ಮೇಯರ್ ಜೊಹ್ರಾನ್ ಕಟು ಭಾಷಣ, ನನ್ನ ಸಹಿಯೂ ಬೇಕು, ಸ್ವಲ್ಪ ವಿಧೇಯತೆಯಿಂದ ವರ್ತಿಸಿ ಎಂದ ಟ್ರಂಪ್

ಭಾರತದ ಪ್ರಮುಖ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಪುತ್ರ ಜೊಹ್ರಾನ್ ಮಮ್ದಾನಿ(Zohran Mamdani) ನ್ಯೂಯಾರ್ಕ್​ನ ಮೇಯರ್ ಹುದ್ದೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಟ್ರಂಪ್ ವಿರೋಧದ ನಡುವೆಯೂ ಅವರು ಗೆದ್ದು ಬೀಗಿದ್ದಾರೆ. ಎಷ್ಟರ ಮಟ್ಟಿಗೆ ಟ್ರಂಪ್ ಅವರನ್ನು ದ್ವೇಷಿಸುತ್ತಿದ್ದರೆಂದರೆ ಒಂದೊಮ್ಮೆ ಚುನಾವಣೆಯಲ್ಲಿ ಸೋತರೆ ಅವರನ್ನು ನ್ಯೂಯಾರ್ಕ್​ನಿಂದ ಹೊರಗಟ್ಟುವುದಾಗಿಯೂ ಎಚ್ಚರಿಕೆ ನೀಡಿದ್ದರು.

ಮೇಯರ್ ಜೊಹ್ರಾನ್ ಕಟು ಭಾಷಣ, ನನ್ನ ಸಹಿಯೂ ಬೇಕು, ಸ್ವಲ್ಪ ವಿಧೇಯತೆಯಿಂದ ವರ್ತಿಸಿ ಎಂದ ಟ್ರಂಪ್
ಟ್ರಂಪ್-ಜೊಹ್ರಾನ್

Updated on: Nov 06, 2025 | 10:28 AM

ವಾಷಿಂಗ್ಟನ್, ನವೆಂಬರ್ 06: ಭಾರತದ ಪ್ರಮುಖ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಪುತ್ರ ಜೊಹ್ರಾನ್ ಮಮ್ದಾನಿ(Zohran Mamdani) ನ್ಯೂಯಾರ್ಕ್ ಮೇಯರ್ ಹುದ್ದೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಟ್ರಂಪ್ ವಿರೋಧದ ನಡುವೆಯೂ ಅವರು ಗೆದ್ದು ಬೀಗಿದ್ದಾರೆ. ಎಷ್ಟರ ಮಟ್ಟಿಗೆ ಟ್ರಂಪ್ ಅವರನ್ನು ದ್ವೇಷಿಸುತ್ತಿದ್ದರೆಂದರೆ ಒಂದೊಮ್ಮೆ ಚುನಾವಣೆಯಲ್ಲಿ ಸೋತರೆ  ಮಮ್ದಾನಿಯವರನ್ನು ನ್ಯೂಯಾರ್ಕ್ನಿಂದ ಹೊರಗಟ್ಟುವುದಾಗಿಯೂ ಎಚ್ಚರಿಕೆ ನೀಡಿದ್ದರು.

ಜೊಹ್ರಾನ್ ಮೇಯರ್ ಆದ ಬಳಿಕ ಮಾಡಿದ ಮೊದಲ ಭಾಷಣದಲ್ಲಿ ಟ್ರಂಪ್ ವಿರುದ್ಧ ಕಹಿ ನುಡಿಗಳನ್ನು ಆಡಿದ್ದಾರೆ. ನಿಮಗೆ ನಾಲ್ಕು ಮಾತು ಹೇಳೋದಿದೆ ಟರ್ನ್​ ದಿ ವಾಲ್ಯೂಮ್ ಅಪ್ ಎಂದು ಹೇಳಿದ್ದರು. ನ್ಯೂಯಾರ್ಕ್ ವಲಸಿಗರ ನಗರವಾಗಿ ಉಳಿಯುತ್ತದೆ, ವಲಸಿಗರಿಂದ ನಿರ್ಮಿಸಲ್ಪಟ್ಟ ನಗರ, ವಲಸಿಗರಿಂದ ನಡೆಸಲ್ಪಡುತ್ತಿದೆ ಮತ್ತು ಇಂದು ರಾತ್ರಿಯಿಂದ, ವಲಸಿಗರ ನೇತೃತ್ವದಲ್ಲಿರಲಿದೆ ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ಟ್ರಂಪ್, ಜೊಹ್ರಾನ್ ಭಾಷಣ ಕೋಪದಿಂದ ಕೂಡಿತ್ತು. ಅವರು ನನ್ನ ಬಳಿ ವಿಧೇಯತೆಯಿಂದ ವರ್ತಿಸಬೇಕು. ಅವರು ತೆಗೆದುಕೊಳ್ಳುವ ಬಹಳಷ್ಟು ನಿರ್ಧಾರಗಳಿಗೆ ನನ್ನ ಸಹಿಯೇ ಬೇಕಾಗುತ್ತದೆ ಎಂಬುದು ನೆನಪಿನಲ್ಲಿಟ್ಟುಕೊಳ್ಳಬೇಕು. ಆರಂಭವನ್ನು ಕೆಟ್ಟದಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: Turn The Volume Up: ನ್ಯೂಯಾರ್ಕ್​ನ ಮೇಯರ್ ಆಗುತ್ತಿದ್ದಂತೆ ಟ್ರಂಪ್​ಗೆ ಎಚ್ಚರಿಕೆ ಕೊಟ್ಟ ಜೊಹ್ರಾನ್ ಮಮ್ದಾನಿ

