AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕಾಶದಲ್ಲಿ ಅಪಾಯದಿಂದ ಪಾರಾದ ಟ್ರಂಪ್: ಮರೀನ್ ಒನ್ ಹೆಲಿಕಾಪ್ಟರ್ ಬಳಿ ಬಂದ ವಿಮಾನ, ಎಫ್‌ಎಎ ತನಿಖೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮರೀನ್ ಒನ್ ಹೆಲಿಕಾಪ್ಟರ್ ಮತ್ತು ವಾಣಿಜ್ಯ ವಿಮಾನವೊಂದು ವಾಷಿಂಗ್ಟನ್ ಆಕಾಶದಲ್ಲಿ ಅಪಾಯಕಾರಿಯಾಗಿ ಹತ್ತಿರ ಬಂದಿವೆ. ಈ 'ಮುಖಾಮುಖಿ' ಘಟನೆ ವಿಮಾನಯಾನ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿದ್ದು, ಕಟ್ಟುನಿಟ್ಟಾದ ಎಫ್​ಎಎ ನಿಯಮಗಳ ಉಲ್ಲಂಘನೆಯ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ. ಅಧ್ಯಕ್ಷರ ಸುರಕ್ಷತೆಗೆ ಧಕ್ಕೆ ಇಲ್ಲದಿದ್ದರೂ, ಭವಿಷ್ಯದಲ್ಲಿ ಇಂತಹ ಅಪಾಯಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಆಕಾಶದಲ್ಲಿ ಅಪಾಯದಿಂದ ಪಾರಾದ ಟ್ರಂಪ್: ಮರೀನ್ ಒನ್ ಹೆಲಿಕಾಪ್ಟರ್ ಬಳಿ ಬಂದ ವಿಮಾನ, ಎಫ್‌ಎಎ ತನಿಖೆ
ಡೊನಾಲ್ಡ್​ ಟ್ರಂಪ್
ನಯನಾ ರಾಜೀವ್
|

Updated on: Aug 06, 2026 | 7:35 AM

Share

ವಾಷಿಂಗ್ಟನ್,ಆಗಸ್ಟ್​ 06: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಪ್ರಯಾಣಿಸುತ್ತಿದ್ದ ಸೇನೆಯ ‘ಮರೀನ್ ಒನ್’ ಹೆಲಿಕಾಪ್ಟರ್ ಸಮೀಪ ಅಮೆರಿಕದ ವಾಣಿಜ್ಯ ವಿಮಾನವೊಂದು ಬಂದಿರುವ ಘಟನೆ ನಡೆದಿದೆ. ವಾಷಿಂಗ್ಟನ್ ಡಿಸಿ ವಿಮಾನ ನಿಲ್ದಾಣದ ಬಳಿ ಆಗಸ್ಟ್ 4 ರಂದು ಮಧ್ಯಾಹ್ನ 2.30 ರ ಸುಮಾರಿಗೆ ಈ ತಾಂತ್ರಿಕ ಅಡಚಣೆ ಸಂಭವಿಸಿದೆ.ಶ್ವೇತಭವನದಿಂದ ಜಂಟಿ ಸೇನಾ ನೆಲೆಗೆ ಟ್ರಂಪ್ ಅವರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಹಾರಾಟ ನಡೆಸುತ್ತಿದ್ದಾಗ, ಅದೇ ಮಾರ್ಗದಲ್ಲಿ ಪ್ರಯಾಣಿಕರ ಜೆಟ್ ವಿಮಾನವೊಂದು ಟೇಕ್-ಆಫ್ ಆಗಿತ್ತು.ವಾಯು ಸಂಚಾರ ನಿಯಂತ್ರಕರ ನಡುವಿನ ತಾಂತ್ರಿಕ ದೋಷದಿಂದಾಗಿ ‘ಎನ್ವಾಯ್ ಏರ್’ ವಿಮಾನವು ಮೆರೈನ್ ಒನ್ ಸಾಗುತ್ತಿದ್ದ ಮಾರ್ಗದಲ್ಲೇ ಭಾರಿ ಸಮೀಪದಲ್ಲಿ ಹಾದುಹೋಗಿದೆ.

