ಬೆಂಗಳೂರು: ಇಡೀ ಜಗತ್ತನ್ನೇ ಹಿಂಡಿ ಹೆಪ್ಪೆ ಮಾಡಿದ ಕೊರೊನಾ ಅಂತ್ಯವಾಗುವ ಸಮಯ ಬಂದಿದೆ. ಆಕ್ಸ್ ಫರ್ಡ್ ವಿವಿ ಹಾಗೂ ಆಸ್ಟ್ರಾಜೆನೆಕಾ ಕಂಪನಿ ಜೊತೆಗೂಡಿ ಅಭಿವೃದ್ಧಿ ಪಡಿಸಿರುವ ಲಸಿಕೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಲಂಡನ್ನ ಪ್ರಮುಖ ಆಸ್ಪತ್ರೆಗಳಿಗೆ ಆಕ್ಸ್ ಫರ್ಡ್ ವಿವಿ ಸೂಚನೆ ನೀಡಿದೆ.
ನವೆಂಬರ್ 2ರಿಂದ ಮೊದಲ ಹಂತದಲ್ಲಿ ಕೊರೊನಾ ಸೋಂಕಿತರಿಗೆ ಆಕ್ಸ್ ಫರ್ಡ್ ಲಸಿಕೆ ನೀಡಲು ಸಿದ್ಧತೆ ನಡೆದಿದೆ. ಮೊದಲು ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡಲಾಗುತ್ತೆ. ಈ ಲಸಿಕೆ ಸಕ್ಸಸ್ ಆದ್ರೆ ಎಲ್ಲಾ ದೇಶಗಳು ಕೊರೊನಾ ಮುಕ್ತವಾಗಲಿವೆ. ನಾನಾ ದೇಶಗಳಲ್ಲಿ ಕೊರೊನಾ ಲಸಿಕೆ ಕಂಡು ಹಿಡಿಯಲಾಗುತ್ತಿದೆ. ಆದರೆ ಇಲ್ಲಿಯ ವರೆಗೂ ಯಾವ ಲಸಿಕೆಯೂ ತನ್ನ ಪ್ರಯೋಗಗಳನ್ನು ಯಶಸ್ವಿಯಾಗಿಸಿಲ್ಲ. ಆದರೆ ಆಕ್ಸ್ ಫರ್ಡ್ ವಿವಿ ತಯಾರಿಸುತ್ತಿರುವ ಲಸಿಕೆ ಕೊನೇ ಹಂತಕ್ಕೆ ತಲುಪಿದ್ದು ಆದಷ್ಟು ಬೇಗ ಕೊರೊನಾದ ಸಂಹಾರವಾಗಲಿದೆ.
Published On - 9:18 am, Tue, 27 October 20