ಈ ವರ್ಷ 6,500 ಮಂದಿ ಕೋಟ್ಯಾಧಿಪತಿಗಳು ಭಾರತದಿಂದ ಹೊರಕ್ಕೆ; ಇವರೆಲ್ಲಾ ಹೋಗೋದು ಎಲ್ಲಿಗೆ?
Millionaires Migrations: ಭಾರತದಿಂದ ಈ ವರ್ಷ 6,500 ಶ್ರೀಮಂತರು ಹೊರಹೋಗುತ್ತಿದ್ದಾರೆ. ಈ ವರ್ಷವೂ ಅತಿಹೆಚ್ಚು ಶ್ರೀಮಂತರು ದೇಶ ಬಿಟ್ಟು ಹೋಗುತ್ತಿರುವುದು ಚೀನಾದಿಂದ. ಬರೋಬ್ಬರಿ 13,500 ಮಂದಿ ಕೋಟ್ಯಧಿಪತಿಗಳು ಈ ವರ್ಷ ಚೀನಾದಿಂದ ನಿರ್ಗಮಿಸುವ ಸಾಧ್ಯತೆ ಇದೆ. ಕಳೆದ ವರ್ಷ ಚೀನಾದ 10,800 ಮಂದಿ ಕೋಟ್ಯಧಿಪತಿಗಳು ದೇಶ ಬಿಟ್ಟು ಹೋಗಿದ್ದರು. ಈ ಸಂಖ್ಯೆ ಈ ವರ್ಷ ಇನ್ನೂ ಹೆಚ್ಚಾಗಿದೆ. ಚೀನಾ ಮತ್ತು ಭಾರತದಿಂದ ಮಾತ್ರವಲ್ಲ, ಬ್ರಿಟನ್ನಂಥ ಸಿರಿವಂತ ದೇಶದಿಂದಲೂ ಸಾಕಷ್ಟು ಶ್ರೀಮಂತರ ಹೊರಗೆ ವಲಸೆ ಹೋಗುತ್ತಿದ್ದಾರೆ. ಇದು ಹೆನ್ಲೀ ಅಂಡ್ ಪಾರ್ಟ್ನರ್ಸ್ ಸಂಸ್ಥೆಯ ಪ್ರೈವೇಟ್ ವೆಲ್ತ್ ಮೈಗ್ರೇಶನ್ ರಿಪೋರ್ಟ್ನಲ್ಲಿ ಬಂದಿರುವ ವಿಚಾರ.
ನವದೆಹಲಿ, ಸೆಪ್ಟೆಂಬರ್ 22: ಕಳೆದ ವರ್ಷ 7,500 ಕೋಟ್ಯಾಧಿಪತಿಗಳನ್ನು (Millionaires) ಕಳೆದುಕೊಂಡಿದ್ದ ಭಾರತದಿಂದ ಈ ವರ್ಷ 6,500 ಶ್ರೀಮಂತರು ಹೊರಹೋಗುತ್ತಿದ್ದಾರೆ. ಈ ವರ್ಷವೂ ಅತಿಹೆಚ್ಚು ಶ್ರೀಮಂತರು ದೇಶ ಬಿಟ್ಟು ಹೋಗುತ್ತಿರುವುದು ಚೀನಾದಿಂದ. ಬರೋಬ್ಬರಿ 13,500 ಮಂದಿ ಕೋಟ್ಯಧಿಪತಿಗಳು ಈ ವರ್ಷ ಚೀನಾದಿಂದ ನಿರ್ಗಮಿಸುವ ಸಾಧ್ಯತೆ ಇದೆ. ಕಳೆದ ವರ್ಷ ಚೀನಾದ 10,800 ಮಂದಿ ಕೋಟ್ಯಧಿಪತಿಗಳು ದೇಶ ಬಿಟ್ಟು ಹೋಗಿದ್ದರು. ಈ ಸಂಖ್ಯೆ ಈ ವರ್ಷ ಇನ್ನೂ ಹೆಚ್ಚಾಗಿದೆ.
