ಇಂದು ಬೆಳಿಗ್ಗೆ ಪಾಕಿಸ್ತಾನದ ಪಂಜಾಬ್‌ನ ಮಿಯಾನ್‌ವಾಲಿಯಲ್ಲಿರುವ ಪಾಕ್ ವಾಯುನೆಲೆಯ ಮೇಲೆ ಉಗ್ರರು ಹಲವಾರು ಆತ್ಮಾಹುತಿ ಬಾಂಬರ್‌ಗಳು ಸೇರಿದಂತೆ ಭಾರೀ ಶಸ್ತ್ರಸಜ್ಜಿತ ದಾಳಿಯನ್ನು ನಡೆಸಿದ್ದಾರೆ. ಈ ದಾಳಿಯಿಂದ ಮೂವರು ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿದೆ. ದಾಳಿಯ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವದರಿಗಳ ಪ್ರಕಾರ ಈ ದಾಳಿ ಹೊಣೆಯನ್ನು ತೆಹ್ರಿಕ್-ಎ-ಜಿಹಾದ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಇನ್ನು ಈ ಭಯೋತ್ಪಾದಕರು ಪಾಕಿಸ್ತಾನ ವಾಯುನೆಲೆಯ ಭಾಗದಲ್ಲಿ ಸುತ್ತುವರಿದ್ದ ಗೋಡೆಗಳಿಗೆ ಏಣಿಯನ್ನು ಬಳಸಿ ಒಳಗೆ ಬಂದಿದ್ದಾರೆ ಎಂದು ಹೇಳಲಾಗಿದೆ.
ಉಗ್ರರ ಈ ದಾಳಿಯಿಂದ ಪಾಕ್ ವಾಯುನೆಲೆಯಲ್ಲಿರುವ ಯುದ್ಧ ವಿಮಾನಗಳು ಕೂಡ ನಾಶವಾಗಿದೆ ಎಂದು ಕೆಲವೊಂದು ವರದಿಗಳು ತಿಳಿಸಿದೆ. ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಾಕ್ ಸೇನೆ, ಭಯೋತ್ಪಾದಕರು ದಾಳಿ ಮಾಡಿರುವುದು ನಿಜ, ಆದರೆ ಅವರ ದಾಳಿಯನ್ನು ವಿಫಲಗೊಳಿಸಲಾಗಿದೆ. ಸೈನ್ಯದ ಸಮಯಪ್ರಜ್ಞೆ ಮತ್ತು ಉಗ್ರರ ದಾಳಿಗೆ ಪ್ರತಿ ದಾಳಿ ಮಾಡಲಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಸಂಸತ್ ಭವನದ ಮೇಲೆ ಉಗ್ರರ ದಾಳಿ ನಡೆದು 21 ವರ್ಷ; ಭಾರತ-ಪಾಕ್ ಸಂಬಂಧ ಈಗ ಹೇಗಿದೆ?
Terrorists attacked PAF base Mianwali and is ongoing, Ya Allah khair!!#MianWalipic.twitter.com/plGJ0IwWLO
— Tehseen Qasim (@Tehseenqasim) November 4, 2023
ಇನ್ನು ಸೇನೆ ನಡೆಸಿದ ದಾಳಿಯಿಂದ ಮೂವರು ಉಗ್ರರ ಹತ್ಯೆ ಮಾಡಲಾಗಿದೆ. ದಾಳಿಯ ಸಂದರ್ಭದಲ್ಲಿ ಮೂರು ಯುದ್ಧ ವಿಮಾನ ಹಾಗೂ ಇಂಧನ ಬೌಸರ್‌ಗೆ ಸ್ವಲ್ಪ ಹಾನಿಯಾಗಿದೆ. ಇನ್ನು ಉಗ್ರರ ನೆಲೆಯ ಮೇಲೆಯು ದಾಳಿಯನ್ನು ಸೇನೆ ಮಾಡಿದೆ. ಇದರ ಜತೆಗೆ ವಾಯುನೆಲೆಯಲ್ಲಿ ಸಂಪೂರ್ಣ ಕಾರ್ಯಚರಣೆಯನ್ನು ಮಾಡಲಾಗಿದೆ ಎಂದು ಪಾಕ್ ಸೇನೆ ಹೇಳಿದೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