AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹಾರ್ಮುಜ್ ಜಲಸಂಧಿ ಅಮೆರಿಕನ್ ಭೂಭಾಗ’: ಇದು ನಿಮ್ಮ ಭ್ರಮೆ ಎಂದು ಟ್ರಂಪ್​​ಗೆ ಟಾಂಗ್ ನೀಡಿದ ಇರಾನ್

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿಯನ್ನು 'ಅಮೆರಿಕನ್ ಭೂಭಾಗ' ಎಂದು ಕರೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಸಂಚಲನ ಮೂಡಿಸಿದ್ದಾರೆ. ಇರಾನ್ ಮೇಲಿನ ಮಿಲಿಟರಿ ದಿಗ್ಬಂಧನದ ಕುರಿತು ಮಾತನಾಡಿದ ಟ್ರಂಪ್ ಹೇಳಿಕೆಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅದನ್ನು 'ಭ್ರಮೆ' ಎಂದು ಕರೆದಿದೆ. ವಿಶ್ವದ ಶೇ. 20ರಷ್ಟು ಕಚ್ಚಾ ತೈಲ ಸಾಗಣೆಯಾಗುವ ಈ ಜಲಸಂಧಿಯ ವಿಚಾರದಲ್ಲಿ ಅಮೆರಿಕ-ಇರಾನ್ ಸಂಘರ್ಷ ತೀವ್ರಗೊಂಡಿದೆ.

'ಹಾರ್ಮುಜ್ ಜಲಸಂಧಿ ಅಮೆರಿಕನ್ ಭೂಭಾಗ': ಇದು ನಿಮ್ಮ ಭ್ರಮೆ ಎಂದು ಟ್ರಂಪ್​​ಗೆ ಟಾಂಗ್ ನೀಡಿದ ಇರಾನ್
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Aug 22, 2026 | 10:40 AM

Share

ಸೌತ್ ಕ್ಯಾರೋಲಿನಾ, ಆ,22: ಜಾಗತಿಕ ಇಂಧನ ಸಾರಿಗೆಗೆ ಅತ್ಯಂತ ಆಯಕಟ್ಟಿನ ಜಲಮಾರ್ಗವಾಗಿರುವ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ಅಮೆರಿಕದ ಸ್ವಂತ ಭೂಭಾಗ” (American Territory) ಎಂದು ಕರೆದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಸಂಚಲನ ಮೂಡಿಸಿತು.

ಸೌತ್ ಕ್ಯಾರೋಲಿನಾದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಇರಾನ್ ಮೇಲಿನ ಅಮೆರಿಕದ ಮಿಲಿಟರಿ ದಿಗ್ಬಂಧನ ಹಾಗೂ ಸಂಘರ್ಷದ ಕುರಿತು ಪ್ರಸ್ತಾಪಿಸುತ್ತಾ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.

“ನಾವು ಇರಾನ್ ವಿರುದ್ಧದ ಯುದ್ಧದಲ್ಲಿ ಗೆದ್ದಿದ್ದೇವೆಯೇ ಇಲ್ಲವೇ ಎಂಬುದು ನಮಗೇ ತಿಳಿದಿಲ್ಲ. ಏಕೆಂದರೆ ನಾನು ಪ್ರಸ್ತುತ ಹಾರ್ಮುಜ್ ಜಲಸಂಧಿಯನ್ನು ಅಮೆರಿಕದ ಸ್ವಂತ ಪ್ರದೇಶ ಎಂದೇ ಭಾವಿಸಿದ್ದೇನೆ” ಎಂದು ಟ್ರಂಪ್ ಹೇಳಿದ್ದರು. “ನಮ್ಮ ಅಮೆರಿಕನ್ ನೌಕಾಪಡೆಯು ಅಲ್ಲಿ ದಿಗ್ಬಂಧನ ವಿಧಿಸಿದೆ. ನಾವು ಅನುಮತಿ ನೀಡಿದರೆ ಮಾತ್ರ ಯಾವುದೇ ಹಡಗುಗಳು ಅಲ್ಲಿಂದ ಸಂಚರಿಸಲು ಸಾಧ್ಯ” ಎಂದು ಅವರು ಪ್ರತಿಪಾದಿಸಿದ್ದರು.

