ಕಾರಿನಲ್ಲಿ ವಾಂತಿ ಮಾಡಿ, ನನ್ನಿಂದಲೇ ಕ್ಲೀನ್ ಮಾಡಿಸಿದರು; ಭಾರತೀಯರ ಬಗ್ಗೆ ಸಿಂಗಾಪುರ ಕ್ಯಾಬ್ ಚಾಲಕ ಆರೋಪ

ಸಿಂಗಾಪುರದಲ್ಲಿ ಇಬ್ಬರು ಭಾರತೀಯ ಪ್ರಯಾಣಿಕರು ಕ್ಯಾಬ್​​ನಲ್ಲಿ ವಾಂತಿ ಮಾಡಿದ್ದಲ್ಲದೆ ಅದನ್ನು ಡ್ರೈವರ್ ಸ್ವಚ್ಛ ಮಾಡಬೇಕೆಂದು ಒತ್ತಾಯಿಸಿ ಹೈಡ್ರಾಮಾ ಸೃಷ್ಟಿಸಿದ್ದಾರೆ. ಕ್ಯಾಬ್ ಗಲೀಜಾಗಿದ್ದಕ್ಕೆ ಆ ಚಾಲಕನಿಗೆ ಪರಿಹಾರವನ್ನೂ ನೀಡಿಲ್ಲ. ಕೊನೆಗೆ ಚಾಲಕನೇ ಆ ಗಲೀಜನ್ನು ಕ್ಲೀನ್ ಮಾಡಿದ್ದಾನೆ. ಈ ವೇಳೆ ಅವರಿಬ್ಬರೂ ಕುಡಿದ ಮತ್ತಿನಲ್ಲಿ ಆತನಿಗೆ ಭಿಕ್ಷುಕ ಎಂದು ಗೇಲಿ ಮಾಡಿದ್ದಾರೆ. ಈ ಬಗ್ಗೆ ಕ್ಯಾಬ್ ಚಾಲಕ ವಿಡಿಯೋ, ಫೋಟೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ.

ಕಾರಿನಲ್ಲಿ ವಾಂತಿ ಮಾಡಿ, ನನ್ನಿಂದಲೇ ಕ್ಲೀನ್ ಮಾಡಿಸಿದರು; ಭಾರತೀಯರ ಬಗ್ಗೆ ಸಿಂಗಾಪುರ ಕ್ಯಾಬ್ ಚಾಲಕ ಆರೋಪ
Cab Driver

Updated on: Dec 22, 2025 | 4:20 PM

ನವದೆಹಲಿ, ಡಿಸೆಂಬರ್ 22: ಸಿಂಗಾಪುರದ (Singapore) ಕ್ಯಾಬ್ ಚಾಲಕನೊಬ್ಬ ಇಬ್ಬರು ಭಾರತೀಯ ಪ್ರಯಾಣಿಕರು ತನ್ನ ಕಾರಿನೊಳಗೆ ವಾಂತಿ ಮಾಡಿ, ಆ ಗಲೀಜನ್ನು ಸ್ವಚ್ಛಗೊಳಿಸುವಂತೆ ತನಗೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾನೆ. ಆ ಚಾಲಕ ನಿನ್ನೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ಘಟನೆಯನ್ನು ವಿವರಿಸಿದ್ದು, ಅವರಿಬ್ಬರೂ ಬಲವಂತವಾಗಿ ಆ ವಾಂತಿಯನ್ನು ಸ್ವಚ್ಛಗೊಳಿಸಲು ಹೇಳಿದರು ಎಂದು ಪೋಸ್ಟ್ ಮಾಡಿದ್ದಾರೆ.

