ಬಲೂಚಿಸ್ತಾನದಲ್ಲಿ ನಡೆದ ಸ್ಫೋಟದಲ್ಲಿ ಪಾಕಿಸ್ತಾನದ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಪ್ರತಿಮೆ ಧ್ವಂಸ

ನಿಷೇಧಿತ ಉಗ್ರ ಸಂಘಟನೆ ಬಲೂಚ್ ರಿಪಬ್ಲಿಕನ್ ಆರ್ಮಿಯ ವಕ್ತಾರ ಬಾಬ್ಗರ್ ಬಲೂಚ್ ಟ್ವಿಟರ್ ನಲ್ಲಿ ಸ್ಫೋಟದ ಹೊಣೆ ಹೊತ್ತುಕೊಂಡಿದ್ದಾರೆ ಎಂದು ಬಿಬಿಸಿ ಉರ್ದು ವರದಿ ಮಾಡಿದೆ. ಈ ವಿಷಯವನ್ನು ಉನ್ನತ ಮಟ್ಟದಲ್ಲಿ ತನಿಖೆ ಮಾಡಲಾಗುತ್ತಿದೆ

ಬಲೂಚಿಸ್ತಾನದಲ್ಲಿ ನಡೆದ ಸ್ಫೋಟದಲ್ಲಿ ಪಾಕಿಸ್ತಾನದ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಪ್ರತಿಮೆ ಧ್ವಂಸ
ಮೊಹಮ್ಮದ್ ಅಲಿ ಜಿನ್ನಾ (ಸಂಗ್ರಹ ಚಿತ್ರ)
ರಶ್ಮಿ ಕಲ್ಲಕಟ್ಟ

Updated on: Sep 27, 2021 | 4:20 PM

ಗ್ವಾದರ್: ಪಾಕಿಸ್ತಾನದ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ(Mohammad Ali Jinnah) ಅವರ ಪ್ರತಿಮೆಯನ್ನು ಬಲೂಚ್ ಉಗ್ರಗಾಮಿಗಳು ಬಾಲುಚಿಸ್ತಾನ ಪ್ರಾಂತ್ಯದ (Balochistan province) ಕರಾವಳಿ ನಗರವಾದ ಗ್ವಾದರ್​​ನಲ್ಲಿ ಬಾಂಬ್ ದಾಳಿಯಲ್ಲಿ ಧ್ವಂಸಗೊಳಿಸಿದ್ದಾರೆ. ಜೂನ್ ತಿಂಗಳಲ್ಲಿ ಮೆರೈನ್ ಡ್ರೈವ್‌ನಲ್ಲಿ ಸ್ಥಾಪಿಸಲಾದ ಪ್ರತಿಮೆಯನ್ನು ಸುರಕ್ಷಿತ ವಲಯವೆಂದು ಪರಿಗಣಿಸಲಾಗಿತ್ತು. ಆದರೆ ಭಾನುವಾರ ಬೆಳಿಗ್ಗೆ ಪ್ರತಿಮೆಯ ಕೆಳಗೆ ಇರಿಸಲಾದ ಸ್ಫೋಟಕಗಳಿಂದ ಸ್ಫೋಟಿಸಲಾಗಿದೆ ಎಂದು ಡಾನ್ ಪತ್ರಿಕೆ ಸೋಮವಾರ ವರದಿ ಮಾಡಿದೆ. ಸ್ಫೋಟದಲ್ಲಿ ಪ್ರತಿಮೆ ಸಂಪೂರ್ಣವಾಗಿ ನಾಶವಾಗಿದೆ ಎಂದು ಅದು ಹೇಳಿದೆ.

ನಿಷೇಧಿತ ಉಗ್ರ ಸಂಘಟನೆ ಬಲೂಚ್ ರಿಪಬ್ಲಿಕನ್ ಆರ್ಮಿಯ ವಕ್ತಾರ ಬಾಬ್ಗರ್ ಬಲೂಚ್ ಟ್ವಿಟರ್ ನಲ್ಲಿ ಸ್ಫೋಟದ ಹೊಣೆ ಹೊತ್ತುಕೊಂಡಿದ್ದಾರೆ ಎಂದು ಬಿಬಿಸಿ ಉರ್ದು ವರದಿ ಮಾಡಿದೆ. ಈ ವಿಷಯವನ್ನು ಉನ್ನತ ಮಟ್ಟದಲ್ಲಿ ತನಿಖೆ ಮಾಡಲಾಗುತ್ತಿದೆ ಎಂದು ಗ್ವಾದರ್ ಉಪ ಆಯುಕ್ತ ಮೇಜರ್ (ನಿವೃತ್ತ) ಅಬ್ದುಲ್ ಕಬೀರ್ ಖಾನ್ ಹೇಳಿರುವುದಾಗಿ ಬಿಬಿಸಿ ಉರ್ದು ಹೇಳಿದೆ.

