Taiwan Earthquake: ತೈವಾನ್​ನಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ

ತೈವಾನ್​ನಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ದಕ್ಷಿಣ ಚೀನಾ ಸಮುದ್ರದಲ್ಲಿರುವ ಸಣ್ಣ ದ್ವೀಪವಾದ ತೈವಾನ್​ನಲ್ಲಿ ಭೀಕರ ಭೂಕಂಪದ ಅನುಭವವಾಗಿದೆ. ಭಾನುವಾರ ಬೆಳಗಿನ ಜಾವ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜರ್ಮನ್ ರಿಸರ್ಚ್​ ಸೆಂಟರ್​ ಫಾರ್ ಜಿಯೋಸೈನ್ಸ್​ ಹೇಳಿದೆ.

Taiwan Earthquake: ತೈವಾನ್​ನಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ
ಭೂಕಂಪ

Updated on: Dec 24, 2023 | 8:23 AM

ತೈವಾನ್​ನಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ(Earthquake) ಸಂಭವಿಸಿದೆ. ದಕ್ಷಿಣ ಚೀನಾ ಸಮುದ್ರದಲ್ಲಿರುವ ಸಣ್ಣ ದ್ವೀಪವಾದ ತೈವಾನ್​ನಲ್ಲಿ ಭೀಕರ ಭೂಕಂಪದ ಅನುಭವವಾಗಿದೆ. ಭಾನುವಾರ ಬೆಳಗಿನ ಜಾವ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜರ್ಮನ್ ರಿಸರ್ಚ್​ ಸೆಂಟರ್​ ಫಾರ್ ಜಿಯೋಸೈನ್ಸ್​ ಹೇಳಿದೆ.

ಜನರು ಮನೆಗಳಿಂದ ಹೊರ ಬಂದು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಭೂಕಂಪ 10 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಇಲ್ಲಿಯವರೆಗೆ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಭದ್ರತಾ ದೃಷ್ಟಿಯಿಂದ ಹಳೆಯ ಕಟ್ಟಡಗಳಿಂದ ದೂರ ಇರಲು ತಿಳಿಸಲಾಗಿದೆ. ರಾಜಧಾನಿ ತೈಪೆಯಲ್ಲಿ ಭೂಕಂಪನದ ಅನುಭವವಾಗಿಲ್ಲ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