ಈ ಮುಂಚೆಯೂ ಸೋಶಿಯಲ್ ಮೀಡಿಯಾದಲ್ಲಿ ಹಾರ್ಮುಜ್ ಜಲಸಂಧಿಯ ಪ್ರದೇಶವನ್ನು “ಹೊಸ ಅಮೆರಿಕನ್ ಭೂಭಾಗ” ಎಂದು ಗುರುತಿಸಲಾದ ನಕ್ಷೆಯೊಂದನ್ನು ಟ್ರಂಪ್ ಹಂಚಿಕೊಂಡಿದ್ದರು. “ಇಂದು ರಾತ್ರಿ, ನಮ್ಮ ಬಳಿ ಸಾಕಷ್ಟು ಸಮಯವಿದೆ. ನಾನು ವಾಪಸ್ ಹೋಗಿ ಇರಾನ್ ಮೇಲೆ ಇನ್ನಷ್ಟು ಬಾಂಬ್ ದಾಳಿ ಮಾಡಬೇಕೇ?” ಎಂದು ಸಭೆಯಲ್ಲಿದ್ದ ಜನರ ಬಳಿ ಹಾಸ್ಯ ಚಟಾಕಿಯಂತೆ ಪ್ರಶ್ನಿಸಿದ್ದರು.

ಇರಾನ್ ಪ್ರತಿಕ್ರಿಯೆ: “ಇದು ಟ್ರಂಪ್ ಭ್ರಮೆ!”

ಟ್ರಂಪ್ ಹೇಳಿಕೆಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇರಾನ್‌ನ ಉಪ ವಿದೇಶಾಂಗ ಸಚಿವ ಕಾಜೆಮ್ ಗರೀಬಾಬಾದಿ ಪ್ರತಿಕ್ರಿಯಿಸಿ, “ಹಾರ್ಮುಜ್ ಜಲಸಂಧಿಯು ಅಮೆರಿಕದ ಆಸ್ತಿ ಎಂಬ ಟ್ರಂಪ್ ಅವರ ಹೇಳಿಕೆಯು ಸಂಪೂರ್ಣ ಭ್ರಮೆ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ; ಪಾಕ್ ಸಶಸ್ತ್ರ ಪಡೆಗಳ ಮೇಲೆ ಅಸಿಮ್ ಮುನೀರ್ ಸರ್ವಾಧಿಕಾರ: ಆಪ್ತ ಜನರಲ್ ಸೈಯದ್​ಗೆ ಕಾರ್ಯತಂತ್ರದ ಕಮಾಂಡ್ ಪಟ್ಟ

ಹಾರ್ಮುಜ್ ಜಲಸಂಧಿಯ ಮಹತ್ವವೇನು?

ಹಾರ್ಮುಜ್ ಜಲಸಂಧಿಯು ಇರಾನ್ ಮತ್ತು ಓಮನ್ ದೇಶಗಳ ನಡುವೆ ಇದೆ. ಜಗತ್ತಿನಾದ್ಯಂತ ಸಮುದ್ರ ಮಾರ್ಗದ ಮೂಲಕ ಸರಬರಾಜಾಗುವ ಶೇ. 20 ರಷ್ಟು (ಐದನೇ ಒಂದು ಭಾಗ) ಕಚ್ಚಾ ತೈಲವು ಇದೇ ಜಲಸಂಧಿಯ ಮೂಲಕ ಹಾದುಹೋಗುತ್ತದೆ.ಕಳೆದ ಸುಮಾರು 6 ತಿಂಗಳುಗಳಿಂದ ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ನಡೆಯುತ್ತಿದ್ದು, ತೈಲ ಸಾರಿಗೆಗೆ ತೀವ್ರ ಅಡಚಣೆಯುಂಟಾಗಿದೆ. U.S. ಸೆಂಟ್ರಲ್ ಕಮಾಂಡ್ ನೀಡಿದ ಮಾಹಿತಿಯಂತೆ, ಅಮೆರಿಕನ್ ಸೇನೆಯು ಇದುವರೆಗೆ 68 ವಾಣಿಜ್ಯ ಹಡಗುಗಳ ಮಾರ್ಗವನ್ನು ಬದಲಾಯಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