Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟನ್​ನಲ್ಲಿ ಸಿಗರೇಟ್​ ನಿಷೇಧಿಸಲು ಪ್ರಧಾನಿ ರಿಷಿ ಸುನಕ್ ಚಿಂತನೆ

ಬ್ರಿಟನ್​ನಲ್ಲಿ ಸಿಗರೇಟ್​ ನಿಷೇಧಿಸಲು ಪ್ರಧಾನಿ ರಿಷಿ ಸುನಕ್ ಚಿಂತನೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 2009ರ ಜನವರಿ 1ರಂದು ಅಥವಾ ನಂತರ ಜನಿಸಿರುವವರಿಗೆ ತಂಬಾಕು ಮಾರಾಟ ಮಾಡುವುದನ್ನು ನಿಷೇಧಿಸುವುದು ಸೇರಿದಂತೆ ಹಲವು ಧೂಮಪಾನ ವಿರೋಧಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಸರ್ಕಾರಿ ಮೂಲಗಳ ಪ್ರಕಾರ, ಮುಂದಿನ ಪೀಳಿಗೆಯವರು ಸಿಗರೇಟ್ ಖರೀದಿಸುವುದನ್ನು ತಡೆಯಲು ಯೋಚಿಸುತ್ತಿದ್ದಾರೆ.

ಬ್ರಿಟನ್​ನಲ್ಲಿ ಸಿಗರೇಟ್​ ನಿಷೇಧಿಸಲು ಪ್ರಧಾನಿ ರಿಷಿ ಸುನಕ್ ಚಿಂತನೆ
ರಿಷಿ ಸುನಕ್Image Credit source: Hindustan Times
Follow us
ನಯನಾ ರಾಜೀವ್
|

Updated on: Sep 23, 2023 | 10:24 AM

ಬ್ರಿಟನ್​ನಲ್ಲಿ ಸಿಗರೇಟ್​ ನಿಷೇಧಿಸಲು ಪ್ರಧಾನಿ ರಿಷಿ ಸುನಕ್(Rishi Sunak) ಚಿಂತನೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 2009ರ ಜನವರಿ 1ರಂದು ಅಥವಾ ನಂತರ ಜನಿಸಿರುವವರಿಗೆ ತಂಬಾಕು ಮಾರಾಟ ಮಾಡುವುದನ್ನು ನಿಷೇಧಿಸುವುದು ಸೇರಿದಂತೆ ಹಲವು ಧೂಮಪಾನ ವಿರೋಧಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಸರ್ಕಾರಿ ಮೂಲಗಳ ಪ್ರಕಾರ, ಮುಂದಿನ ಪೀಳಿಗೆಯವರು ಸಿಗರೇಟ್ ಖರೀದಿಸುವುದನ್ನು ತಡೆಯಲು ಯೋಚಿಸುತ್ತಿದ್ದಾರೆ.

ದೂಮಪಾನ ತ್ಯಜಿಸುವುದು ಹಾಗೂ 2030ರ ವೇಳೆಗೆ ಯುವಕರನ್ನು ಧೂಮಪಾನ ಮುಕ್ತರನ್ನಾಗಿ ಮಾಡಲು ಬಯಸುತ್ತೇನೆ, ಅದಕ್ಕಾಗಿ ನಾವು ಈಗಾಗಲೇ ಸಿಗರೇಟ್ ಉತ್ಪಾದನಾ ಪ್ರಮಾಣವನ್ನು ಕಡಿಮೆ ಮಾಡಲು ಕ್ರಮಗಳನ್ನು ಕೈಗೊಂಡಿದ್ದೇವೆ. ಗರ್ಭಿಣಿಯರು ಸಿಗರೇಟ್ ತ್ಯಜಿಸಲು ಪ್ರೋತ್ಸಾಹಿಸುವ ವೋಚರ್ ಯೋಜನೆಯಂತಹ ಹಲವು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.

