AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡೆದು ಆಳಿದ ಬ್ರಿಟನ್‌ಗೆ ಈಗ ಒಡೆಯುವ ಭೀತಿ: ಯುಕೆ 4 ಭಾಗವಾಗುವುದು ನಿಜವೇ? ಇಲ್ಲಿದೆ ಮಾಹಿತಿ

ಬ್ರೆಕ್ಸಿಟ್ ನಂತರ ಯುಕೆ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸ್ಕಾಟ್ಲೆಂಡ್, ಉತ್ತರ ಐರ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಪ್ರತ್ಯೇಕತೆಯ ಕೂಗು ಹೆಚ್ಚಾಗಿದೆ. ಸ್ಕಾಟ್ಲೆಂಡ್ ಸ್ವಾತಂತ್ರ್ಯಕ್ಕೆ, ಉತ್ತರ ಐರ್ಲೆಂಡ್ ಐರ್ಲೆಂಡ್ ಗಣರಾಜ್ಯದೊಂದಿಗೆ ವಿಲೀನಕ್ಕೆ ಪಟ್ಟುಹಿಡಿದಿವೆ. ಮುಂದಿನ 5-10 ವರ್ಷಗಳಲ್ಲಿ ಬ್ರಿಟನ್ 4 ಭಾಗಗಳಾಗಿ ವಿಭಜನೆಯಾಗುವ ಸಾಧ್ಯತೆಯಿದೆ. ಇದು ಬ್ರಿಟನ್‌ನ ಜಾಗತಿಕ ಪ್ರಭಾವವನ್ನು ಕುಸಿಯುವಂತೆ ಮಾಡಲಿದೆ.

ಒಡೆದು ಆಳಿದ ಬ್ರಿಟನ್‌ಗೆ ಈಗ ಒಡೆಯುವ ಭೀತಿ: ಯುಕೆ 4 ಭಾಗವಾಗುವುದು ನಿಜವೇ? ಇಲ್ಲಿದೆ ಮಾಹಿತಿ
ಆ್ಯಂಡಿImage Credit source: re
ನಯನಾ ರಾಜೀವ್
|

Updated on: Sep 14, 2026 | 1:39 PM

Share

ಲಂಡನ್, ಸೆಪ್ಟೆಂಬರ್ 14: ಜಗತ್ತಿನ ಹಲವು ದೇಶಗಳನ್ನು ಒಡೆದು ಆಳಿದ ಬ್ರಿಟನ್ ಇಂದು ತನ್ನದೇ ಅಸ್ತಿತ್ವವನ್ನು ಉಳಿಸಿಕೊಳ್ಳಲು ತೀವ್ರ ಆಂತರಿಕ ಸಂಘರ್ಷ ಎದುರಿಸುತ್ತಿದೆ. ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್ ಎಂಬ ನಾಲ್ಕು ಪ್ರಾಂತ್ಯಗಳನ್ನು ಒಳಗೊಂಡಿರುವ ಯುಕೆ ಒಕ್ಕೂಟವು ಭವಿಷ್ಯದಲ್ಲಿ 4 ಪ್ರತ್ಯೇಕ ಭಾಗಗಳಾಗಿ ಒಡೆಯುವ ಸಾಧ್ಯತೆಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬಂದ ನಿರ್ಧಾರವು ಸ್ಕಾಟ್ಲೆಂಡ್ ಮತ್ತು ಉತ್ತರ ಐರ್ಲೆಂಡ್‌ಗೆ ಇಷ್ಟವಿರಲಿಲ್ಲ. ಇವು ಯುರೋಪಿಯನ್ ಒಕ್ಕೂಟದ ಭಾಗವಾಗಿಯೇ ಉಳಿಯಲು ಬಯಸಿದ್ದರಿಂದ ಲಂಡನ್ ಸರ್ಕಾರದ ಮೇಲಿನ ಅಸಮಾಧಾನ ಹೆಚ್ಚಾಯಿತು.

