ಕೊಲಂಬೊ, ನವೆಂಬರ್ 15: ಶ್ರೀಲಂಕಾದ ಸಂಸತ್ ಚುನಾವಣೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ್ ದಿಸ್ಸಾನಾಯಕೆ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪವರ್ ಪಾರ್ಟಿ (ಎನ್‌ಪಿಪಿ) ಭಾರಿ ಬಹುಮತ ಪಡೆದಿದೆ. ಮಾಜಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಬೆಂಬಲಿತ ಪ್ರಮುಖ ವಿರೋಧ ಪಕ್ಷ ಸಮಗಿ ಜನ ಬಲವೇಗಯ (ಎಸ್‌ಜೆಬಿ) ಮತ್ತು ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ (ಎನ್‌ಡಿಎಫ್) ಕ್ರಮವಾಗಿ 11 ಮತ್ತು 5 ಪ್ರತಿಶತ ಮತಗಳನ್ನು ಪಡೆದಿವೆ. NPP ದಕ್ಷಿಣ ಪ್ರಾಂತ್ಯದ ರಾಜಧಾನಿ ಗಾಲೆಯಲ್ಲಿ 70 ಪ್ರತಿಶತಕ್ಕಿಂತ ಹೆಚ್ಚು ಮತಗಳೊಂದಿಗೆ ನಿರ್ಣಾಯಕ ವಿಜಯವನ್ನು ಗಳಿಸಿತು.
65 ರಷ್ಟು ಮತದಾನ ನಡೆದಿದೆ
ಶ್ರೀಲಂಕಾವು 21 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ ಮತ್ತು 17 ಮಿಲಿಯನ್‌ಗಿಂತಲೂ ಹೆಚ್ಚು ಮತದಾರರನ್ನು ಹೊಂದಿದೆ. ಸಂಸತ್ತಿನ ಚುನಾವಣೆಯು ಐದು ವರ್ಷಗಳ ಅವಧಿಗೆ ನಡೆಯುತ್ತದೆ.
ಗುರುವಾರ ಶ್ರೀಲಂಕಾದಲ್ಲಿ ಶೇ.65ರಷ್ಟು ಮತದಾನ ನಡೆದಿದ್ದು, ಇದೀಗ ಫಲಿತಾಂಶವೂ ಹೊರಬಿದ್ದಿದೆ. ಶ್ರೀಲಂಕಾ ಸಂಸತ್ತಿನಲ್ಲಿ 225 ಸ್ಥಾನಗಳಿವೆ ಮತ್ತು ಬಹುಮತಕ್ಕೆ 113 ಸ್ಥಾನಗಳನ್ನು ಗೆಲ್ಲುವುದು ಅವಶ್ಯಕ. ಎರಡು ತಿಂಗಳ ಹಿಂದೆ ಸೆಪ್ಟೆಂಬರ್‌ನಲ್ಲಿ ಇಲ್ಲಿ ಅಧ್ಯಕ್ಷರ ಚುನಾವಣೆ ನಡೆದಿತ್ತು.
ಆರ್ಥಿಕ ಬಿಕ್ಕಟ್ಟಿನ ನಂತರ ಮೊದಲ ಸಂಸತ್ ಚುನಾವಣೆ
2022 ರ ಆರ್ಥಿಕ ಬಿಕ್ಕಟ್ಟಿನ ನಂತರ, ಶ್ರೀಲಂಕಾದಲ್ಲಿ ಮೊದಲ ಬಾರಿಗೆ ಸಂಸತ್ತಿನ ಚುನಾವಣೆಗಳು ನಡೆದಿವೆ. ತೀವ್ರ ಆರ್ಥಿಕ ಹಿಂಜರಿತದ ಕಾರಣ, ಆಗಿನ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರನ್ನು ಅಧಿಕಾರದಿಂದ ತೆಗೆದುಹಾಕಲಾಯಿತು. ಈ ಬಾರಿ ಚುನಾವಣೆಯಲ್ಲಿ 8 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರು. ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಅವರ ಆಡಳಿತ ಪಕ್ಷ ಎನ್‌ಪಿಪಿಗೆ ಸಂಸತ್ ಚುನಾವಣೆ ಅಗ್ನಿಪರೀಕ್ಷೆ ಎಂದು ಪರಿಗಣಿಸಲಾಗಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