ಸ್ಫೋಟಕಗಳನ್ನು ಇರಿಸಿ ಜಿನ್ನಾ ಪ್ರತಿಮೆಯನ್ನು ಧ್ವಂಸ ಮಾಡಿದ ಉಗ್ರರು ಈ ಪ್ರದೇಶವನ್ನು ಪ್ರವಾಸಿಗರಾಗಿ ಪ್ರವೇಶಿಸಿದರು ಎಂದು ಅವರು ಹೇಳಿದ್ದಾರೆ. ಖಾನ್ ಪ್ರಕಾರ, ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಆದರೆ ತನಿಖೆ ಒಂದು ಅಥವಾ ಎರಡು ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. “ನಾವು ಈ ವಿಷಯವನ್ನು ಎಲ್ಲಾ ಕೋನಗಳಿಂದ ನೋಡುತ್ತಿದ್ದೇವೆ ಮತ್ತು ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು” ಎಂದು ಅವರು ಹೇಳಿದರು.

” ಗ್ವಾದರ್‌ನಲ್ಲಿರುವ ಕ್ವಾಯ್ದ್-ಎ-ಅಜಮ್ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಪಾಕಿಸ್ತಾನದ ಐಡಿಯಾಲಜಿಯ ಮೇಲೆ ದಾಳಿಯಾಗಿದೆ. ಜಿಯಾರತ್‌ನಲ್ಲಿರುವ ಕ್ವಾಯ್ದ್-ಎ-ಅಜಮ್ ರೆಸಿಡೆನ್ಸಿಯ ಮೇಲೆ ದಾಳಿ ಮಾಡಿದವರಂತೆಯೇ ಶಿಕ್ಷೆ ನೀಡುವಂತೆ ನಾನು ಅಧಿಕಾರಿಗಳಿಗೆ ವಿನಂತಿಸುತ್ತೇನೆ ಎಂದು ಬಲೂಚಿಸ್ತಾನದ ಮಾಜಿ ಗೃಹ ಸಚಿವ ಮತ್ತು ಪ್ರಸ್ತುತ ಸೆನೆಟರ್ ಸರ್ಫ್ರಾಜ್ ಬುಗ್ತಿ ಟ್ವೀಟ್ ಮಾಡಿದ್ದಾರೆ.

2013ರಲ್ಲಿ ಬಲೂಚ್ ಉಗ್ರಗಾಮಿಗಳು ಜಿಯಾರತ್‌ನಲ್ಲಿ ಜಿನ್ನಾ ಬಳಸುತ್ತಿದ್ದ 121 ವರ್ಷಗಳ ಹಳೆಯ ಕಟ್ಟಡವನ್ನು ಸ್ಫೋಟಿಸಿದರು ಮತ್ತು ಅದನ್ನು ಗುಂಡಿನಿಂದ ಹೊಡೆದರು. ನಾಲ್ಕು ಗಂಟೆಗಳ ಕಾಲ ಬೆಂಕಿ ಉರಿಸಿ, ಪೀಠೋಪಕರಣಗಳು ಮತ್ತು ಸ್ಮರಣಿಕೆಗಳನ್ನು ನಾಶಪಡಿಸಿದರು. ಜಿನ್ನಾ ಕ್ಷಯರೋಗದಿಂದ ಬಳಲುತ್ತಿದ್ದರಿಂದ ಅವರ ಜೀವನದ ಕೊನೆಯ ದಿನಗಳನ್ನು ಅಲ್ಲಿ ಕಳೆದರು. ನಂತರ ಇದನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಯಿತು.

ಡಿಸೆಂಬರ್ 25, 1876 ರಂದು ಜನಿಸಿದ ಜಿನ್ನಾ, 1913 ರಿಂದ ಆಗಸ್ಟ್ 14, 1947 ರಂದು ಪಾಕಿಸ್ತಾನದ ರಚನೆಯಾಗುವವರೆಗೂ ಅಖಿಲ ಭಾರತ ಮುಸ್ಲಿಂ ಲೀಗ್‌ನ ನಾಯಕರಾಗಿ ಸೇವೆ ಸಲ್ಲಿಸಿದರು. ನಂತರ ಅವರು 1948 ರಲ್ಲಿ ಸಾಯುವವರೆಗೂ ಪಾಕಿಸ್ತಾನದ ಮೊದಲ ಗವರ್ನರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಬಲೂಚಿಸ್ತಾನದಲ್ಲಿ ಹಲವು ವರ್ಷಗಳಿಂದ ಹಿಂಸಾಚಾರ ಕಡಿಮೆ ಆಗಿದೆ.

ಇದನ್ನೂ ಓದಿ: PM Modi Speech: ಅಫ್ಘಾನ್ ಭೂಮಿಯನ್ನು ಭಯೋತ್ಪಾದನೆಗೆ ಬಳಸಿಕೊಳ್ಳಬೇಡಿ; ಪಾಕಿಸ್ತಾನ, ಚೀನಾಗೆ ಪ್ರಧಾನಿ ಮೋದಿ ಎಚ್ಚರಿಕೆ
(Statue of Pakistan’s founder Mohammad Ali Jinnah destroyed by the Baloch militants in a bomb attack)

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us