Spirit Airlines: ವಿಮಾನದ ಫ್ಲೋರ್​ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ ಮಹಿಳೆ

|

Updated on: Jul 23, 2023 | 1:18 PM

ಕಳೆದ ಕೆಲವು ತಿಂಗಳುಗಳಿಂದ ವಿಮಾನದಲ್ಲಿ ಅಸಭ್ಯ ವರ್ತನೆ ಪ್ರಕರಣಗಳು ಸಾಮಾನ್ಯವಾಗಿವೆ. ಪ್ರಯಾಣಿಕರೊಬ್ಬರು ಮತ್ತೊಂದು ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸಿದ್ದು, ವಿಮಾನದಲ್ಲಿ ಮಹಿಳೆಗೆ ಚೇಳು ಕಚ್ಚಿದ್ದ ಘಟನೆ ನಡೆದಿತ್ತು.

Spirit Airlines: ವಿಮಾನದ ಫ್ಲೋರ್​ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ ಮಹಿಳೆ
ಸ್ಪಿರಿಟ್ ಏರ್​ಲೈನ್ಸ್​
Image Credit source: NDTV
Follow us on

ಕಳೆದ ಕೆಲವು ತಿಂಗಳುಗಳಿಂದ ವಿಮಾನದಲ್ಲಿ ಅಸಭ್ಯ ವರ್ತನೆ ಪ್ರಕರಣಗಳು ಸಾಮಾನ್ಯವಾಗಿವೆ. ಪ್ರಯಾಣಿಕರೊಬ್ಬರು ಮತ್ತೊಂದು ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸಿದ್ದು, ವಿಮಾನದಲ್ಲಿ ಮಹಿಳೆಗೆ ಚೇಳು ಕಚ್ಚಿದ್ದ ಘಟನೆ ನಡೆದಿತ್ತು. ಇದೀಗ ಮಹಿಳೆಯೊಬ್ಬರು ವಿಮಾನದ ಫ್ಲೋರ್​ನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ವಿಮಾನ ಸಿಬ್ಬಂದಿ ಕೆಲವು ಗಂಟೆಗಳ ಕಾಲ ವಾಶ್​ರೂಂಗೆ ಹೋಗುವುದನ್ನು ತಡೆದಿದ್ದರು, ಗಂಟೆ ಗಟ್ಟಲೆ ಕಾದು ತಡೆದುಕೊಳ್ಳಲಾಗದೆ ಈ ಹೆಜ್ಜೆ ಇಡಬೇಕಾಯಿತು ಎಂದು ಮಹಿಳಾ ಪ್ರಯಾಣಿಕರು ತಿಳಿಸಿದ್ದಾರೆ.

ವ್ಯೂ ಫ್ರಂ ದಿ ವಿಂಗ್ ವರದಿಯ ಪ್ರಕಾರ, ಯುಎಸ್ ಮೂಲದ ಸ್ಪಿರಿಟ್ ಏರ್​ಲೈನ್ಸ್​ ನಿರ್ವಹಿಸುವ ವಿಮಾನದಲ್ಲಿ ಈ ಘಟನೆ ನಡೆದಿದೆ.

ಮತ್ತಷ್ಟು ಓದಿ: Air India: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನ

ಇಂತಹ ಘಟನೆಗಳು ನಡೆದಿರುವುದು ಮೊದಲಲ್ಲ, 2018ರಲ್ಲಿ ವಿಮಾನದಲ್ಲಿ ಇಂಧನ ತುಂಬುತ್ತಿರುವಾಗ ಶೌಚಾಲಯವನ್ನು ಬಳಸಲು ಸಾಧ್ಯವಿಲ್ಲ ಎಂದು ಹೇಳಿದಾಗ, ಪ್ರಯಾಣಿಕರೊಬ್ಬರು ವಿಮಾನ್ ಫ್ಲೋರ್​ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ್ದರು.

ಇದು ಅಸಹ್ಯಕರವಾದದ್ದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ, ಹಾಗೆಯೇ ನನ್ನ ಬೆಕ್ಕು ಕೂಡ ಇವರಿಗಿಂತ ಸ್ವಚ್ಛವಾಗಿದೆ, ಸ್ವಚ್ಛಗೊಳಿಸುವವರೆಗೆ ತಾಳ್ಮೆಯಿಂದ ಕಾಯುತ್ತದೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಇದುವರೆಗೂ ಸ್ಪಿರಿಟ್ ಏರ್​ಲೈನ್ಸ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