ವಿಶ್ವದಲ್ಲಿ ಅನ್ಯಗ್ರಹ ಜೀವಿಗಳು ಇದ್ದಾರೆಯೇ?, ಭೂಮಿಯ ಹೊರತಾಗಿ ಬೇರೆ ಯಾವುದೇ ಗ್ರಹದಲ್ಲಿ ಜೀವಿಗಳಿವೆಯೇ, ಇದು ವಿಜ್ಞಾನಿಗಳಿಗೆ ಇಲ್ಲಿಯವರೆಗೆ ಕಂಡುಹಿಡಿಯಲು ಸಾಧ್ಯವಾಗದ ಪ್ರಶ್ನೆಯಾಗಿದೆ. ಆದಾಗ್ಯೂ ಪ್ರಪಂಚದಾದ್ಯಂತ ಅನೇಕ ಮಂದಿ ಅನ್ಯಗ್ರಹ ಜೀವಿ ಅಥವಾ ಹಾರುವ ತಟ್ಟೆಯನ್ನು ನೋಡಿದ್ದೇನೆ ಎಂದು ಹೇಳಿದವರುಂಟು. ಆದರೆ ಇದೀಗ ಮೆಕ್ಸಿಕೋದ ಸಂಸತ್ನಲ್ಲಿ ಎರಡು ಏಲಿಯನ್ಗಳ ಶವವನ್ನು ಪ್ರದರ್ಶಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಸುದ್ದಿ ಇಡೀ ವಿಶ್ವದಲ್ಲೇ ಸಂಚಲನ ಮೂಡಿಸಿದೆ.
ಮೆಕ್ಸಿಕನ್ ಸಂಸತ್ತಿನಲ್ಲಿ ಎರಡು ಅನ್ಯಗ್ರಹ ಜೀವಿಗಳ ದೇಹಗಳನ್ನು ಪ್ರದರ್ಶಿಸಲಾಯಿತು. ಈ ಶವಗಳು ಏಲಿಯನ್ಸ್ ಇರುವಿಕೆಗೆ ಸಂಬಂಧಿಸಿದಂತೆ ವಿಶ್ವದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದಂತಾಗಿದೆ.
ಪೆರುವಿನ ಕುಜ್ಕೊದಿಂದ ಈ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಎರಡು ಮಾನವೇತರ ಜೀವಿಗಳ ಅವಶೇಷಗಳನ್ನು ಮೆಕ್ಸಿಕನ್ ಸಂಸತ್ತಿನಲ್ಲಿ ಪ್ರಸ್ತುತಪಡಿಸಲಾಯಿತು. ಈ ಎರಡೂ ದೇಹಗಳನ್ನು 2017 ರಲ್ಲಿ ಪೆರುವಿನ ಕುಜ್ಕೊದಿಂದ ವಶಪಡಿಸಿಕೊಳ್ಳಲಾಗಿದೆ.
ಈ ಎರಡೂ ದೇಹಗಳು ಸುಮಾರು 700 ವರ್ಷಗಳು ಮತ್ತು 1800 ವರ್ಷಗಳಷ್ಟು ಹಳೆಯವು. ಈ ಎರಡೂ ಏಲಿಯನ್ಸ್ಗಳು ತಮ್ಮ ಕೈಯಲ್ಲಿ ಮೂರು ಬೆರಳುಗಳನ್ನು ಮತ್ತು ಉದ್ದನೆಯ ತಲೆಗಳನ್ನು ಹೊಂದಿದ್ದವು. ಮೆಕ್ಸಿಕನ್ ಯುಫಾಲಜಿಸ್ಟ್ ಜೈಮ್ ಮೌಸನ್ ಮಾನವರಲ್ಲದ ಜೀವಿಗಳ ಅವಶೇಷಗಳನ್ನು ಅನ್ಯಗ್ರಹ ಜೀವಿಗಳ ಶವಗಳೆಂದು ವಿವರಿಸಿದ್ದಾರೆ.
