ಮಗುವಿನ ನಿರೀಕ್ಷೆಯಲ್ಲಿ ಶರ್ಮಿಳಾ, ಖುಷಿ ಸುದ್ದಿ ಹಂಚಿಕೊಂಡ ನಟಿ
ನಟಿ ಶರ್ಮಿಳಾ ಮಾಂಡ್ರೆ ಮತ್ತು ತಮಿಳು ಸಿನಿಮಾ ನಿರ್ಮಾಪಕ ಸುಂದರನ್ ಅವರು ನಾಲ್ಕು ತಿಂಗಳ ಹಿಂದೆ ಜುಲೈ 12 ರಂದು ರಾಜಸ್ಥಾನದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಇದೀಗ ನಟಿ ಶರ್ಮಿಳಾ ಮಾಂಡ್ರೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ನಟಿ. ಶರ್ಮಿಳಾ ಪೋಸ್ಟ್ಗೆ ಹಲವು ಸೆಲೆಬ್ರಿಟಿಗಳು ಶುಭಾಶಯ ಕೋರಿದ್ದಾರೆ.
Updated on: Nov 15, 2026 | 7:02 PM

ನಟಿ ಶರ್ಮಿಳಾ ಮಾಂಡ್ರೆ ಮತ್ತು ತಮಿಳು ಸಿನಿಮಾ ನಿರ್ಮಾಪಕ ಸುಂದರನ್ ಅವರು ನಾಲ್ಕು ತಿಂಗಳ ಹಿಂದೆ ಜುಲೈ 12 ರಂದು ರಾಜಸ್ಥಾನದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು.

ಇದೀಗ ನಟಿ ಶರ್ಮಿಳಾ ಮಾಂಡ್ರೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ನಟಿ. ಶರ್ಮಿಳಾ ಪೋಸ್ಟ್ಗೆ ಹಲವು ಸೆಲೆಬ್ರಿಟಿಗಳು ಶುಭಾಶಯ ಕೋರಿದ್ದಾರೆ.

ಕೈ ಬೆರಳುಗಳಿಗೆ ಮಗುವಿನ ಬೂಟುಗಳನ್ನು ಧರಿಸಿ ಫೋಟೊ ಹಾಕಿರುವ ದಂಪತಿ, ‘ಪುಟ್ಟ ಹೆಜ್ಜೆಗಳು’ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ದಂಪತಿಗಳು ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಶರ್ಮಿಳಾ ಮಾಂಡ್ರೆ ಅವರ ಪೋಸ್ಟ್ಗೆ ಹಲವಾರು ಮಂದಿ ಕಮೆಂಟುಗಳನ್ನು ಮಾಡಿ ಶುಭ ಕೋರಿದ್ದಾರೆ.

ಶರ್ಮಿಳಾ ಮತ್ತು ಸುಂದರನ್ ಈ ಇಬ್ಬರ ಮದುವೆಯು ರಾಜಸ್ಥಾನದ ಜೈಪುರದ ಸಮೋದ್ ಅರಮನೆಯಲ್ಲಿ ಭಾರಿ ಅದ್ಧೂರಿಯಾಗಿ ನಡೆದಿತ್ತು. ಅದಕ್ಕೂ ಮುಂಚೆ ಜೂನ್ 25 ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಶ್ಚಿತಾರ್ಥವನ್ನು ಈ ಜೋಡಿ ಮಾಡಿಕೊಂಡಿತ್ತು.

ಕೆಲವು ಚಿತ್ರರಂಗದ ಗಣ್ಯರು ಹಾಗೂ ಎರಡೂ ಕುಟುಂಬಗಳ ಸದಸ್ಯರುಗಳು ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ಮದುವೆಯಾದ ನಾಲ್ಕು ತಿಂಗಳ ಬಳಿಕ ಇದೀಗ ಖುಷಿ ಸುದ್ದಿಯನ್ನು ಜೋಡಿ ಹಂಚಿಕೊಂಡಿದೆ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More