ಚೀನಾ ಮತ್ತು ಭಾರತದಿಂದ ಮಾತ್ರವಲ್ಲ, ಬ್ರಿಟನ್ನಂಥ ಸಿರಿವಂತ ದೇಶದಿಂದಲೂ ಸಾಕಷ್ಟು ಶ್ರೀಮಂತರ ಹೊರಗೆ ವಲಸೆ ಹೋಗುತ್ತಿದ್ದಾರೆ. ಇದು ಹೆನ್ಲೀ ಅಂಡ್ ಪಾರ್ಟ್ನರ್ಸ್ ಸಂಸ್ಥೆಯ ಪ್ರೈವೇಟ್ ವೆಲ್ತ್ ಮೈಗ್ರೇಶನ್ ರಿಪೋರ್ಟ್ನಲ್ಲಿ ಬಂದಿರುವ ವಿಚಾರ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಶ್ರೀಮಂತರು ಹೊರಹೋಗುತ್ತಿರುವ ದೇಶಗಳಲ್ಲಿ ಚೀನಾ, ಬ್ರಿಟನ್, ಬ್ರೆಜಿಲ್, ಹಾಂಕಾಂಗ್, ಸೌತ್ ಕೊರಿಯಅ, ಮೆಕ್ಸಿಕೋ, ಸೌತ್ ಆಫ್ರಿಕಾ, ಜಪಾನ್, ವಿಯೆಟ್ನಾಂ, ನೈಜೀರಿಯಾ ಇವೆ.
ಶ್ರೀಮಂತರು ಹೋಗುತ್ತಿರುವುದು ಎಲ್ಲಿಗೆ?
ಆಸ್ಟ್ರೇಲಿಯಾ, ಯುಎಇ, ಸಿಂಗಾಪುರ, ಅಮೆರಿಕ, ಸ್ವಿಟ್ಜರ್ಲ್ಯಾಂಡ್, ಕೆನಡಾ, ಗ್ರೀಸ್, ಫ್ರಾನ್ಸ್, ಪೋರ್ಚುಗಲ್, ನ್ಯೂಜಿಲ್ಯಾಂಡ್ ಮತ್ತು ಇಟಲಿ ದೇಶಗಳಿಗೆ ವಲಸೆ ಹೋಗುತ್ತಿರುವ ಜನರ ಸಂಖ್ಯೆಯಲ್ಲಿ ಹೆಚ್ಚಾಗಲಿದೆ. ಮಿಲಿಯನೇರ್ಗಳಿಗೆ 2023ರಲ್ಲಿ ಆಸ್ಟ್ರೇಲಿಯಾ ಫೇವರಿಟ್ ಎನಿಸಿದೆ. ಯುಎಇಗೂ ಶ್ರೀಮಂತರು ಪ್ರಾಶಸ್ತ್ಯ ಕೊಟ್ಟಿದ್ದಾರೆ. ಬ್ರಿಟನ್, ರಷ್ಯಾ, ಪಾಕಿಸ್ತಾನ್, ಟರ್ಕಿ, ಚೀನಾ ಮೊದಲಾದ ದೇಶಗಳ ಶ್ರೀಮಂತರಿಗೆ ವಲಸೆ ಹೋಗಲು ಯುಎಇ ಫೇವರಿಟ್ ಎನಿಸಿದೆ.
ಇದನ್ನೂ ಓದಿ: ಜೆಪಿ ಮಾರ್ಗನ್ನ ಗ್ಲೋಬಲ್ ಬಾಂಡ್ ಇಂಡೆಕ್ಸ್ನಲ್ಲಿ ಭಾರತವೂ ಸೇರ್ಪಡೆ; ಏನಿದರ ಅನುಕೂಲಗಳು?
ಶ್ರೀಮಂತರು ಯಾಕೆ ದೇಶ ಬಿಟ್ಟು ಹೋಗುತ್ತಾರೆ?