ಅಸಾಧ್ಯವಾದದ್ದನ್ನು ಸಾಧ್ಯವಾಗಿಸಬಹುದು ಎಂದು ನ್ಯೂಯಾರ್ಕ್ ನಿವಾಸಿಗಳು ಧೈರ್ಯದಿಂದ ಆಶಿಸಿದ್ದರಿಂದ ಮತ್ತು ರಾಜಕೀಯವು ಇನ್ನು ಮುಂದೆ ನಮಗೆ ಮಾಡಬೇಕಾದ ಕೆಲಸವಲ್ಲ, ಬದಲಾಗಿ ನಾವು ಸಕ್ರಿಯವಾಗಿ ರೂಪಿಸುವಂತಹದ್ದು ಎಂದು ನಾವು ಒತ್ತಾಯಿಸಿದ್ದರಿಂದ ನಾವು ಗೆದ್ದಿದ್ದೇವೆ ಎಂದಿದ್ದರು.

ಮತ್ತೊಂದು ಕಡೆ ಭಾರತೀಯ ಮೂಲದ ಡೆಮೊಕ್ರೆಟಿಕ್ ಸೋಷಿಯಾಲಿಸ್ಟ್​ ಮೇಯರ್ ಅಭ್ಯರ್ಥಿ ಜೊಹ್ರಾನ್‌ ಮಮ್ದಾನಿ ಮೇಯರ್‌ ಆದರೆ ನ್ಯೂಯಾರ್ಕ್‌ಗೆ ಹಣಕಾಸು ನೆರವು ನೀಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತದಾರರಿಗೆ ಬೆದರಿಕೆ ಹಾಕಿದ್ದರು.

ಟ್ರೂತ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, ಮೇಯರ್‌ ಚುನಾವಣೆಯಲ್ಲಿ ಮಾಮ್ದಾನಿ ಅವರಿಗೆ ಮತ ನೀಡಿದರೆ, ಅವರು ಮೇಯರ್ ಆದರೆ ನ್ಯೂಯಾರ್ಕ್‌ ನಗರಕ್ಕೆ ನನ್ನಿಂದ ಕನಿಷ್ಠ ಮಟ್ಟದಲ್ಲಿ ಬಿಟ್ಟರೆ ಹೆಚ್ಚಾಗಿ ಫೆಡರಲ್‌ ನಿಧಿ ಸಿಗುವುದು ಅಸಾಧ್ಯವೆಂದು ಬರೆದುಕೊಂಡಿದ್ದರು.

ಜೋಹ್ರಾನ್‌ ಮಮ್ದಾನಿ ಅವರು ಉಗಾಂಡದಲ್ಲಿ ಜನಿಸಿದರೂ ಮೂಲತಃ ಭಾರತೀಯರು. ತಂದೆ ಗುಜರಾತಿ ಹಾಗೂ ತಾಯಿ ಪಂಜಾಬಿಯಾಗಿದ್ದು, ದಕ್ಷಿಣ ಆಫ್ರಿಕಾಗೆ ವಲಸೆ ಹೋಗಿದ್ದರು. ಇವರ ಅಜ್ಜಿ ಓರ್ವ ಸಮಾಜ ಸೇವಕಿ ಎಂದು ಹೇಳಲಾಗಿದೆ. ನ್ಯೂಯಾರ್ಕ್ ನಿವಾಸಿಗಳು ಮಮ್ದಾನಿಯನ್ನು ತಮ್ಮ ಮುಂದಿನ ಮೇಯರ್ ಆಗಿ ಆಯ್ಕೆ ಮಾಡಿದ ನಂತರ ಅಮೆರಿಕ ಸಾರ್ವಭೌಮತ್ವವನ್ನು ಕಳೆದುಕೊಂಡಿದೆ ಎಂದು ಟ್ರಂಪ್ ಆರೋಪಿಸಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:17 am, Thu, 6 November 25