ಶ್ರೀಲಂಕಾದಲ್ಲಿ ಸಿಕ್ಕಾಕ್ಕೊಂಡಿದ್ದ ಪ್ರವಾಸಿಗರ ನೆರವಿಗೆ ಕೆಫೆ ಮಾಲೀಕನೊಬ್ರು ಧಾವಿಸಿದ್ದಾರೆ. ಮ್ಯಾಜಿಕಲ್ ವಾಟರ್ ಫಾಲ್ಸ್ ಮತ್ತು ಪವರ್ತ ವಿಕ್ಷಣೆಗೆ ಬಂದು ಪ್ರವಾಸಿಗರು ಸಿಕ್ಕಕ್ಕೊಂಡಿದ್ರು. ಎಲ್ಲೆಡೆ ಲಾಕ್ಡೌನ್ ಮಾಡಿದ್ರಿಂದ ವಾಪಸ್ ಹೋಗಲಾಗದೇ ಪ್ರವಾಸಿಗರು ಪರದಾಡ್ತಿದ್ರು, ಈ ವಿಚಾರ ಗೊತ್ತಾಗಿ ಕೆಫೆ ಮಾಲೀಕರ ದರ್ಶನಾ ರತ್ನಾಯಕೆ ನೆರವಿಗೆ ಧಾವಿಸಿದ್ದು, ಊಟ, ನೀರಿನ ವ್ಯವಸ್ಥೆ ಮಾಡಿ ಸಹಾಯ ಮಾಡ್ತಿದ್ದಾರೆ.
67 ಲಕ್ಷ ಜನರಿಗೆ ಕೊರೊನಾ
ಜಗತ್ತಿನಾದ್ಯಂತ ವೈರಸ್ ಕ್ರೌರ್ಯ ಮೆರೆಯುತ್ತಿದ್ದು, ಇದುವರೆಗೆ ವಿಶ್ವದಾದ್ಯಂತ 67 ಲಕ್ಷದ 5 ಸಾವಿರ ಜನರಿಗೆ ವೈರಸ್ ವಕ್ಕರಿಸಿದೆ. ಇದಿಷ್ಟೇ ಅಲ್ದೆ, 3 ಲಕ್ಷ 93 ಸಾವಿರಕ್ಕೂ ಹೆಚ್ಚು ಜನರ ಉಸಿರು ನಿಲ್ಲಿಸಿದೆ. 32 ಲಕ್ಷದ 53 ಸಾವಿರ ಜನರು ಸೋಂಕು ಗೆದ್ದು ಬಂದಿದ್ದಾರೆ.
ಶೇ.20ರಷ್ಟು ಉದ್ಯೋಗ ಕಡಿತ
ಇಡೀ ಭೂಮಂಡಲವನ್ನೇ ನಡುಗಿಸುತ್ತಿರೋ ಕೊರೊನಾ ಕ್ರೌರ್ಯಕ್ಕೆ ಅಮೆರಿಕ ಫುಲ್ ಶೇಕ್ ಆಗಿದೆ. ಕೊರೊನಾ ಅಟ್ಟಹಾಸಕ್ಕೆ ಅಮೆರಿಕದಲ್ಲಿ ಉದ್ಯೋಗಿಗಳಿಗೆ ಭಾರಿ ಹೊಡೆತ ಬಿದ್ದಿದೆ. ಯಾಕಂದ್ರೆ, ಮೇ ಅಂತ್ಯಕ್ಕೆ ಅಮೆರಿಕದಲ್ಲಿ ಶೇಕಡಾ 20ರಷ್ಟು ಉದ್ಯೋಗ ಕಡಿತ ಮಾಡಲಾಗಿದೆ. ಇದು 2ನೇ ವಿಶ್ವದ ಯುದ್ಧ ಬಳಿಕ ಅತಿ ಹೆಚ್ಚು ಉದ್ಯೋಗ ಕಡಿತಕ್ಕೆ ಸಾಕ್ಷಿಯಾಗಿದೆ.
