Top News: ಕೊರೊನಾದಿಂದ ಇಡೀ ಜಗತ್ತಿಗೆ ಕುತ್ತು.. 6 ಲಕ್ಷ ದಾಟಿದ ಸಾವಿನ ಸಂಖ್ಯೆ

| Updated By:

Updated on: Jul 25, 2020 | 8:30 PM

ಇದು ಕೊರೊನಾ ಜ‘ಗತ್ತು’.. ಜಗತ್ತನ್ನೇ ತಲ್ಲಣಗೊಳಿಸಿರುವ ಕ್ರೂರಿ ವೈರಸ್ ಕೊರೊನಾದಿಂದಾಗಿ, ವಿಶ್ವದಾದ್ಯಂತ ಸೋಂಕಿತರ ಸಂಖ್ಯೆ 1,56,51,911ಕ್ಕೆ ಏರಿಕೆಯಾಗಿದೆ. ವೈರಸ್​ನಿಂದಾಗಿ 6,36,470 ಜನರು ಪ್ರಾಣ ಕಳೆದುಕೊಂಡಿದ್ರೆ, ಪ್ರಸ್ತುತ 54,35,099 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನ ವಿರುದ್ಧ ಹೋರಾಡಿ, 95,35,342 ಜನರು ಗುಣಮುಖರಾಗಿದ್ದಾರೆ. 66 ಸಾವಿರ ಸೋಂಕಿತರ ಸ್ಥಿತಿ ಚಿಂತಾಜನಕವಾಗಿದೆ. ಅಮೆರಿಕದಲ್ಲಿ ಸಾವಿನ ಕೇಕೆ ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಹೆಮ್ಮಾರಿ ವೈರಸ್​ನಿಂದಾಗಿ ಸೋಂಕಿತರ ಸಂಖ್ಯೆಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಅದ್ರಲ್ಲೂ, 41,69,991 ಜನರಿಗೆ ವೈರಸ್ ಅಟ್ಯಾಕ್ ಮಾಡಿದ್ರೆ, ಸೋಂಕಿನಿಂದಾಗಿ […]

Top News: ಕೊರೊನಾದಿಂದ ಇಡೀ ಜಗತ್ತಿಗೆ ಕುತ್ತು.. 6 ಲಕ್ಷ ದಾಟಿದ ಸಾವಿನ ಸಂಖ್ಯೆ
Follow us on

ಇದು ಕೊರೊನಾ ಜ‘ಗತ್ತು’.. ಜಗತ್ತನ್ನೇ ತಲ್ಲಣಗೊಳಿಸಿರುವ ಕ್ರೂರಿ ವೈರಸ್ ಕೊರೊನಾದಿಂದಾಗಿ, ವಿಶ್ವದಾದ್ಯಂತ ಸೋಂಕಿತರ ಸಂಖ್ಯೆ 1,56,51,911ಕ್ಕೆ ಏರಿಕೆಯಾಗಿದೆ. ವೈರಸ್​ನಿಂದಾಗಿ 6,36,470 ಜನರು ಪ್ರಾಣ ಕಳೆದುಕೊಂಡಿದ್ರೆ, ಪ್ರಸ್ತುತ 54,35,099 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನ ವಿರುದ್ಧ ಹೋರಾಡಿ, 95,35,342 ಜನರು ಗುಣಮುಖರಾಗಿದ್ದಾರೆ. 66 ಸಾವಿರ ಸೋಂಕಿತರ ಸ್ಥಿತಿ ಚಿಂತಾಜನಕವಾಗಿದೆ.

