ದಶಕದಲ್ಲಿ ಸಂಭವಿಸಿದ ಪ್ರಬಲ ಭೂಕಂಪವು ಟರ್ಕಿ (Turkey) ಮತ್ತು ಸಿರಿಯಾ ( Syria) ಎರಡನ್ನೂ ಬೆಚ್ಚಿಬೀಳಿಸಿದ್ದು ಸಾವಿನ ಸಂಖ್ಯೆ 33,000 ದಾಟಿದೆ. ಆರು ದಿನಗಳ ವಿನಾಶದ ನಂತರವೂ ಅವಶೇಷಗಳ ಒಳಗಿನಿಂದ ಬದುಕುಳಿದವರ ವರದಿಗಳು ಭೂಕಂಪ ಪೀಡಿತ ಪ್ರದೇಶದಿಂದ ಬರುತ್ತಿವೆ.ಟರ್ಕಿಯ ಗಾಜಿಯಾಂಟೆಪ್(Gaziantep) ಪ್ರದೇಶದ ಆಸ್ಪತ್ರೆಯ ವಿಡಿಯೊವೊಂದು ಈಗ ವೈರಲ್ ಆಗಿದೆ. ಭೂಕಂಪದಲ್ಲಿ ಅಲ್ಲಿನ ಕಟ್ಟಡಗಳು ಕುಸಿದು ಬೀಳುತ್ತಿರುವಾಗ ಆಸ್ಪತ್ರೆಯ ನಿಯೊ ನಾಟಲ್ ಯುನಿಟ್ ನಲ್ಲಿ ಇನ್ಕ್ಯುಬೇಟರ್ನಲ್ಲಿರಿಸಿದ ಮಕ್ಕಳನ್ನು ಕಾಪಾಡಲು ನರ್ಸ್‌ಗಳು ಧಾವಿಸುತ್ತಿರುವುದು ವಿಡಿಯೊದಲ್ಲಿದೆ.
Video from the night of the #Turkiye #earthquake showing how 2 brave nurses – instead of fleeing – ran into the neonatal care unit at #Gaziantep Hospital to stop the baby incubators falling over.#TurkiyeDeprem #TurkiyeEarthquarke #Turkey #TurkeyEarthquake #TurkeyQuake pic.twitter.com/kvLMejP9eX
— Andrew Hopkins (@achopkins1) February 12, 2023
ಗಾಜಿಯಾಂಟೆಪ್ ದೇಶದ ಅತ್ಯಂತ ಕೆಟ್ಟ ಪೀಡಿತ ಸ್ಥಳಗಳಲ್ಲಿ ಒಂದಾಗಿದೆ. ವಿಡಿಯೊ ಕ್ಲಿಪ್ ಆಸ್ಪತ್ರೆಯ ಘಟಕದ ಒಳಗಿನಿಂದ ಸಿಸಿಟಿವಿ ರೆಕಾರ್ಡಿಂಗ್ ಆಗಿದ್ದು ಇದನ್ನು ಮೊದಲು ಟರ್ಕಿಶ್ ಪತ್ರಕರ್ತ ಆಂಡ್ರ್ಯೂ ಹಾಪ್ಕಿನ್ಸ್ ಹಂಚಿಕೊಂಡಿದ್ದಾರೆ. ಟರ್ಕಿ ಭೂಕಂಪದ ರಾತ್ರಿಯ ವಿಡಿಯೊದಲ್ಲಿ ಇಬ್ಬರು ದಾದಿಯರು ಪಲಾಯನ ಮಾಡುವ ಬದಲು ಬೇಬಿ ಇನ್‌ಕ್ಯುಬೇಟರ್‌ಗಳು ಬೀಳುವುದನ್ನು ತಡೆಯಲು ಗಾಜಿಯಾಂಟೆಪ್ ಆಸ್ಪತ್ರೆಯ ನವಜಾತ ಶಿಶುಗಳ ಆರೈಕೆ ಘಟಕಕ್ಕೆ ಧಾವಿಸಿರುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Turkey Earthquake: 34 ಸಾವಿರ ದಾಟಿದ ಸಾವಿನ ಸಂಖ್ಯೆ; ಟರ್ಕಿಯಲ್ಲಿ ಬಿಲ್ಡಿಂಗ್ ಕಾಂಟ್ರಾಕ್ಟರ್ಸ್ಗೆ ಬಂಧನ ಭೀತಿ
ಆಸ್ಪತ್ರೆಯ ಕಟ್ಟಡದ ನಡುಗುತ್ತಿದ್ದು ಇಬ್ಬರೂ ನರ್ಸ್‌ಗಳು ಇನ್‌ಕ್ಯುಬೇಟರ್‌ಗಳನ್ನು ಹಿಡಿದುಕೊಂಡಿರುವುದು ಕಾಣಿಸುತ್ತದೆ. ಪ್ರಸ್ತುತ ಅಂಕಿಅಂಶಗಳ ಪ್ರಕಾರ, ಶೋಧ ಮತ್ತು ರಕ್ಷಣಾ ತಂಡಗಳು ಅವಶೇಷಗಳಲ್ಲಿ ಹೆಚ್ಚಿನ ಮೃತದೇಹಗಳನ್ನು ಪತ್ತೆ ಮಾಡುತ್ತಿದ್ದು ಸುಮಾರು 33,179 ಜನರು ಸತ್ತಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