‘ಸೋಂಕಿಗೆ ಸದ್ಯಕ್ಕೆ ಲಸಿಕೆ ಇಲ್ಲ’
ವಿಶ್ವ ಆರೋಗ್ಯ ಸಂಸ್ಥೆ ಶಾಕಿಂಗ್ ಸುದ್ದಿ ಹೇಳಿದೆ.. ಕೊರೊನಾ ಸೋಂಕಿಗೆ ಸದ್ಯಕ್ಕೆ ಯಾವುದೇ ಲಸಿಕೆ ಇಲ್ಲ ಅಂತಾ ಹೇಳಿದೆ. ಈ ಬಗ್ಗೆ ಮಾತನಾಡಿರೋ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಅಂಟೋನಿಯೋ ಗುಟೆರಸ್, ಲಸಿಕೆ ಅಭಿವೃದ್ಧಿ ಪಡಿಸಲು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ವಿರುದ್ಧ ಹೋರಾಟಕ್ಕೆ ಲಸಿಕೆ ಮಾತ್ರ ಸಾಕಾಗಲ್ಲ. ಸೋಂಕಿನ ವಿರುದ್ಧ ಹೋರಾಡಲು ಜಾಗತಿಕ ಒಗ್ಗಟ್ಟಿನ ಅಗತ್ಯ ಅಂತಾ ಕರೆ ನೀಡಿದ್ದಾರೆ.
ಕಪ್ಪು ವರ್ಣೀಯ ‘ಕಿಚ್ಚು’..!
ಕಪ್ಪು ವರ್ಣೀಯರಿಗೆ ಬೆಂಬಲ ಸೂಚಿಸಿ ಆಸ್ಟ್ರೀಯಾದ ವಿಯೇನ್ನಾದಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಪ್ರೊಟೆಸ್ಟ್ ಮಾಡಿದ್ರು. ಇತ್ತೀಚೆಗೆ ಅಮೆರಿಕದಲ್ಲಿ ಕಪ್ಪು ವಣೀರ್ಯ ವ್ಯಕ್ತಿಯನ್ನ ಪೊಲೀಸರು ಸಾಯಿಸಿದ್ರು. ಇದನ್ನು ಖಂಡಿಸಿ ಸಾವಿರಾರು ಜನರು ಹೋರಾಟ ಮಾಡಿದ್ದು, ವರ್ಣಭೇದ ನೀತಿ ಆಸ್ಟ್ಟೀಯಾ ಸೇರಿ ಜಗತ್ತಿನಾದ್ಯಂತ ಇದೆ. ನಾವು ಇದನ್ನ್ನ ಸ್ಟಾಪ್ ಮಾಡಿಯೇ ತೀರುತ್ತೇವೆ ಅಂತಾ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ರು.
‘ವರ್ಣಬೇಧ ನೀತಿ ಭಯಾನಕ’
ಅಮೆರಿಕದಲ್ಲಿ ನಡೆದ ಕಪ್ಪು ವರ್ಣೀಯನ ಹತ್ಯೆಯನ್ನ ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಖಂಡಿಸಿದ್ದಾರೆ. ಈ ಹತ್ಯೆ ವರ್ಣಬೇಧ ನೀತಿ ಎಷ್ಟು ಭಯಾನಕವಾದದ್ದು ಅನ್ನೋದನ್ನು ತಿಳಿಸುತ್ತೆ.. ಅಮೆರಿಕದ ಸಾಮಾಜಕತೆ ದ್ರುವೀಕರಣಗೊಂಡಿದೆ ಅಂತಲೂ ಏಂಜೆಲಾ ಮರ್ಕೆಲ್ ಹೇಳಿದ್ದಾರೆ.
