ಫೇಸ್‌ಬುಕ್‌ ಸ್ಥಾಪಕ ಜುಕರ್‌ ಬರ್ಗ್‌ ಹಿಂದಿಕ್ಕಿ 3ನೇ ಶ್ರೀಮಂತ ಸ್ಥಾನಕ್ಕೇರಿದ ಎಲಾನ್‌ ಮಸ್ಕ್‌

|

Updated on: Sep 01, 2020 | 1:21 PM

ಅಮೆರಿಕದ ಖ್ಯಾತ ಟೆಸ್ಲಾ ಕಂಪನಿಯ ಸಿಇಓ ಎಲಾನ್‌ ಮಸ್ಕ್‌ ಈಗ ಫೇಸ್‌ಬುಕ್‌ ಸ್ಥಾಪಕ ಮಾರ್ಕ್‌ ಜಕರ್‌ಬರ್ಗ್‌ನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತೀ ಶ್ರೀಮಂತ ಬಿಲಿಯನೇರ್‌ ಎನಿಸಿದ್ದಾರೆ. ಹೌದು ವಿಶ್ವದಲ್ಲಿ ಈಗ ಇರುವುದು ಕೇವಲ ನಾಲ್ಕೇ ನಾಲ್ಕು ಬಿಲಿಯನೇರ್‌ ಶ್ರೀಮಂತರು. ಈಗ ಈ ಪ್ರತಿಷ್ಠಿತ ಗುಂಪಿಗೆ ಸೇರುವದಷ್ಟೇ ಅಲ್ಲ, ಫೇಸ್‌ಬುಕ್‌ನ ಮಾರ್ಕ್‌ ಜಕರ್‌ಬರ್ಗ್‌ರನ್ನು ಕೂಡಾ ಹಿಂದಿಕ್ಕಿ ವಿಶ್ವದ ಮೂರನೇ ಶ್ರೀಮಂತರ ಬಿಲಿಯನೇರ್‌ ಅನಿಸಿಕೊಂಡಿದ್ದಾರೆ ಟೆಸ್ಲಾ ಕಂಪನಿಯ ಸ್ಥಾಪಕ ಎಲಾನ್‌ ಮಸ್ಕ್‌. ಎಲಾನ್‌ ಮಸ್ಕ್‌ ಅವರ ಟೆಸ್ಲಾ ಕಂಪನಿಯ ಶೇರುಗಳು […]

ಫೇಸ್‌ಬುಕ್‌ ಸ್ಥಾಪಕ ಜುಕರ್‌ ಬರ್ಗ್‌ ಹಿಂದಿಕ್ಕಿ 3ನೇ ಶ್ರೀಮಂತ ಸ್ಥಾನಕ್ಕೇರಿದ ಎಲಾನ್‌ ಮಸ್ಕ್‌
ಎಲಾನ್​ ಮಸ್ಕ್
Follow us on

ಅಮೆರಿಕದ ಖ್ಯಾತ ಟೆಸ್ಲಾ ಕಂಪನಿಯ ಸಿಇಓ ಎಲಾನ್‌ ಮಸ್ಕ್‌ ಈಗ ಫೇಸ್‌ಬುಕ್‌ ಸ್ಥಾಪಕ ಮಾರ್ಕ್‌ ಜಕರ್‌ಬರ್ಗ್‌ನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತೀ ಶ್ರೀಮಂತ ಬಿಲಿಯನೇರ್‌ ಎನಿಸಿದ್ದಾರೆ.

ಹೌದು ವಿಶ್ವದಲ್ಲಿ ಈಗ ಇರುವುದು ಕೇವಲ ನಾಲ್ಕೇ ನಾಲ್ಕು ಬಿಲಿಯನೇರ್‌ ಶ್ರೀಮಂತರು. ಈಗ ಈ ಪ್ರತಿಷ್ಠಿತ ಗುಂಪಿಗೆ ಸೇರುವದಷ್ಟೇ ಅಲ್ಲ, ಫೇಸ್‌ಬುಕ್‌ನ ಮಾರ್ಕ್‌ ಜಕರ್‌ಬರ್ಗ್‌ರನ್ನು ಕೂಡಾ ಹಿಂದಿಕ್ಕಿ ವಿಶ್ವದ ಮೂರನೇ ಶ್ರೀಮಂತರ ಬಿಲಿಯನೇರ್‌ ಅನಿಸಿಕೊಂಡಿದ್ದಾರೆ ಟೆಸ್ಲಾ ಕಂಪನಿಯ ಸ್ಥಾಪಕ ಎಲಾನ್‌ ಮಸ್ಕ್‌.

ಎಲಾನ್‌ ಮಸ್ಕ್‌ ಅವರ ಟೆಸ್ಲಾ ಕಂಪನಿಯ ಶೇರುಗಳು ಮಾರುಕಟ್ಟೆಯಲ್ಲಿ ಇನ್ನಿಲ್ಲದ ವೇಗದಲ್ಲಿ ಮಾರಾಟವಾಗುತ್ತಿವೆ. ಪರಿಣಾಮ ಈ ಶೇರುಗಳ ಬೆಲೆ ಈಗ ಸಾಮಾನ್ಯ ಸಮಯದಲ್ಲಿದ್ದದ್ದಕ್ಕಿಂತ ಸುಮಾರು ಶೇ.475 ರಷ್ಟು ಏರಿಕೆ ಕಂಡಿವೆ. ಪರಿಣಾಮ ಟೆಸ್ಲಾ ಕಂಪನಿಯ ಬ್ರಾಂಡ್‌ ವ್ಯಾಲೂ ಮತ್ತು ಆಧಾಯದಲ್ಲಿ ಕಳೆದ ವರ್ಷವೊಂದರಲ್ಲಿಯೇ ಸುಮಾರು 76.1 ಬಿಲಿಯನ್‌ ಡಾಲರ್‌ ಏರಿಕೆಯಾಗಿದೆ.

ಇದರ ಪರಿಣಾಮ ಫೇಸ್‌ಬುಕ್‌ನ ಮಾರ್ಕ್‌ ಜಕರ್‌ಬರ್ಗ್‌ರನ್ನು ಹಿಂದಿಕ್ಕಿ ವಿಶ್ವದ ಶತಕೋಟಿ ಶ್ರೀಮಂತರ ಪಟ್ಟಿ ಸೇರಿದ ನಾಲ್ಕನೇ ವ್ಯಕ್ತಿ ಎನಿಸಿದ್ದಾರೆ ಮಸ್ಕ್‌. ಆದ್ರೆ ಮಸ್ಕ್‌ ಸಾಧನೆ ಇಷ್ಟಕ್ಕೇ ನಿಂತಿಲ್ಲ. ಫೇಸ್‌ಬುಕ್‌ ಸ್ಥಾಪಕನನ್ನು ಆದಾಯದಲ್ಲಿ ಕೂಡಾ ಹಿಂದಿಕ್ಕಿ ಈಗ ಬಿಲಿಯನೇರ್‌ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ ಮಸ್ಕ್‌.

ಇವರಿಗಿಂತ ಮೇಲಿರುವ ಇತರ ಇಬ್ಬರೆಂದರೆ ಮೈಕ್ರೋಸಾಫ್‌ನ ಬಿಲ್‌ ಗೇಟ್ಸ್‌ ಮತ್ತು ಅಮೇಜಾನ್‌ ಇಂಕ್‌ನ ಜೆಫ್‌ ಬೇಜೋ.

Published On - 12:50 pm, Tue, 1 September 20