ಅಧ್ಯಕ್ಷರಿಗೆ ಅಪಾಯವಿಲ್ಲ: ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ಶ್ವೇತಭವನದ ವಕ್ತಾರ ಕುಶ್ ದೇಸಾಯಿ, “ಮರೀನ್ ಒನ್ ವಿಮಾನಗಳನ್ನು ವಿಶ್ವದ ಅತ್ಯುನ್ನತ ಪೈಲಟ್‌ಗಳು ನಿರ್ವಹಿಸುತ್ತಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುರಕ್ಷತೆಗೆ ಯಾವುದೇ ಕ್ಷಣದಲ್ಲೂ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಹೆಲಿಕಾಪ್ಟರ್ ಮತ್ತು ವಾಣಿಜ್ಯ ವಿಮಾನವೆರಡೂ ಯಾವುದೇ ಅಪಘಾತವಿಲ್ಲದೆ ನಿಗದಿತ ನಿಲ್ದಾಣಗಳಲ್ಲಿ ಸುರಕ್ಷಿತವಾಗಿ ಇಳಿದಿವೆ.

ಜನವರಿ 2025 ರ ಭೀಕರ ದುರಂತ: ಜನವರಿ 29, 2025 ರಂದು ವಾಷಿಂಗ್ಟನ್‌ನಲ್ಲಿ ಬ್ಲ್ಯಾಕ್ ಹಾಕ್ ಮಿಲಿಟರಿ ಹೆಲಿಕಾಪ್ಟರ್ ಮತ್ತು ಪ್ರಯಾಣಿಕರ ವಿಮಾನದ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ 67 ಜನರು ಮೃತಪಟ್ಟಿದ್ದರು.

ಬಿಗಿಗೊಳಿಸಲಾದ ಭದ್ರತಾ ನಿಯಮಗಳು: ಈ ಘಟನೆಯ ನಂತರ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಮಿಲಿಟರಿ ಹೆಲಿಕಾಪ್ಟರ್ ಮತ್ತು ಪ್ರಯಾಣಿಕರ ವಿಮಾನಗಳು ಒಂದೇ ಮಾರ್ಗದಲ್ಲಿ ಒಟ್ಟಿಗೆ ಸಾಗದಂತೆ ಎಫ್‌ಎಎ (FAA) ನಿಯಮಗಳನ್ನು ಅತ್ಯಂತ ಬಿಗಿಗೊಳಿಸಿತ್ತು. ಇದೀಗ ಆ ನಿಯಮ ಪಾಲನೆಯಲ್ಲಿ ಲೋಪವಾಗಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ. ಅಮೆರಿಕ ಅಧ್ಯಕ್ಷರು ಪ್ರಯಾಣಿಸುವ ಹೆಲಿಕಾಪ್ಟರ್‌ಗೆ ‘ಮರೀನ್ ಒನ್’ ಎಂದು ಕರೆಯಲಾಗುತ್ತದೆ. ಇದಕ್ಕೆ ವಿಶ್ವದಲ್ಲೇ ಅತ್ಯಂತ ಅನುಭವಸ್ಥ ಮಿಲಿಟರಿ ಪೈಲಟ್‌ಗಳು ಚಾಲಕರಾಗಿರುತ್ತಾರೆ.

ಮತ್ತಷ್ಟು ಓದಿ: ಇರಾನ್ ಜತೆ ಮತ್ತೆ ಶಾಂತಿ ಮಾತುಕತೆ, ದಾಳಿ ರದ್ದು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು

ಆ ದುರಂತದ ನಂತರ ವಾಷಿಂಗ್ಟನ್ ಆಕಾಶದಲ್ಲಿ ಹೆಲಿಕಾಪ್ಟರ್‌ಗಳ ಚಲನವಲನದ ಸಮಯದಲ್ಲಿ ಇತರ ವಿಮಾನಗಳ ಸಂಚಾರವನ್ನು ಕಡ್ಡಾಯವಾಗಿ ತಡೆಹಿಡಿಯುವ ನಿಯಮವನ್ನು ಎಫ್‌ಎಎ ಜಾರಿಗೆ ತಂದಿತ್ತು. ಈ ನಿಯಮ ಇರುವಾಗಲೂ ಮೆರೈನ್ ಒನ್ ಹೆಲಿಕಾಪ್ಟರ್ ಸಾಗುವಾಗ ಪ್ರಯಾಣಿಕ ವಿಮಾನಕ್ಕೆ ಟೇಕ್-ಆಫ್ ಮಾಡಲು ಅನುಮತಿ ನೀಡಿದ್ದು ಹೇಗೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.

ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣವು ಅಮೆರಿಕದ ಅತ್ಯಂತ ಐತಿಹಾಸಿಕ ಹಾಗೂ ಜನನಿಬಿಡ ವಾಯುಮಾರ್ಗಗಳಲ್ಲಿ ಒಂದಾಗಿದೆ. ಈ ಘಟನೆಯ ನಂತರ ವಾಯು ಸಂಚಾರ ನಿಯಂತ್ರಕರ ಶಿಫ್ಟ್ ಸಮಯ ಮತ್ತು ವಿಮಾನ ನಿಯಂತ್ರಣ ತಂತ್ರಜ್ಞಾನದಲ್ಲಿ ತಕ್ಷಣದ ತಿದ್ದುಪಡಿ ತರಲು ಎಫ್‌ಎಎ ಸೂಚಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಓಂಪ್ರಕಾಶ್ ರಾವ್ ನನ್ನ ಗುರುಗಳು: ‘ಪ್ರೇಮದ ಊರಲಿ’ ಡೈರೆಕ್ಟರ್ ಹೆಮ್ಮೆಯ ಮಾತು
ಓಂಪ್ರಕಾಶ್ ರಾವ್ ನನ್ನ ಗುರುಗಳು: ‘ಪ್ರೇಮದ ಊರಲಿ’ ಡೈರೆಕ್ಟರ್ ಹೆಮ್ಮೆಯ ಮಾತು
ಇ-ಕೆವೈಸಿ ನೆಪದಲ್ಲಿ ಹಣ ವಸೂಲಿ
ಇ-ಕೆವೈಸಿ ನೆಪದಲ್ಲಿ ಹಣ ವಸೂಲಿ
ಹನೂರಿನ ಇಂಡಿಗನತ್ತ-ಮೆಂದಾರೆ ಗ್ರಾಮಸ್ಥರ ನರಕಯಾತನೆ
ಹನೂರಿನ ಇಂಡಿಗನತ್ತ-ಮೆಂದಾರೆ ಗ್ರಾಮಸ್ಥರ ನರಕಯಾತನೆ
‘ಪ್ರೇಮದ ಊರಲಿ’ ನಟಿಯರಿಗೆ ಕನ್ನಡದ ಬಗ್ಗೆ ಸಂಕಲ್ಪ ಮಾಡಿಸಿದ ರಂಗಾಯಣ ರಘು
‘ಪ್ರೇಮದ ಊರಲಿ’ ನಟಿಯರಿಗೆ ಕನ್ನಡದ ಬಗ್ಗೆ ಸಂಕಲ್ಪ ಮಾಡಿಸಿದ ರಂಗಾಯಣ ರಘು
ಕೊನೆಗೂ ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್
ಕೊನೆಗೂ ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್
ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳಿಗೆ ಸಂಪುಟ ಅನುಮೋದನೆ
ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳಿಗೆ ಸಂಪುಟ ಅನುಮೋದನೆ
ದಸರಾ, ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಶಾಕ್: ಹಾಲಿನ ದರ 8 ರೂ. ಹೆಚ್ಚಳ
ದಸರಾ, ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಶಾಕ್: ಹಾಲಿನ ದರ 8 ರೂ. ಹೆಚ್ಚಳ
ಕೆಪಿಎಸ್​ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ
ಕೆಪಿಎಸ್​ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ
ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ
ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್