ಅಮೆರಿಕದಲ್ಲಿ ಸಾವಿನ ಕೇಕೆ
ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಹೆಮ್ಮಾರಿ ವೈರಸ್​ನಿಂದಾಗಿ ಸೋಂಕಿತರ ಸಂಖ್ಯೆಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಅದ್ರಲ್ಲೂ, 41,69,991 ಜನರಿಗೆ ವೈರಸ್ ಅಟ್ಯಾಕ್ ಮಾಡಿದ್ರೆ, ಸೋಂಕಿನಿಂದಾಗಿ 1,47,333 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೇವಲ 24 ಗಂಟೆಗಳ ಅವಧಿಯಲ್ಲಿ ಅಮೆರಿಕದಲ್ಲಿ ಸೋಂಕಿನಿಂದಾಗಿ 1,100 ಜನರು ಉಸಿರು ನಿಲ್ಲಿಸಿದ್ದು, ಸತತ ಮೂರು ದಿನ ಸಾವಿನ ಸಂಖ್ಯೆ ಸಾವಿರಕ್ಕೆ ಏರಿಕೆಯಾಗಿದ್ದು ಆತಂಕ ತಂದಿದೆ.

ಚೀನಾದಲ್ಲಿ ಪುಟಿದೇಳುತ್ತಿದೆ ವೈರಸ್
ಕೊರೊನಾ ವೈರಸ್​ನ ಮೂಲ ಚೀನಾದಲ್ಲಿ ಸೋಂಕು, ಜಗತ್ತಿಗೆ ಹೋಲಿಸಿಕೊಂಡರೆ ನಿಗ್ರಹಕ್ಕೆ ಬಂದಿದೆ. ಆದ್ರೆ, ಸೋಂಕಿತರು ಕಡಿಮೆಯಾದರು ಅಂತಾ ಸುಮ್ಮನಿದ್ದ ಚೀನಾದಲ್ಲಿ ಕೊರೊನಾ ಸಮೂಹ ಮತ್ತೆ ಪುಟಿದೇಳುತ್ತಿದೆ. ಚೀನಾ ಅಧಿಕಾರಿಗಳ ಪ್ರಕಾರ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಅಟ್ಟಹಾಸ ಮೆರೆಯುತ್ತಲೇ ಇದ್ದು, ದೇಶದೆಲ್ಲೆಡೆ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿ, ನೈಟ್ ಕ್ಲಬ್​ ಮತ್ತು ಥಿಯೇಟರ್​ಗಳನ್ನ ಬಂದ್ ಮಾಡಲಾಗಿದೆ.

ಬ್ರೆಜಿಲ್​ನಲ್ಲಿ ‘ಮಹಾ’ ಸೋಂಕು
ಬ್ರೆಜಿಲ್ ದೇಶದಲ್ಲಿ ಕ್ರೂರಿ ಕೊರೊನಾ ವೈರಸ್​ನ ನಾಗಾಲೋಟಕ್ಕೆ ಬ್ರೇಕೇ ಬೀಳ್ತಿಲ್ಲ. ದೇಶದಲ್ಲಿ ಸೋಂಕಿತರ ಸಂಖ್ಯೆ 22,89,951ಕ್ಕೆ ಏರಿಕೆಯಾಗಿದ್ರೆ, ವೈರಸ್​ನಿಂದ 84 ಸಾವಿರಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೇವಲ 24 ಗಂಟೆಗಳ ಅವಧಿಯಲ್ಲಿ 60 ಸಾವಿರ ಸೋಂಕಿತರು ಪತ್ತೆಯಾಗಿದ್ದು, 1,311 ಜನರು ಉಸಿರು ನಿಲ್ಲಿಸಿದ್ದಾರೆ. ವಿಶ್ವದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಬ್ರೆಜಿಲ್ 2ನೇ ಸ್ಥಾನದಲ್ಲಿದೆ.

ಸಾವಿನ ‘ಲಾಕ್​ಡೌನ್’!
ಆಸ್ಟ್ರೇಲಿಯಾದಲ್ಲಿ ಕ್ರೂರಿ ಕೊರೊನಾ ವೈರಸ್​ ನಿಧಾನವಾಗಿ ತನ್ನ ವಿಷಜಾಲವನ್ನ ಹಬ್ಬಿಸುತ್ತಲೇ ಇದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 13,595ಕ್ಕೆ ಏರಿಕೆಯಾಗಿದ್ದು, ವೈರಸ್​ನಿಂದಾಗಿ 139ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ವೈರಸ್ ನಿಗ್ರಹಕ್ಕೆ ವಿಕ್ಟೋರಿಯಾದಲ್ಲಿ ಲಾಕ್​ಡೌನ್ ವಿಧಿಸಲಾಗಿತ್ತು. ಆದ್ರೆ, ಈ ಅವಧಿಯಲ್ಲಿ 55ಕ್ಕೂ ಹೆಚ್ಚು ಸೋಂಕಿತರು ಸಾವನ್ನಪ್ಪಿದ್ದಾರೆ ಅಂತಾ ಆಸ್ಟ್ರೇಲಿಯಾ ಸರ್ಕಾರ ಹೇಳಿದೆ.

