ದೆಹಲಿ: ಚೀನಾ ತಯಾರಿಸಿದ್ದ ಸಿನೋವಾಕ್ ಕೊರೊನಾ ಲಸಿಕೆಗೆ ಭಾರಿ ಹಿನ್ನಡೆ ಯಾಗಿದೆ. ಸಿನೋವಾಕ್ ಲಸಿಕೆ ಕಡಿಮೆ ಪರಿಣಾಮಕಾರಿ ಎಂಬುದು ಸಾಬೀತಾಗಿದ್ದು ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.
ಕಳೆದ ವಾರ ಶೇ.78ರಷ್ಟು ಸಿನೋವಾಕ್ ಲಸಿಕೆ ಪರಿಣಾಮಕಾರಿ ಎಂದು ಬ್ರೆಜಿಲ್ ಹೇಳಿತ್ತು. ಆದ್ರೆ ಈಗ ಶೇ.50.4ರಷ್ಟು ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಆದ್ರೆ ಈಗಾಗಲೇ 380 ಮಿಲಿಯನ್ಗಿಂತ ಹೆಚ್ಚಿನ ಡೋಸನ್ನ ಬ್ರೆಜಿಲ್ ಖರೀದಿ ಮಾಡಿದೆ. ಸದ್ಯ ವಿಶ್ವ ಆರೋಗ್ಯ ಸಂಸ್ಥೆ ಶೇ.60ಕ್ಕಿಂತ ಹೆಚ್ಚು ಪರಿಣಾಮಕಾರಿ ಲಸಿಕೆ ಬಳಕೆಗೆ ಸಲಹೆ ನೀಡಿದೆ.
ಈ ಹಿಂದೆ ಬ್ರೆಜಿಲ್ ವಿಜ್ಞಾನಿಗಳು ಮಹಾಮಾರಿ ಕೊರೊನಾ ಹಿಮ್ಮೆಟ್ಟಿಸಲು ಕೊರೊನಾ ಲಸಿಕೆ ಸಿಕ್ಕಿದೆ. ಚೀನಾದ ಸಿನೋವಾಕ್ ಲಸಿಕೆ ಕೊರೊನಾ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿದೆ ಇದು ವಿಜಯೋತ್ಸವ ಎಂದು ಸಂಭ್ರಮಿಸಿದ್ದರು. ಆದ್ರೆ ಅಧಿಕಾರಿಗಳು ಮಂಗಳವಾರ ಬ್ರೆಜಿಲ್ನಲ್ಲಿ ನಡೆಸಿದ ಪ್ರಯೋಗದಲ್ಲಿ ಸಿನೋವಾಕ್ ಲಸಿಕೆ ಶೇ.50.4ರಷ್ಟು ಪರಿಣಾಮಕಾರಿ ಎಂಬುದು ಸಾಬೀತಾಗಿದೆ.
Explainer | ಕೊರೊನಾ ಲಸಿಕೆ ಸಾಗಣೆ ಬಾಕ್ಸ್ ಮೇಲೆ ಸರ್ವೇ ಸಂತು ನಿರಾಮಯಾಃ.. ಏನಿದರ ಅರ್ಥ?