ಬಜೆಟ್ ಮಂಡನೆ ವೇಳೆ ನೀಲಿ ಚಿತ್ರ ವೀಕ್ಷಿಸಿದ ಸಂಸದ, ಸಿಕ್ಕಿಬಿದ್ದಾಗ ಕೊಟ್ಟ ಸಬೂಬು ಏನು ಗೊತ್ತಾ?

| Updated By: KUSHAL V

Updated on: Sep 20, 2020 | 6:36 PM

ಥಾಯ್​ ಲ್ಯಾಂಡ್​ ಸಂಸತ್ತಿನಲ್ಲಿ ಬಜೆಟ್​ ಮಂಡನೆ ವೇಳೆ ಸಂಸದನೊಬ್ಬ ತಮ್ಮ ಮೊಬೈಲ್​‌ನಲ್ಲಿ ನೀಲಿ ಚಿತ್ರವನ್ನು ವೀಕ್ಷಿಸುತ್ತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋ ನೋಡುತ್ತಾ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿರುವ ರಾಜಕಾರಣಿ ಈಗ ತೀರಾ ಮುಜುಗರಕ್ಕೆ ಒಳಗಾಗಿದ್ದಾರೆ. ದೇಶದ ರಾಜಧಾನಿಯಾದ ಬ್ಯಾಂಕಾಕ್‌ನಲ್ಲಿರುವ ಸಂಸತ್ತಿನಲ್ಲಿ ಬಜೆಟ್ ಮಂಡನೆ ವೇಳೆ ಸಂಸದ ರೊನಾಥೆಪ್ ಅನುವಾತ್ ನೀಲಿ ಚಿತ್ರಗಳನ್ನು ವೀಕ್ಷಿಸುತ್ತಿರುವ ದೃಶ್ಯ ವರದಿಗಾರರ ಕ್ಯಾಮರಾದಲ್ಲಿ ಸೆರೆಸಿಕ್ಕಿದೆ. ವರದಿಗಳ ಪ್ರಕಾರ ಸಂಸದ ಅನುವಾತ್ ತನ್ನ ಫೋನ್‌ನಲ್ಲಿ ಸುಮಾರು 10 […]

ಬಜೆಟ್ ಮಂಡನೆ ವೇಳೆ ನೀಲಿ ಚಿತ್ರ ವೀಕ್ಷಿಸಿದ ಸಂಸದ, ಸಿಕ್ಕಿಬಿದ್ದಾಗ ಕೊಟ್ಟ ಸಬೂಬು ಏನು ಗೊತ್ತಾ?
ಸಾಂದರ್ಭಿಕ ಚಿತ್ರ
Follow us on

ಥಾಯ್​ ಲ್ಯಾಂಡ್​ ಸಂಸತ್ತಿನಲ್ಲಿ ಬಜೆಟ್​ ಮಂಡನೆ ವೇಳೆ ಸಂಸದನೊಬ್ಬ ತಮ್ಮ ಮೊಬೈಲ್​‌ನಲ್ಲಿ ನೀಲಿ ಚಿತ್ರವನ್ನು ವೀಕ್ಷಿಸುತ್ತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋ ನೋಡುತ್ತಾ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿರುವ ರಾಜಕಾರಣಿ ಈಗ ತೀರಾ ಮುಜುಗರಕ್ಕೆ ಒಳಗಾಗಿದ್ದಾರೆ.

ದೇಶದ ರಾಜಧಾನಿಯಾದ ಬ್ಯಾಂಕಾಕ್‌ನಲ್ಲಿರುವ ಸಂಸತ್ತಿನಲ್ಲಿ ಬಜೆಟ್ ಮಂಡನೆ ವೇಳೆ ಸಂಸದ ರೊನಾಥೆಪ್ ಅನುವಾತ್ ನೀಲಿ ಚಿತ್ರಗಳನ್ನು ವೀಕ್ಷಿಸುತ್ತಿರುವ ದೃಶ್ಯ ವರದಿಗಾರರ ಕ್ಯಾಮರಾದಲ್ಲಿ ಸೆರೆಸಿಕ್ಕಿದೆ. ವರದಿಗಳ ಪ್ರಕಾರ ಸಂಸದ ಅನುವಾತ್ ತನ್ನ ಫೋನ್‌ನಲ್ಲಿ ಸುಮಾರು 10 ನಿಮಿಷಗಳ ಕಾಲ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನ ನೋಡುತ್ತಿರುವ ದೃಶ್ಯಾವಳಿಯನ್ನು ಪತ್ರಿಕಾ ಗ್ಯಾಲರಿಯಲ್ಲಿದ್ದ ವರದಿಗಾರರು ಸೆರೆ ಹಿಡಿದಿದ್ದಾರೆ.

ಚೊನ್ಬುರಿ ಪ್ರಾಂತ್ಯವನ್ನು ಪ್ರತಿನಿಧಿಸುವ ಆಡಳಿತ ಪಕ್ಷದ ಸಂಸದ ರೊನಾಥೆಪ್ ಅನುವಾತ್ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಮಹಿಳೆಯೊಬ್ಬಳು ಸಹಾಯ ಕೋರಿ ನನಗೆ ಪದೇ ಪದೇ ಮೆಸೆಜ್​ ಮಾಡುತ್ತಿದ್ದಳು. ಹೀಗಾಗಿ, ಆಕೆ ಎಲ್ಲಿದ್ದಾಳೆ ಮತ್ತು ಆಕೆಗೆ ಯಾರು ತೊಂದರೆ ಕೊಡುತ್ತಿದ್ದಾರೆ ಎಂದು ತಿಳಿದುಕೊಳ್ಳಲು ನಾನು ಆ ದೃಶ್ಯಾವಳಿಗಳನ್ನು ನೋಡಿದೆ ಎಂಬ ಸಮಜಾಯಿಷಿ ನೀಡಿದ್ದಾನೆ!