ಇಂಗ್ಲೆಂಡ್​​ನಲ್ಲಿ ಖಡಕ್ ರೂಲ್ಸ್
ಇಂಗ್ಲೆಂಡ್​ನಲ್ಲಿ ಕ್ರೂರಿ ಕೊರೊನಾದಿಂದಾಗಿ 2,97,146ಕ್ಕೂ ಹೆಚ್ಚು ಜನರು ಸೋಂಕಿತರಿದ್ರೆ, 45 ಸಾವಿರಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸೋಂಕು ತಡೆಗಟ್ಟಲು, ದೇಶದಾದ್ಯಂತ ಸಾರ್ವಜನಿಕವಾಗಿ ಮಾಸ್ಕ್ ಧರಿಸೋದನ್ನ ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಹೊಸ ಮಾರ್ಗಸೂಚಿ ರಿಲೀಸ್ ಮಾಡಿದ್ದು, ಸೂಪರ್ ಮಾರ್ಕೆಟ್ಸ್, ಶಾಪಿಂಗ್ ಸೆಂಟರ್, ಸಾರ್ವಜನಿಕ ಸಾರಿಗೆ ಹಾಗೂ ಬ್ಯಾಂಕ್​ಗಳಲ್ಲೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.

ಕೊರೊನಾ ‘ಸಾರಿಗೆ ಸಂಪರ್ಕ’
ಪೆರು ದೇಶದಲ್ಲಿ ಸೋಂಕಿತರ ಸಂಖ್ಯೆ 3,71,096ಕ್ಕೆ ಏರಿಕೆಯಾಗಿದ್ದು, ವೈರಸ್​ನಿಂದಾಗಿ 17,654 ಜನರು ಪ್ರಾಣ ತೆತ್ತಿದ್ದಾರೆ. ವೈರಸ್ ಭೀತಿಯ ಮಧ್ಯೆಯೂ ಪೆರು ದೇಶದ ಜನತೆ ಲಿಮಾ ನಗರದಲ್ಲಿ ಸಾರ್ವಜನಿಕ ಸಾರಿಗೆ ಓಡಾಟ ಆರಂಭಿಸಿದ್ದು, ಜನತೆ ಪ್ರಯಾಣ ಬೆಳೆಸಿದ್ದಾರೆ. ಇನ್ನು ಸಾವಿನ ಸಂಖ್ಯೆ ಹೆಚ್ಚಾಗಿದ್ದಕ್ಕೆ, ಸ್ಮಶಾನದಲ್ಲಿ ಕಟ್ಟಡಗಳಂತೆ ಸಮಾಧಿಗಳನ್ನ ಮಾಡಲಾಗ್ತಿದೆ.

ಕೊರೊನಾ ‘ಚಂಡಮಾರುತ’
ಸೌತ್ ಆಫ್ರಿಕಾದಲ್ಲೂ ವೈರಸ್ ರಣಕೇಕೆ ಹಾಕ್ತಿದ್ದು, ಸೋಂಕಿತರ ಸಂಖ್ಯೆ 4,08,052ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ 6 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿವಿಲ್ ರಾಂಪೋಸಾ, ದೇಶದಲ್ಲಿ ಕೊರೊನಾ ಚಂಡಮಾರುತ ಎಂಟ್ರಿಯಾಗಿದ್ದು, ಆಘಾತಕಾರಿ ವಿಚಾರ ಅಂತಾ ಕಳವಳ ವ್ಯಕ್ತಪಡಿಸಿದ್ದಾರೆ.

Published On - 3:27 pm, Fri, 24 July 20