜಪಾನ್‌ನ ಕುರಿಲ್ ದ್ವೀಪದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಪೂರ್ವ ಟರ್ಕಿಯಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿದೆ. ಇನ್ನು ಜಪಾನ್‌ನ ಕುರಿಲ್ ದ್ವೀಪದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. NCS ಪ್ರಕಾರ, ಭೂಕಂಪವು ಮಧ್ಯಾಹ್ನ 2:45 ಕ್ಕೆ (IST) 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು 44.36 ಅಕ್ಷಾಂಶ ಮತ್ತು 149.23 ರೇಖಾಂಶದಲ್ಲಿ ಕಂಡುಬಂದಿದೆ ಎಂದು NCS ಹೇಳಿದೆ. ಇದುವರೆಗೂ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.
Published On - 3:22 pm, Thu, 28 December 23