AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವರ್​ ಕಟ್​: 20 ಗಂಟೆಗಳ ಕಾಲ ರೈಲಿನಲ್ಲೇ ಪ್ರಯಾಣಿಕರು Lock ಆಗಿದ್ದರು!

ಈ ಪವರ್​ ಕಟ್​ ಸಮಸ್ಯೆ ಬರೀ ನಮ್ಮ ರಾಜ್ಯ/ ದೇಶದಲ್ಲಿ ಮಾತ್ರ ಅಂತಾ ನೀವು ಅಂದುಕೊಂಡಿದ್ದರೆ ಅದು ತಪ್ಪು. ಯಾಕಂದ್ರೆ ಫ್ರಾನ್ಸ್​ನಂಥ ಸುಧಾರಿತ ರಾಷ್ಟ್ರದಲ್ಲೂ ಸಹ ವಿದ್ಯುತ್​ ವ್ಯತ್ಯಯವಾಗಿ ಸಾವಿರಾರು ರೈಲು ಪ್ರಯಾಣಿಕರು ಸಿಲುಕಿಕೊಂಡಿರುವ ಘಟನೆ ಕಳೆದ ಶನಿವಾರ ನಡೆದಿದೆ. ವಿಶ್ವದ ಅತಿ ವೇಗದ ರೈಲುಗಳಲ್ಲಿ ಒಂದಾದ ಫ್ರಾನ್ಸ್​ನ TGV ಟ್ರೈನ್​ನ (Train à Grande Vitesse, high-speed train) ವಿದ್ಯುತ್​ ಜಾಲದಲ್ಲಿ ಕಳೆದ ಶನಿವಾರ ಭಾರಿ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮವಾಗಿ ಎಲ್ಲಾ TGV ಟ್ರೈನ್​ಗಳು […]

ಪವರ್​ ಕಟ್​: 20 ಗಂಟೆಗಳ ಕಾಲ ರೈಲಿನಲ್ಲೇ ಪ್ರಯಾಣಿಕರು Lock ಆಗಿದ್ದರು!
KUSHAL V
| Edited By: ಸಾಧು ಶ್ರೀನಾಥ್​|

Updated on:Sep 01, 2020 | 3:55 PM

Share

ಈ ಪವರ್​ ಕಟ್​ ಸಮಸ್ಯೆ ಬರೀ ನಮ್ಮ ರಾಜ್ಯ/ ದೇಶದಲ್ಲಿ ಮಾತ್ರ ಅಂತಾ ನೀವು ಅಂದುಕೊಂಡಿದ್ದರೆ ಅದು ತಪ್ಪು. ಯಾಕಂದ್ರೆ ಫ್ರಾನ್ಸ್​ನಂಥ ಸುಧಾರಿತ ರಾಷ್ಟ್ರದಲ್ಲೂ ಸಹ ವಿದ್ಯುತ್​ ವ್ಯತ್ಯಯವಾಗಿ ಸಾವಿರಾರು ರೈಲು ಪ್ರಯಾಣಿಕರು ಸಿಲುಕಿಕೊಂಡಿರುವ ಘಟನೆ ಕಳೆದ ಶನಿವಾರ ನಡೆದಿದೆ. ವಿಶ್ವದ ಅತಿ ವೇಗದ ರೈಲುಗಳಲ್ಲಿ ಒಂದಾದ ಫ್ರಾನ್ಸ್​ನ TGV ಟ್ರೈನ್​ನ (Train à Grande Vitesse, high-speed train) ವಿದ್ಯುತ್​ ಜಾಲದಲ್ಲಿ ಕಳೆದ ಶನಿವಾರ ಭಾರಿ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮವಾಗಿ ಎಲ್ಲಾ TGV ಟ್ರೈನ್​ಗಳು ಇದ್ದಲ್ಲೇ ನಿಂತು ಹೋಗುವ ಸ್ಥಿತಿ ಎದುರಾಯಿತು. ಇದರಿಂದ ಸಾವಿರಾರು ಮಂದಿ ಪ್ರಯಾಣಿಕರು ಬರೋಬ್ಬರಿ 20 ಗಂಟೆಗಳ ಕಾಲ ಟ್ರೈನ್​ನಲ್ಲೇ ಸಿಲುಕಿಕೊಳ್ಳುವ ಪರಿಸ್ಥಿತಿ ಉಂಟಾಯಿತು.

ಕೊನೆಗೂ ಅವರನ್ನೆಲ್ಲಾ ರೈಲ್ವೆ ಇಲಾಖೆಯ ಸಿಬ್ಬಂದಿ ರಕ್ಷಿಸಿದರು ಎಂಬ ಮಾಹಿತಿ ದೊರೆತಿದೆ. ಘಟನೆಯಿಂದ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸಿದ್ದಕ್ಕೆ ಇಲಾಖೆಯು ವಿಷಾದ ವ್ಯಕ್ತಪಡಿಸಿದೆ. ಸರಣಿ ವಿದ್ಯುತ್​ ಪರಿಕರಗಳು ಕೈ ಕೊಟ್ಟಿದ್ದರಿಂದ ಈ ಘಟನೆ ಉಂಟಾಗಿದೆ ಎಂದು ಹೇಳಿದ ಇಲಾಖೆಯು ಪ್ರಯಾಣಿಕರಿಗೆ ಟಿಕೆಟ್​ ದರದ ಮೂರು ಪಟ್ಟು ಹಣವನ್ನು ವಾಪಸ್​ ಮಾಡುವುದಾಗಿ ತಿಳಿಸಿದೆ.

Published On - 3:37 pm, Tue, 1 September 20

Follow Us
KUSHAL V
KUSHAL V
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