ಪಾಕ್​ನಲ್ಲಿ ಪತ್ತೆಯಾಯ್ತು 1300 ವರ್ಷಗಳಷ್ಟು ಹಳೆಯ ಹಿಂದೂ ದೇವಾಲಯ!

| Updated By: ಸಾಧು ಶ್ರೀನಾಥ್​

Updated on: Nov 21, 2020 | 3:17 PM

ನೆರೆಯ ಪಾಕಿಸ್ತಾನದ ಸ್ವಾಟ್ ಪ್ರಾಂತ್ಯದಲ್ಲಿ 1300 ವರ್ಷಗಳಷ್ಟು ಹಳೆಯದು ಎನ್ನಲಾದ ಹಿಂದೂ ದೇವಾಲಯದ ಅವಶೇಷ ಪತ್ತೆಯಾಗಿದೆ. ಪಾಕಿಸ್ತಾನ ಮತ್ತು ಇಟಲಿಯ ಪುರಾತತ್ವ ತಜ್ಞರು ಉತ್ಖನನ ನಡೆಸುತ್ತಿದ್ದ ವೇಳೆ ಬಾರಿಕೋಟ್ ಗುಂಡೈ ಎಂಬಲ್ಲಿ ಈ ದೇಗುಲ ಪತ್ತೆಯಾಗಿದೆ. ಉತ್ಖನನ ತಜ್ಞರು ಅದನ್ನು ವಿಷ್ಣುವಿನ ದೇವಾಲಯ ಎಂದು ಗುರುತಿಸಿದ್ದಾರೆ. ಗಾಂಧಾರ ನಾಗರಿಕತೆಯ ಕಾಲದ ಮೊದಲ ದೇವಾಲಯ.. ದೇವಾಲಯದ ಸಮೀಪ ದಂಡುನೆಲೆ ಮತ್ತು ಕಾವಲುಗೋಪುರಗಳನ್ನು ಗುರುತಿಸಿರುವ ತಜ್ಞರು, ದೇವಸ್ಥಾನವು ಹಿಂದೂ ಶಾಹಿ ಅಥವಾ ಕಾಬುಲ್ ಶಾಹಿ ಅವಧಿಯಲ್ಲಿ (850-1026 CE) ನಿರ್ಮಿಸಿದ್ದಾಗಿದೆ […]

ಪಾಕ್​ನಲ್ಲಿ ಪತ್ತೆಯಾಯ್ತು 1300 ವರ್ಷಗಳಷ್ಟು ಹಳೆಯ ಹಿಂದೂ ದೇವಾಲಯ!
Follow us on

ನೆರೆಯ ಪಾಕಿಸ್ತಾನದ ಸ್ವಾಟ್ ಪ್ರಾಂತ್ಯದಲ್ಲಿ 1300 ವರ್ಷಗಳಷ್ಟು ಹಳೆಯದು ಎನ್ನಲಾದ ಹಿಂದೂ ದೇವಾಲಯದ ಅವಶೇಷ ಪತ್ತೆಯಾಗಿದೆ. ಪಾಕಿಸ್ತಾನ ಮತ್ತು ಇಟಲಿಯ ಪುರಾತತ್ವ ತಜ್ಞರು ಉತ್ಖನನ ನಡೆಸುತ್ತಿದ್ದ ವೇಳೆ ಬಾರಿಕೋಟ್ ಗುಂಡೈ ಎಂಬಲ್ಲಿ ಈ ದೇಗುಲ ಪತ್ತೆಯಾಗಿದೆ. ಉತ್ಖನನ ತಜ್ಞರು ಅದನ್ನು ವಿಷ್ಣುವಿನ ದೇವಾಲಯ ಎಂದು ಗುರುತಿಸಿದ್ದಾರೆ.

ಗಾಂಧಾರ ನಾಗರಿಕತೆಯ ಕಾಲದ ಮೊದಲ ದೇವಾಲಯ..
ದೇವಾಲಯದ ಸಮೀಪ ದಂಡುನೆಲೆ ಮತ್ತು ಕಾವಲುಗೋಪುರಗಳನ್ನು ಗುರುತಿಸಿರುವ ತಜ್ಞರು, ದೇವಸ್ಥಾನವು ಹಿಂದೂ ಶಾಹಿ ಅಥವಾ ಕಾಬುಲ್ ಶಾಹಿ ಅವಧಿಯಲ್ಲಿ (850-1026 CE) ನಿರ್ಮಿಸಿದ್ದಾಗಿದೆ ಎಂದಿದ್ದಾರೆ. ಸಮೀಪದಲ್ಲಿ ನೀರಿನ ಆಸರೆ ಇದ್ದ ಬಗ್ಗೆ ಹೇಳಿರುವ ಉತ್ಖನನಕಾರರು, ಪೂಜೆಗೂ ಮುನ್ನ ಸ್ನಾನಕ್ಕೆ ಅದು  ಬಳಕೆಯಾಗುತ್ತಿದ್ದಿರಬಹುದು ಎಂದು ಅಂದಾಜಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಟಲಿಯ ಪುರಾತತ್ವ ವಿಭಾಗದ ಮುಖ್ಯಸ್ಥ ಡಾ. ಲೂಕಾ, ಸ್ವಾಟ್  ಪ್ರಾಂತ್ಯದಲ್ಲಿ ಕಂಡುಬಂದ ಗಾಂಧಾರ ನಾಗರಿಕತೆಯ ಕಾಲದ ಮೊದಲ ದೇವಾಲಯ ಇದಾಗಿದೆ ಎಂದು ಹೇಳಿದ್ದಾರೆ. ಸ್ವಾಟ್ ಪ್ರಾಂತ್ಯವು ಪಾಕಿಸ್ತಾನದ ಸುಂದರ ಭಾಗಗಳಲ್ಲಿ ಒಂದಾಗಿದ್ದು, ಹಲವಾರು ಪ್ರವಾಸಿ ತಾಣಗಳನ್ನು ಒಳಗೊಂಡಿದೆ.