ಕ್ಯಾಬ್ ಚಾಲಕ ಲೂ ಸ್ಯಾಮ್ ಎಂಬಾತ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಡಿಸೆಂಬರ್ 21ರಂದು ಇಬ್ಬರು ಭಾರತೀಯ ಪುರುಷರು ತನ್ನ ಕ್ಯಾಬ್ ಅನ್ನು ಬುಕ್ ಮಾಡಿದ್ದರು ಎಂದು ಹೇಳಿದ್ದಾನೆ. ಅವರು ಕಂಠಪೂರ್ತಿ ಕುಡಿದಿದ್ದರು. ನಂತರ ಕಾರಿನೊಳಗೆ ವಾಂತಿ ಮಾಡಿದರು. ಆ ಗಲೀಜನ್ನು ನಾನೇ ಕ್ಲೀನ್ ಮಾಡಬೇಕೆಂದು ಒತ್ತಾಯಿಸಿ ನನ್ನ ಕೈಯಲ್ಲೇ ಎಲ್ಲವನ್ನೂ ಸ್ವಚ್ಛ ಮಾಡಿಸಿದರು. ನನ್ನನ್ನು ಭಿಕ್ಷುಕ ಎಂದು ಅಪಹಾಸ್ಯ ಮಾಡಿದರು ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾನೆ.

ಇದನ್ನೂ ಓದಿ: ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಭೀಕರ ಬಸ್ ಅಪಘಾತ, 15 ಮಂದಿ ಸಾವು

50ರ ಹರೆಯದ ಸ್ಯಾಮ್, ಡಿಸೆಂಬರ್ 21ರ ಬೆಳಗಿನ ಜಾವ ಇಬ್ಬರು ಪ್ರಯಾಣಿಕರನ್ನು ಕರೆದುಕೊಂಡು ಹೋಗಿದ್ದಾಗ ಈ ಘಟನೆ ನಡೆದಿದೆ. ವಾಂತಿಯನ್ನು ಸ್ವಚ್ಛಗೊಳಿಸಲು ಕನಿಷ್ಠ 45 ನಿಮಿಷಗಳು ಬೇಕಾಯಿತು. ಇದರಿಂದ ಆದಾಯವೂ ಕಡಿಮೆಯಾಯಿತು. ಬೇರೆ ಪ್ರಯಾಣಿಕರನ್ನು ಕರೆದೊಯ್ಯುವಂತಿರಲಿಲ್ಲ. ಕ್ಯಾಬ್ ಅಷ್ಟು ವಾಸನೆ ಬರುತ್ತಿತ್ತು ಎಂದು ಆ ಚಾಲಕ ಹೇಳಿದ್ದಾನೆ. ಇಷ್ಟೇ ಅಲ್ಲದೆ, ಅವರಿಬ್ಬರೂ ಕ್ಯಾಬ್​ ಚಾರ್ಜನ್ನು ಕೂಡ ಪೂರ್ತಿಯಾಗಿ ನೀಡಿಲ್ಲ ಎನ್ನಲಾಗಿದೆ.

ತನ್ನ 7 ಜನರ ಕುಟುಂಬವನ್ನು ಪೋಷಿಸಲು ಸ್ಯಾಮ್ ಟ್ಯಾಕ್ಸಿ ಡ್ರೈವರ್ ಆಗ ಕೆಲಸ ಮಾಡುತ್ತಿದ್ದ. ಕಂಫರ್ಟ್‌ಕ್ಯಾಬ್ ಪ್ರಿಯಸ್ ಹೈಬ್ರಿಡ್ ಓಡಿಸುವ ಸ್ಯಾಮ್​​ ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಟ್ಯಾಕ್ಸಿ ಡ್ರೈವರ್ ಆಗಿದ್ದಾರೆ. ಕ್ಯಾಬ್ ಅನ್ನು ಗಲೀಜು ಮಾಡಿದ್ದಕ್ಕೆ ಹಣ ಕೇಳಿದರೆ 10 ರೂ. ನೀಡಿ ಅವಮಾನ ಮಾಡಿದರು ಎಂದು ಚಾಲಕ ಹೇಳಿದ್ದಾನೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