ಸ್ಕಾಟ್ಲೆಂಡ್ ಸ್ವಾತಂತ್ರ್ಯದ ಕೂಗು: ಸ್ಕಾಟ್ಲೆಂಡ್ ನ್ಯಾಷನಲ್ ಪಾರ್ಟಿ  ನಿರಂತರವಾಗಿ 2ನೇ ಜನಮತಗಣನೆಗೆ ಪಟ್ಟುಹಿಡಿದಿದೆ. ತಮ್ಮದೇ ಆದ ತೈಲ ಸಂಪತ್ತು ಹಾಗೂ ಆರ್ಥಿಕ ಸ್ವಾವಲಂಬನೆ ಹೊಂದಿರುವ ಸ್ಕಾಟ್ಲೆಂಡ್, ಇಂಗ್ಲೆಂಡ್‌ನ ಅಧೀನದಿಂದ ಸಂಪೂರ್ಣ ಸ್ವತಂತ್ರವಾಗಲು ಬಯಸಿದೆ.

ಉತ್ತರ ಐರ್ಲೆಂಡ್ ಏಕೀಕರಣ: ಬ್ರೆಕ್ಸಿಟ್ ನಂತರದ ವ್ಯಾಪಾರ ನಿಯಮಗಳು ಉತ್ತರ ಐರ್ಲೆಂಡ್ ಅನ್ನು ಬ್ರಿಟನ್‌ನಿಂದ ದೂರ ಮಾಡಿ, ಪಕ್ಕದ ಐರ್ಲೆಂಡ್ ಗಣರಾಜ್ಯಕ್ಕೆ ಹತ್ತಿರವಾಗಿಸಿವೆ. ಅಲ್ಲಿನ ‘ಶಿನ್ ಫೇನ್’ ಪಕ್ಷವು ಐರ್ಲೆಂಡ್ ಜತೆ ಮರುವಿಲೀನಗೊಳ್ಳುವ ಬೇಡಿಕೆಯನ್ನು ಗಟ್ಟಿಗೊಳಿಸಿದೆ. ಆರ್ಥಿಕ ನಿರ್ಲಕ್ಷ್ಯ ಮತ್ತು ಸ್ವಾಯತ್ತತೆಯ ಕೊರತೆಯಿಂದಾಗಿ ವೇಲ್ಸ್ ಪ್ರಾಂತ್ಯದಲ್ಲೂ ಪ್ರತ್ಯೇಕತಾವಾದಿ ‘ಪ್ಲೈಡ್ ಸಿಮ್ರು’ ಚಳವಳಿ ಬಲಗೊಳ್ಳುತ್ತಿದೆ.

ಸಂಭವನೀಯ ಕಾಲಮಿತಿ: ಇದು ರಾತ್ರೋರಾತ್ರಿ ಸಂಭವಿಸುವುದಿಲ್ಲ. ಬ್ರಿಟಿಷ್ ಕಾನೂನಿನ ಪ್ರಕಾರ ಜನಮತಗಣನೆಗೆ ಲಂಡನ್ ಸಂಸತ್ತಿನ ಅನುಮೋದನೆ ಕಡ್ಡಾಯ. ಆದಾಗ್ಯೂ, ರಾಜಕೀಯ ವಿಶ್ಲೇಷಕರ ಪ್ರಕಾರ ಮುಂದಿನ 5 ರಿಂದ 10 ವರ್ಷಗಳಲ್ಲಿ (2030ರ ಹೊತ್ತಿಗೆ) ಸ್ಕಾಟ್ಲೆಂಡ್ ಅಥವಾ ಉತ್ತರ ಐರ್ಲೆಂಡ್‌ನಲ್ಲಿ ಗಡಿ ಜನಾಭಿಪ್ರಾಯ ಸಂಗ್ರಹಣೆ ನಡೆದು ಯುಕೆ ವಿಭಜನೆಯ ಪ್ರಕ್ರಿಯೆಗೆ ನಾಂದಿ ಹಾಡುವ ಸಾಧ್ಯತೆಯಿದೆ.

ಜಾಗತಿಕ ಪರಿಣಾಮ: ಯುಕೆ ಒಡೆದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬ್ರಿಟನ್‌ನ ಪ್ರಭಾವ, ಆರ್ಥಿಕ ಶಕ್ತಿ ಮತ್ತು ಜಾಗತಿಕ ಸೇನಾ ಪ್ರಾಬಲ್ಯ ತೀವ್ರವಾಗಿ ಕುಸಿಯಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us