ಪೂರ್ವ ತಜಿಕಿಸ್ತಾನದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಸ್ಥಳೀಯ ಕಾಲಮಾನ ಮುಂಜಾನೆ 5:37ರ ಸುಮಾರಿಗೆ ಸುಮಾರು 20.5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಪೂರ್ವ ತಜಿಕಿಸ್ತಾನದಲ್ಲಿ ಗುರುವಾರ 6.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ.
ಭೂಕಂಪದ ಕೇಂದ್ರಬಿಂದುವು ಅಫ್ಘಾನಿಸ್ತಾನ ಮತ್ತು ಚೀನಾದ ಗಡಿಯಲ್ಲಿರುವ ಅರೆ ಸ್ವಾಯತ್ತ ಪೂರ್ವ ಪ್ರದೇಶವಾದ ಗೊರ್ನೊ-ಬದಕ್ಷನ್ ಪ್ರದೇಶದ ಸಮೀಪದಲ್ಲಿದೆ. ಈ ಪ್ರದೇಶವು ವಿರಳ ಜನಸಂಖ್ಯೆಯನ್ನು ಹೊಂದಿದೆ ಮತ್ತು ಎತ್ತರದ ಪಾಮಿರ್ ಪರ್ವತಗಳಿಂದ ಆವೃತವಾಗಿದೆ. ಆರಂಭಿಕ ಭೂಕಂಪದ ಇಪ್ಪತ್ತು ನಿಮಿಷಗಳ ನಂತರ, 5.0-ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಯಾವುದೇ ಸಾವು, ನೋವಿನ ಕುರಿತು ಇನ್ನೂ ವರದಿಯಾಗಿಲ್ಲ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:06 am, Thu, 23 February 23