ಜೈಮ್ ಮಾವ್ಸನ್ ದಶಕಗಳಿಂದ ಇಂತಹ ವಿಚಾರಗಳ ಮೇಲೆ ಕೆಲಸ ಮಾಡುತ್ತಿದ್ದಾರೆ.ಅನ್ಯಗ್ರಹ ಜೀವಿಗಳ ಕುರಿತು ಅವರ ಸಂಶೋಧನೆಯು ಸಾಕಷ್ಟು ದೀರ್ಘವಾಗಿದೆ. ಎರಡು ಪೆಟ್ಟಿಗೆಗಳಲ್ಲಿ ಎರಡು ಮೃತ ದೇಹಗಳನ್ನು ಇಟ್ಟಿರುವುದನ್ನು ನೋಡಬಹುದಾಗಿದೆ. ಈ ಮೃತ ದೇಹಗಳು ಮನುಷ್ಯರಿಗಿಂತ ಭಿನ್ನವಾಗಿವೆ ಎಂದು ಹೇಳಲಾಗುತ್ತಿದೆ.
ಮತ್ತಷ್ಟು ಓದಿ:Aliens: ಅನ್ಯಗ್ರಹ ಜೀವಿಗಳ ಕುರಿತು ಅಧ್ಯಯನ ನಡೆಸಲಿದೆ ಚಂದ್ರಯಾನ-3
ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಂಸತ್ ಭವನದ ಸಿಬ್ಬಂದಿಗಳು ಎಂದು ಹೇಳಲಾದ ಇಬ್ಬರು ಶವಪಟ್ಟಿಗೆಯಲ್ಲಿದ್ದ ಏಲಿಯನ್ ಗಳ ಶವಗಳನ್ನು ಪ್ರದರ್ಶಿಸಿದ್ದಾರೆ. ಪಾರದರ್ಶಕ ಪೆಟ್ಟಿಗೆ ಒಳಗೆ ಇರಿಸಿದ ಎರಡು ಏಲಿಯನ್ ಅಥವಾ ಮನುಷ್ಯೇತರ ದೇಹಗಳ ಸಣ್ಣ ಗಾತ್ರದ ಶವಗಳನ್ನು ಪ್ರದರ್ಶಿಸಲಾಗಿದೆ. ಇದನ್ನು ವೀಕ್ಷಿಸುತ್ತಿದ್ದ ಜನರು ಹಾಗೂ ಗಣ್ಯರು ಆಘಾತಕ್ಕೆ ಒಳಗಾಗಿದ್ದಾರೆ.
Scientists unveiling two alleged alien corpses took place in Mexico, which are retrieved from Cusco, Peru. pic.twitter.com/rjfz9IMf37
— Indian Tech & Infra (@IndianTechGuide) September 13, 2023
ಇನ್ನು ರೇಡಿಯೋ ಕಾರ್ಬನ್ ಡೇಟಿಂಗ್ ತಂತ್ರಜ್ಞಾನದ ಮೂಲಕ ‘ಏಲಿಯನ್’ ಮಾದರಿಗಳಲ್ಲಿನ ಡಿಎನ್‌ಎ ಗೆ ಸಂಬಂಧಿಸಿದ ಮಾಹಿತಿಯನ್ನು ಹೊರ ತೆಗೆಯುವಲ್ಲಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಫಲರಾಗಿದ್ದಾರೆ ಎಂದು ಹೇಳಲಾಗಿದ್ದು, ಈ ಮಾದರಿಗಳು ನಮಗೆ ಪರಿಚಿತವಾಗಿರುವ ಭೂ ಪ್ರದೇಶದ ವಿಕಸನದ ಯಾವ ಭಾಗಕ್ಕೂ ಹೊಂದಾಣಿಕೆಯಾಗುವುದಿಲ್ಲ ಎಂದು ಹೇಳಲಾಗಿದೆ.
Snopes.com ನ ವರದಿ ಪ್ರಕಾರ, ಏಲಿಯನ್ ಎಂಬುದು ಕಟ್ಟು ಕಥೆ ಎಂದು ಹೇಳಿದೆ. ಸಂರಕ್ಷಿತ ಶವವು ಮಗುವಿನದ್ದು ಎಂದು ನಂಬಲಾಗಿದೆ. ಸಾಕಷ್ಟು ಮಮ್ಮಿ ಸಂಶೋಧಕರು ಏಲಿಯನ್ಸ್ ಶವಗಳ ಪ್ರದರ್ಶನ ಖಂಡಿಸಿ ಪತ್ರವೊಂದನ್ನು ಬರೆದಿದ್ದು, ಇದು ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾನದಂಡಗಳನ್ನು ಉಲ್ಲಂಘಿಸಿದೆ ಎಂದು ದೂರಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