ಶ್ರೀಮಂತರು ಸಾಮಾನ್ಯವಾಗಿ ಒಂದು ಸ್ಥಳಕ್ಕೆ ಸೀಮಿತರಾಗುವವರಲ್ಲ. ತಾವಿರುವ ಪ್ರದೇಶದ ಬಗ್ಗೆ ನಂಬಿಕೆ ಹೋದರೆ ಅವರು ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಹೀಗಾಗಿ, ಒಂದು ದೇಶದ ಆರ್ಥಿಕ ಪರಿಸ್ಥಿತಿಗೆ ಅಲ್ಲಿನ ಶ್ರೀಮಂತರ ವಲಸೆ ಕನ್ನಡಿ ಹಿಡಿಯುತ್ತದೆ ಎಂದು ನಂಬಲಾಗಿದೆ.
ರಾಜಕೀಯ ಸ್ಥಿರತೆ, ಕಡಿಮೆ ತೆರಿಗೆ, ವೈಯಕ್ತಿಕ ಸ್ವಾತಂತ್ರ್ಯ ಈ ಅಂಶಗಳು ಕೋಟ್ಯಧಿಪತಿಗಳ ಇರುವಿಕೆಯ ಮೇಲೆ ಪರಿಣಾಮ ಬೀರುತ್ತವೆ. ಆದರೆ, ಈಗೀಗ ಜೀವನ ಗುಣಮಟ್ಟ, ಮಕ್ಕಳ ಪಾಲನೆ ಪೋಷಣೆಗೆ ಬೇಕಾದ ವಾತಾವರಣ, ಗುಣಮಟ್ಟದ ಶಿಕ್ಷಣ ಸಂಸ್ಥೆಗಳು, ಅನುಕೂಲ ಹವಾಮಾನ ಇರುವ ಸ್ಥಳ, ಉತ್ತಮ ಕಾನೂನು ವ್ಯವಸ್ಥೆ ಇವೆಲ್ಲವನ್ನೂ ಕೋಟ್ಯಧಿಪತಿಗಳು ಪರಿಗಣಿಸುತ್ತಾರೆ. ಮುಂದಿನ ತಲೆಮಾರುಗಳವರೆಗೆ ತಮ್ಮ ಸಂಪತ್ತು ನಶಿಸದೇ ಸುರಕ್ಷಿತವಾಗಿರಬೇಕೆಂದು ಅವರು ಬಯಸುತ್ತಾರೆ.
ಇದನ್ನೂ ಓದಿ: ಕೆನಡಾದಲ್ಲಿದ್ದ ಮಹೀಂದ್ರ ಅಂಗಸಂಸ್ಥೆ ಬಂದ್; ದಿಢೀರ್ ಮುಚ್ಚಿದ ಪರಿಣಾಮ ಭಾರತೀಯ ಕಂಪನಿಗೆ ಸಾವಿರಾರು ಕೋಟಿ ನಷ್ಟ
ಆಸ್ಟ್ರೇಲಿಯಾ ಮೇಲೆ ಯಾಕೆ ಜಾಸ್ತಿ ಪ್ರೀತಿ?
ಆಸ್ಟ್ರೇಲಿಯಾದ ಜೀವನ ಗುಣಮಟ್ಟ, ಅಲ್ಲಿನ ಹವಾಮಾನ, ಭದ್ರತೆ, ಶಿಕ್ಷಣ, ತೆರಿಗೆ ಇತ್ಯಾದಿ ಅಂಶಗಳು ಶ್ರೀಮಂತರನ್ನು ಸೆಳೆಯುತ್ತಿದೆ. ಶ್ರೀಮಂತ ದೇಶಗಳಿಂದಲೂ ಕೋಟ್ಯಧಿಪತಿಗಳು ಆಸ್ಟ್ರೇಲಿಯಾಗೆ ಹೋಗಿ ನೆಲಸುತ್ತಿದ್ದಾರೆ.
ಇನ್ನು, ಯುಎಇ ದೇಶ ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿದೆ. ತೆರಿಗೆಯೂ ಬಹಳ ಕಡಿಮೆ ಇದೆ. ಹೀಗಾಗಿ, ಬಹಳಷ್ಟು ಶ್ರೀಮಂತರು ದುಬೈ, ಅಬುಧಾಬಿಗಳತ್ತ ಹೋಗುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