ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ ಬ್ರಿಟನ್ ಪ್ರಧಾನಿ ರಿಷಿ ಸುನಕ್(Rishi Sunak) ಇಂದು ಇಸ್ರೇಲ್ಗೆ ಭೇಟಿ ನೀಡಲಿದ್ದು ಪ್ರಧಾನಿ ಬೆಂಜಮಿನ್ ನೇತನ್ಯಾಹು ಜತೆ ಮಾತುಕತೆ ನಡೆಸಲಿದ್ದಾರೆ. ಸುನಕ್ ತನ್ನ ಭೇಟಿಯ ಮೊದಲು ಹೇಳಿಕೆಯಲ್ಲಿ ಪ್ರತಿಯೊಬ್ಬ ನಾಗರಿಕನ ಸಾವು ದುರಂತ ಎಂದು ಹೇಳಿದ್ದಾರೆ. ಹಮಾಸ್ನ ಭೀಕರ ಭಯೋತ್ಪಾದಕ ಕೃತ್ಯದಲ್ಲಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ರಿಷಿ ಸುನಕ್ ಸಾಧ್ಯವಾದಷ್ಟು ಬೇಗ ಗಾಜಾಕ್ಕೆ ಮಾನವೀಯ ಸಹಾಯವನ್ನು ಘೋಷಿಸುವುದು ಹಾಗೂ ಗಾಜಾದಲ್ಲಿರುವ ಬ್ರಿಟಿಷ್ ನಾಗರಿಕರ ನಿರ್ಗಮನವನ್ನು ಸಾಧ್ಯವಾಗಿಸಲು ಮಾರ್ಗಗಳನ್ನು ತೆರೆಯಲು ಕರೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ನಲ್ಲಿ ನೂರಾರು ಜನರನ್ನು ಕೊಂದ ಗಾಜಾ ಆಸ್ಪತ್ರೆಯ ಮೇಲಿನ ದಾಳಿಯನ್ನು ಸುನಕ್ ಖಂಡಿಸಿದ್ದಾರೆ.
ಇಸ್ರೇಲ್ಗೆ ಜೋ ಬೈಡನ್ ಭೇಟಿ
ಇಸ್ರೇಲ್-ಹಮಾಸ್ ನಡುವಿನ ಸಂಘರ್ಷ ನಡುವೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ಗೆ ಭೇಟಿ ನೀಡಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ಜೊತೆ ಚರ್ಚೆ ನಡೆಸಿದ್ದಾರೆ. ಇಸ್ರೇಲ್ ಮೇಲೆ ಹಠಾತ್ ದಾಳಿ ಮಾಡಿ ವಿದೇಶಿಗರು ಸೇರಿದಂತೆ 1,400ಕ್ಕೂ ಹೆಚ್ಚು ಇಸ್ರೇಲಿಗರನ್ನು ಹತ್ಯೆ ಮಾಡಿ ನೂರಾರು ಜನರು ಅಪಹರಿಸಿರುವುದಕ್ಕೆ 10 ಹಮಾಸ್ ಸದಸ್ಯರ ಗುಂಪು ಮತ್ತು ಗಾಜಾ, ಸುಡಾನ್, ಟರ್ಕಿ, ಅಲ್ಜೀರಿಯಾ ಮತ್ತು ಕತಾರ್‌ನಾದ್ಯಂತ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಸಂಘಟನೆಯ ಹಣಕಾಸು ಜಾಲದ ವಿರುದ್ಧ ಅಮೆರಿಕ ನಿರ್ಬಂಧ ಹೇರಿದೆ.
ಹಮಾಸ್ ಆಸ್ಪತ್ರೆಯ ಮೇಲಿನ ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಜೋ ಬೈಡೆನ್ ಗಾಜಾ ಆಸ್ಪತ್ರೆಯಲ್ಲಿ ಮಾರಣಾಂತಿಕ ಸ್ಫೋಟವನ್ನು ಮತ್ತೊಂದು ತಂಡವು ನಡೆಸಿದೆ ಎಂದು ತೋರುತ್ತದೆ. ಈ ದಾಳಿಯಲ್ಲಿ ಇಸ್ರೇಲ್ ಸೇನೆಯ ಕೈವಾಡವಿಲ್ಲ. ಸ್ಫೋಟಕ್ಕೆ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಇಸ್ಲಾಮಿಕ್ ಜಿಹಾದ್ ಅನ್ನು ದೂಷಿಸುವ ಇಸ್ರೇಲ್ ನಿಲುವನ್ನು ಅವರು ಒಪ್ಪಿಕೊಂಡಿದ್ದಾರೆ.
ಅಕ್ಟೋಬರ್ 7 ರಂದು ನಡೆದಿತ್ತು ದಾಳಿ
ಅಕ್ಟೊಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ 5 ಸಾವಿರ ರಾಕೆಟ್ಗಳಿಂದ ದಾಳಿ ನಡೆಸಿದ್ದರು ಅಷ್ಟೇ ಅಲ್ಲದೆ, ಪಾರ್ಟಿ, ಕಚೇರಿ, ಮನೆ ಸೇರಿದಂತೆ ಉಗ್ರರು ಜನರನ್ನು ಕಂಡ ಕಂಡಲ್ಲಿ ಹತ್ಯೆ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