ಜುಲೈನಲ್ಲಿ ಬ್ರಿಟನ್ ಹಾಗೂ ವೇಲ್ಸ್‌ನ ಕೌನ್ಸಿಲ್‌ಗಳು ಪರಿಸರ ಹಾಗೂ ಜನರ ಆರೋಗ್ಯದ ಆಧಾರದ ಮೇಲೆ 2024ರ ವೇಳೆಗೆ ಏಕಬಳಕೆಯ ವೇಪ್‌ಗಳ ಮಾರಾಟವನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಕರೆ ನೀಡಿವೆ. ಮುಂದಿನ ವರ್ಷದ ನಿರೀಕ್ಷಿತ ಚುನಾವಣೆಗೆ ಮುನ್ನ ಸುನಕ್ ತಂಡವು ಹೊಸ ಗ್ರಾಹಕ-ಕೇಂದ್ರಿತ ಯೋಜನೆಯನ್ನು ರೂಪಿಸಿದೆ.

ಮತ್ತಷ್ಟು ಓದಿ: ಜಿ20- ಶೃಂಗಸಭೆ: ಹಸಿರು ಹವಾಮಾನ ನಿಧಿಗೆ 2 ಬಿಲಿಯನ್ ಡಾಲರ್ ಸಹಾಯ ಘೋಷಿಸಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್

ವೇಪ್‌ಗಳು ಇ-ಸಿಗರೆಟ್‌ಗಳಾಗಿವೆ, ಇದು ಏರೋಸಾಲ್ ಅನ್ನು ಉತ್ಪಾದಿಸುವ ಬ್ಯಾಟರಿ ಚಾಲಿತ ಸಾಧನವಾಗಿದೆ. ಇದು ನಿಕೋಟಿನ್, ಸುವಾಸನೆ ಮತ್ತು 30 ಕ್ಕೂ ಹೆಚ್ಚು ಇತರ ರಾಸಾಯನಿಕಗಳನ್ನು ಒಳಗೊಂಡಿದೆ. ಏರೋಸಾಲ್ ಶ್ವಾಸಕೋಶವನ್ನು ಪ್ರವೇಶಿಸುತ್ತದೆ, ಅಲ್ಲಿ ನಿಕೋಟಿನ್ ಮತ್ತು ರಾಸಾಯನಿಕಗಳು ನಿಮ್ಮ ರಕ್ತಪ್ರವಾಹವನ್ನು ಪ್ರವೇಶಿಸುತ್ತವೆ.

ನ್ಯೂಜಿಲೆಂಡ್‌ನಲ್ಲಿ, ಸಿಗರೇಟ್ ಕಾನೂನುಗಳನ್ನು ಉಲ್ಲಂಘಿಸುವವರಿಗೆ 95,000 ಡಾಲರ್​ ( 78,51,037 ರೂ.) ವರೆಗೆ ದಂಡ ವಿಧಿಸಲಾಗುತ್ತದೆ. 2025ರ ವೇಳೆಗೆ ದೇಶವನ್ನು ಹೊಗೆ ಮುಕ್ತ ಮಾಡುವ ಗುರಿಯನ್ನು ಅಲ್ಲಿನ ಸರ್ಕಾರ ಹೊಂದಿದೆ. ದೇಶಗಳಲ್ಲಿ ವಯಸ್ಕರಲ್ಲಿ ಧೂಮಪಾನದ ಪ್ರಮಾಣವು ನ್ಯೂಜಿಲೆಂಡ್‌ನಲ್ಲಿ ಕಡಿಮೆಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಹಿಂದಿನಿಂದ ಗುದ್ದಿದ ಮಿನಿಬಸ್ ಚಾಲಕ
ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಹಿಂದಿನಿಂದ ಗುದ್ದಿದ ಮಿನಿಬಸ್ ಚಾಲಕ
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
ಅತಿಥಿಗಳಿಗೆ ನೀಡುವ ಆಹಾರದ ಪುಣ್ಯ ಹೇಗೆ ಸಿಗುತ್ತೆ ಗೊತ್ತಾ?
ಅತಿಥಿಗಳಿಗೆ ನೀಡುವ ಆಹಾರದ ಪುಣ್ಯ ಹೇಗೆ ಸಿಗುತ್ತೆ ಗೊತ್ತಾ?
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