ಪ್ರಾಣ ಪಣಕ್ಕಿಟ್ಟು ಸ್ನೇಹಿತನನ್ನು ರಕ್ಷಿಸಿದ 3 ವರ್ಷದ ಬಾಲಕನ ವಿಡಿಯೋ ಸಖತ್‌ ವೈರಲ್‌

|

Updated on: Aug 26, 2020 | 6:31 PM

ಬ್ರೆಜಿಲ್‌: ಈಜುಕೊಳದಲ್ಲಿ ಆಯತಪ್ಪಿ ಬಿದ್ದ ಮೂರು ವರ್ಷದ ಬಾಲಕನ್ನು ಆತನ ಸ್ನೇಹಿತ ಪ್ರಾಣ ಒತ್ತೆಯಿಟ್ಟು ರಕ್ಷಣೆ ಮಾಡಿದ ಘಟನೆ ಬ್ರೆಜಿಲ್‌ನಲ್ಲಿ ಸಂಭವಿಸಿದೆ. ಹೌದು ಬ್ರೆಜಿಲ್‌ ದೇಶದ ರಿಯೋ ಜಿ ಜನೇರೋದ ಮನೆಯೊಂದರ ಈಜುಕೊಳದ ದಡದಲ್ಲಿ ಮೂರು ವರ್ಷದ ಬಾಲಕ ಆಟವಾಡುತ್ತಿದ್ದ. ಅಲ್ಲಿಗೆ ಬಂದ ಆತನ ಸ್ನೇಹಿತ ಮೂರು ವರ್ಷದ ಬಾಲಕ ಈಜುಕೊಳದಲ್ಲಿ ಬಿದ್ದ ಟಾಯ್‌ ಅನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಆಯತಪ್ಪಿ ಈಜುಕೊಳದಲ್ಲಿ ಬಿದ್ದಿದ್ದಾನೆ. ಆಗ ಆತ ಪ್ರಾಣರಕ್ಷಣೆಗಾಗಿ ಒದ್ದಾಡಲಾರಂಭಿಸಿದ್ದಾನೆ. ಆತನೆ ಸ್ನೇಹಿತ ಈತನನ್ನು ರಕ್ಷಿಸಲು ಯಾರಾದರೂ ಇದ್ದಾರಾ […]

ಪ್ರಾಣ ಪಣಕ್ಕಿಟ್ಟು ಸ್ನೇಹಿತನನ್ನು ರಕ್ಷಿಸಿದ 3 ವರ್ಷದ ಬಾಲಕನ ವಿಡಿಯೋ ಸಖತ್‌ ವೈರಲ್‌
Follow us on

ಬ್ರೆಜಿಲ್‌: ಈಜುಕೊಳದಲ್ಲಿ ಆಯತಪ್ಪಿ ಬಿದ್ದ ಮೂರು ವರ್ಷದ ಬಾಲಕನ್ನು ಆತನ ಸ್ನೇಹಿತ ಪ್ರಾಣ ಒತ್ತೆಯಿಟ್ಟು ರಕ್ಷಣೆ ಮಾಡಿದ ಘಟನೆ ಬ್ರೆಜಿಲ್‌ನಲ್ಲಿ ಸಂಭವಿಸಿದೆ.

ಹೌದು ಬ್ರೆಜಿಲ್‌ ದೇಶದ ರಿಯೋ ಜಿ ಜನೇರೋದ ಮನೆಯೊಂದರ ಈಜುಕೊಳದ ದಡದಲ್ಲಿ ಮೂರು ವರ್ಷದ ಬಾಲಕ ಆಟವಾಡುತ್ತಿದ್ದ. ಅಲ್ಲಿಗೆ ಬಂದ ಆತನ ಸ್ನೇಹಿತ ಮೂರು ವರ್ಷದ ಬಾಲಕ ಈಜುಕೊಳದಲ್ಲಿ ಬಿದ್ದ ಟಾಯ್‌ ಅನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಆಯತಪ್ಪಿ ಈಜುಕೊಳದಲ್ಲಿ ಬಿದ್ದಿದ್ದಾನೆ.

ಆಗ ಆತ ಪ್ರಾಣರಕ್ಷಣೆಗಾಗಿ ಒದ್ದಾಡಲಾರಂಭಿಸಿದ್ದಾನೆ. ಆತನೆ ಸ್ನೇಹಿತ ಈತನನ್ನು ರಕ್ಷಿಸಲು ಯಾರಾದರೂ ಇದ್ದಾರಾ ಎಂದು ಸುತ್ತಲು ನೋಡಿದ್ದಾನೆ. ಯಾರು ಕಂಡು ಬರದಿದ್ದಾಗ ತಾನೇ ದೈರ್ಯಮಾಡಿ ಸ್ನೇಹಿತನನ್ನು ಈಜುಕೊಳದಿಂದ ಎಳೆದು ರಕ್ಷಣೆ ಮಾಡಿದ್ದಾನೆ.

ಈ ಸಂಪೂರ್ಣ ದೃಶ್ಯ ಈಜುಕೊಳದಲ್ಲಿ ಅಳವಡಿಸಿರುವ ಸರ್ವೆಲೆನ್ಸ್‌ ಕ್ಯಾಮೆರಾದಲ್ಲಿ ದಾಖಲಾಗಿದೆ. ನಂತರ ಸ್ಥಳಕ್ಕೆ ಬಂದ ಬಾಲಕನ ತಾಯಿ ವಿಷಯ ಗೊತ್ತಾಗಿ ದಂಗಾಗಿದ್ದಾರೆ. ಹಾಗೇ ತನ್ನ ಮಗನ ಈ ಸಾಹಸವನ್ನ ಸಾಮಾಜಿಕ ತಾಣದಲ್ಲಿ ಅಪ್‌ಲೋಡ್‌ ಮಾಡಿದ್ದಾಳೆ.

ಈಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಅಷ್ಟೇ ಅಲ್ಲ ವಿಷಯ ತಿಳಿದು ಸ್ಥಳೀಯ ಪೊಲೀಸ್‌ ಇಲಾಖೆ ಬಾಲಕನಿಗೆ ಚಾಕೊಲೇಟ್‌ಗಳ ಗುಚ್ಚವನ್ನೇ ನೀಡಿ ಗೌರವಿಸಿದೆ.