ಪವರ್​ ಕಟ್​: 20 ಗಂಟೆಗಳ ಕಾಲ ರೈಲಿನಲ್ಲೇ ಪ್ರಯಾಣಿಕರು Lock ಆಗಿದ್ದರು!

| Updated By: ಸಾಧು ಶ್ರೀನಾಥ್​

Updated on: Sep 01, 2020 | 3:55 PM

ಈ ಪವರ್​ ಕಟ್​ ಸಮಸ್ಯೆ ಬರೀ ನಮ್ಮ ರಾಜ್ಯ/ ದೇಶದಲ್ಲಿ ಮಾತ್ರ ಅಂತಾ ನೀವು ಅಂದುಕೊಂಡಿದ್ದರೆ ಅದು ತಪ್ಪು. ಯಾಕಂದ್ರೆ ಫ್ರಾನ್ಸ್​ನಂಥ ಸುಧಾರಿತ ರಾಷ್ಟ್ರದಲ್ಲೂ ಸಹ ವಿದ್ಯುತ್​ ವ್ಯತ್ಯಯವಾಗಿ ಸಾವಿರಾರು ರೈಲು ಪ್ರಯಾಣಿಕರು ಸಿಲುಕಿಕೊಂಡಿರುವ ಘಟನೆ ಕಳೆದ ಶನಿವಾರ ನಡೆದಿದೆ. ವಿಶ್ವದ ಅತಿ ವೇಗದ ರೈಲುಗಳಲ್ಲಿ ಒಂದಾದ ಫ್ರಾನ್ಸ್​ನ TGV ಟ್ರೈನ್​ನ (Train à Grande Vitesse, high-speed train) ವಿದ್ಯುತ್​ ಜಾಲದಲ್ಲಿ ಕಳೆದ ಶನಿವಾರ ಭಾರಿ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮವಾಗಿ ಎಲ್ಲಾ TGV ಟ್ರೈನ್​ಗಳು […]

ಪವರ್​ ಕಟ್​: 20 ಗಂಟೆಗಳ ಕಾಲ ರೈಲಿನಲ್ಲೇ ಪ್ರಯಾಣಿಕರು Lock ಆಗಿದ್ದರು!
Follow us on

ಈ ಪವರ್​ ಕಟ್​ ಸಮಸ್ಯೆ ಬರೀ ನಮ್ಮ ರಾಜ್ಯ/ ದೇಶದಲ್ಲಿ ಮಾತ್ರ ಅಂತಾ ನೀವು ಅಂದುಕೊಂಡಿದ್ದರೆ ಅದು ತಪ್ಪು. ಯಾಕಂದ್ರೆ ಫ್ರಾನ್ಸ್​ನಂಥ ಸುಧಾರಿತ ರಾಷ್ಟ್ರದಲ್ಲೂ ಸಹ ವಿದ್ಯುತ್​ ವ್ಯತ್ಯಯವಾಗಿ ಸಾವಿರಾರು ರೈಲು ಪ್ರಯಾಣಿಕರು ಸಿಲುಕಿಕೊಂಡಿರುವ ಘಟನೆ ಕಳೆದ ಶನಿವಾರ ನಡೆದಿದೆ.
ವಿಶ್ವದ ಅತಿ ವೇಗದ ರೈಲುಗಳಲ್ಲಿ ಒಂದಾದ ಫ್ರಾನ್ಸ್​ನ TGV ಟ್ರೈನ್​ನ (Train à Grande Vitesse, high-speed train) ವಿದ್ಯುತ್​ ಜಾಲದಲ್ಲಿ ಕಳೆದ ಶನಿವಾರ ಭಾರಿ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮವಾಗಿ ಎಲ್ಲಾ TGV ಟ್ರೈನ್​ಗಳು ಇದ್ದಲ್ಲೇ ನಿಂತು ಹೋಗುವ ಸ್ಥಿತಿ ಎದುರಾಯಿತು. ಇದರಿಂದ ಸಾವಿರಾರು ಮಂದಿ ಪ್ರಯಾಣಿಕರು ಬರೋಬ್ಬರಿ 20 ಗಂಟೆಗಳ ಕಾಲ ಟ್ರೈನ್​ನಲ್ಲೇ ಸಿಲುಕಿಕೊಳ್ಳುವ ಪರಿಸ್ಥಿತಿ ಉಂಟಾಯಿತು.

ಕೊನೆಗೂ ಅವರನ್ನೆಲ್ಲಾ ರೈಲ್ವೆ ಇಲಾಖೆಯ ಸಿಬ್ಬಂದಿ ರಕ್ಷಿಸಿದರು ಎಂಬ ಮಾಹಿತಿ ದೊರೆತಿದೆ. ಘಟನೆಯಿಂದ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸಿದ್ದಕ್ಕೆ ಇಲಾಖೆಯು ವಿಷಾದ ವ್ಯಕ್ತಪಡಿಸಿದೆ. ಸರಣಿ ವಿದ್ಯುತ್​ ಪರಿಕರಗಳು ಕೈ ಕೊಟ್ಟಿದ್ದರಿಂದ ಈ ಘಟನೆ ಉಂಟಾಗಿದೆ ಎಂದು ಹೇಳಿದ ಇಲಾಖೆಯು ಪ್ರಯಾಣಿಕರಿಗೆ ಟಿಕೆಟ್​ ದರದ ಮೂರು ಪಟ್ಟು ಹಣವನ್ನು ವಾಪಸ್​ ಮಾಡುವುದಾಗಿ ತಿಳಿಸಿದೆ.

Published On - 3:37 pm, Tue, 1 September 20