ವಿಮಾನ ಸ್ಯಾನಿಟೈಸ್
ಇಟಲಿಯಲ್ಲಿ ಸಾವಿನ ಕೇಕೆ ಹಾಕಿದ ಬಳಿಕ ಕ್ರೂರಿ ಕೊರೊನಾ ವೈರಸ್ ಆರ್ಭಟ ಕೊಂಚ ತಗ್ಗಿದೆ. ಇದ್ರಿಂದಾಗಿ ಎಲ್ಲ ಕ್ಷೇತ್ರಗಳ ಕಾರ್ಯಾರಂಭ ಮಾಡಿವೆ. ಈಗಾಗ್ಲೇ ದೇಶಿಯ ವಿಮಾನಗಳು ಹಾರಾಟ ನಡೆಸಿದ್ದು, ಮುಂಜಾಗ್ರತಾ ಕ್ರಮವಾಗಿ ರೋಮ್ನಲ್ಲಿ ವಿಮಾನವನ್ನು ಸ್ಯಾನಿಟೈಸ್ ಮಾಡಲಾಯ್ತು. ರೂಮ್ ಏರ್ಪೋರ್ಟ್ ಸಿಬ್ಬಂದಿ, ವಿಮಾನದೊಳಗೆ ಸ್ಯಾನಿಟೈಸರ್ ಸಿಂಪಡಿಸಿ ಸ್ವಚ್ಛತೆ ಮಾಡಿದ್ರು.
ಮೆಕ್ಸಿಕೋದಲ್ಲಿ ದಾಖಲೆಯ ಸಾವು!
ಉತ್ತರ ಅಮೆರಿಕದ ಮೆಕ್ಸಿಕೋ ದೇಶದಲ್ಲಿ ಕೊರೊನಾ ವೈರಸ್ ರೌದ್ರಾವತಾರ ಹೆಚ್ಚಾಗಿದೆ. ನಿನ್ನೆ ಒಂದೇ ದಿನದಲ್ಲಿ 1092 ಜನರು ಡೆಡ್ಲಿ ವೈರಸ್ಗೆ ಬಲಿಯಾಗಿದ್ದಾರೆ. ಈ ಸಾವಿನ ಸಂಖ್ಯೆ ಈವರೆಗೆ ದಾಖಲಾಗಿದ್ದ ಸಂಖ್ಯೆಯನ್ನ ಮೀರಿಸಿದೆ. ಮೆಕ್ಸಿಕೋದಲ್ಲಿ ಇದುವರೆಗೆ 12 ಸಾವಿರದ 500ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, 1ಲಕ್ಷದ 5 ಸಾವಿರ ಜನರಿಗೆ ಸೋಂಕು ದಾಳಿ ಮಾಡಿದೆ.
ರೆಸ್ಟೋರೆಂಟ್ ಬಾಗಿಲು ಓಪನ್
ಜಪಾನ್ನಲ್ಲಿ ಕೊರೊನಾ ಅಟ್ಟಹಾಸ ತಗ್ಗಿದ್ದು, ದೇಶ ಮೊದಲಿನ ಸ್ಥಿತಿಗೆ ಮರಳುತ್ತಿದೆ. ಬಹುತೇಕ ಆರ್ಥಿಕ ಚಟುವಟಿಕೆಗಳು ಪುನಾರಂಭವಾಗಿವೆ.. ಬಂದ್ ಆಗಿದ್ದು ರೆಸ್ಟೋರೆಂಟ್ ಬಾಗಿಲು ಕೂಡ ತೆರೆದಿದ್ದು, ಗ್ರಾಹಕರು ಕೂಡ ಎಂಟ್ರಿ ಕೊಡುತ್ತಿದ್ದಾರೆ. ಕೊರೊನಾ ವೈರಸ್ ತಡೆಗಟ್ಟಲು ಬೇಕಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಫುಡ್ ಆರ್ಡರ್ ಮಾಡಿ ಟೇಸ್ಟ್ ಮಾಡ್ತಿದ್ದಾರೆ.
Published On - 6:32 pm, Fri, 5 June 20