ಜೆಪಿ ಮಾರ್ಗನ್​ನ ಗ್ಲೋಬಲ್ ಬಾಂಡ್ ಇಂಡೆಕ್ಸ್​ನಲ್ಲಿ ಭಾರತವೂ ಸೇರ್ಪಡೆ; ಏನಿದರ ಅನುಕೂಲಗಳು?

J.P. Morgan EM Debt Index: ಭಾರತದ 23 ಸರ್ಕಾರಿ ಬಾಂಡ್​ಗಳು ಈ ಇಂಡೆಕ್ಸ್​ನಲ್ಲಿ ಲಿಸ್ಟ್ ಆಗಲು ಅರ್ಹತೆ ಹೊಂದಿವೆ. ಇವುಗಳ ಒಟ್ಟು ಮೌಲ್ಯ 330 ಬಿಲಿಯನ್ ಡಾಲರ್​ನಷ್ಟಿದೆ. ಸುಮಾರು 27.4 ಲಕ್ಷಕೋಟಿ ರೂ ಮೌಲ್ಯದ ಈ ಸರ್ಕಾರಿ ಬಾಂಡ್​ಗಳನ್ನು 2024ರ ಜೂನ್ 28ರಿಂದ ಇಂಡೆಕ್ಸ್​ನಲ್ಲಿ ಒಳಗೊಳ್ಳುವ ಸಾಧ್ಯತೆ ಇದೆ. 10 ತಿಂಗಳ ಕಾಲ ಈ ಪ್ರಕ್ರಿಯೆ ಇರಲಿದೆ. ಈ ಬೆಳವಣಿಗೆಯನ್ನು ಭಾರತದ ಮಾರುಕಟ್ಟೆಗಳು ಹರ್ಷದಿಂದ ಸ್ವಾಗತಿಸಿವೆ. ಸರ್ಕಾರಿ ಸಾಲಪತ್ರಗಳ ಮೇಲೆ ಹೂಡಿಕೆ ಹೆಚ್ಚಲಿದೆ. ಎಫ್​ಪಿಐಗಳು ಹೆಚ್ಚಿನ ಪ್ರಮಾಣದಲ್ಲಿ ಬರಬಹುದು ಎಂದು ನಿರೀಕ್ಷಿಸಲಾಗಿದೆ.

ಜೆಪಿ ಮಾರ್ಗನ್​ನ ಗ್ಲೋಬಲ್ ಬಾಂಡ್ ಇಂಡೆಕ್ಸ್​ನಲ್ಲಿ ಭಾರತವೂ ಸೇರ್ಪಡೆ; ಏನಿದರ ಅನುಕೂಲಗಳು?
ಜೆಪಿ ಮಾರ್ಗನ್
Follow us
|

Updated on:Sep 22, 2023 | 5:13 PM

ನವದೆಹಲಿ, ಸೆಪ್ಟೆಂಬರ್ 22: ಜಾಗತಿಕ ಬ್ಯಾಂಕಿಂಗ್ ದೈತ್ಯ ಜೆಪಿ ಮಾರ್ಗನ್ ಚೇಸ್ ಅಂಡ್ ಕೋ ಸಂಸ್ಥೆ ತನ್ನ ಎಮರ್ಜಿಂಗ್ ಮಾರ್ಕೆಟ್ ಇಂಡೆಕ್ಸ್​ಗೆ (EM Index) ಭಾರತದ ಗವರ್ನ್ಮೆಂಟ್ ಬಾಂಡ್​ಗಳನ್ನು (Government Bond) ಒಳಗೊಳ್ಳಲು ನಿರ್ಧರಿಸಿದೆ. 2024ರ ಜೂನ್ 28ರಿಂದ ಭಾರತದ ಬಾಂಡ್​ಗಳು ಗ್ಲೋಬಲ್ ಬಾಂಡ್ ಇಂಡೆಕ್ಸ್​ನಲ್ಲಿ ದೊರಕಲಿವೆ. ಭಾರತ ಸರ್ಕಾರ ಕೈಗೊಂಡ ವಿವಿಧ ಹಣಕಾಸು ಸುಧಾರಣಾ ಕ್ರಮಗಳು ಈ ಬೆಳವಣಿಗೆಗೆ ಕಾರಣವೆನ್ನಲಾಗಿದೆ. ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ಮಾರುಕಟ್ಟೆ ಸುಧಾರಣೆಗಳನ್ನು ಕೈಗೊಂಡಿತ್ತು. ಹಾಗೆಯೇ, 2020ರಲ್ಲಿ ಎಫ್​ಎಆರ್ ಪ್ರೋಗ್ರಾಮ್ ಅನ್ನೂ ಸರ್ಕಾರಿ ಚಾಲನೆಗೊಳಿಸಿತ್ತು. ಇದೆಲ್ಲವೂ ಜೆಪಿ ಮಾರ್ಗನ್ ಚೇಸ್ ಅಂಡ್ ಕೋ ಸಂಸ್ಥೆ ತನ್ನ ಬೆಂಚ್​ಮಾರ್ಕ್ ಇಂಡೆಕ್ಸ್​ಗೆ ಭಾರತದ ಸಾಲಪತ್ರಗಳನ್ನು ಒಳಗೊಳ್ಳಲು ನಿರ್ಧರಿಸುವಂತೆ ಮಾಡಿವೆ.

ಭಾರತದ 23 ಸರ್ಕಾರಿ ಬಾಂಡ್​ಗಳು ಈ ಇಂಡೆಕ್ಸ್​ನಲ್ಲಿ ಲಿಸ್ಟ್ ಆಗಲು ಅರ್ಹತೆ ಹೊಂದಿವೆ. ಇವುಗಳ ಒಟ್ಟು ಮೌಲ್ಯ 330 ಬಿಲಿಯನ್ ಡಾಲರ್​ನಷ್ಟಿದೆ. ಸುಮಾರು 27.4 ಲಕ್ಷಕೋಟಿ ರೂ ಮೌಲ್ಯದ ಈ ಸರ್ಕಾರಿ ಬಾಂಡ್​ಗಳನ್ನು 2024ರ ಜೂನ್ 28ರಿಂದ ಇಂಡೆಕ್ಸ್​ನಲ್ಲಿ ಒಳಗೊಳ್ಳುವ ಸಾಧ್ಯತೆ ಇದೆ. 10 ತಿಂಗಳ ಕಾಲ ಈ ಪ್ರಕ್ರಿಯೆ ಇರಲಿದೆ.

ಈ ಬೆಳವಣಿಗೆಯನ್ನು ಭಾರತದ ಮಾರುಕಟ್ಟೆಗಳು ಹರ್ಷದಿಂದ ಸ್ವಾಗತಿಸಿವೆ. ಸರ್ಕಾರಿ ಸಾಲಪತ್ರಗಳ ಮೇಲೆ ಹೂಡಿಕೆ ಹೆಚ್ಚಲಿದೆ. ಎಫ್​ಪಿಐಗಳು ಹೆಚ್ಚಿನ ಪ್ರಮಾಣದಲ್ಲಿ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಹಾಗೆಯೇ, ಸರ್ಕಾರಿ ಬಾಂಡ್​ಗಳ ಮೇಲೆ ವಿದೇಶೀ ಹೂಡಿಕೆದಾರರ ಪ್ರಾಬಲ್ಯ ಹೊಂದಿರುವುದು ಆತಂಕದ ಸಂಗತಿಯೂ ಹೌದು ಎನ್ನುವ ಅನಿಸಿಕೆಗಳೂ ಹಲವರಲ್ಲಿವೆ.

ಇದನ್ನೂ ಓದಿ: ಕೆನಡಾದಲ್ಲಿದ್ದ ಮಹೀಂದ್ರ ಅಂಗಸಂಸ್ಥೆ ಬಂದ್; ದಿಢೀರ್ ಮುಚ್ಚಿದ ಪರಿಣಾಮ ಭಾರತೀಯ ಕಂಪನಿಗೆ ಸಾವಿರಾರು ಕೋಟಿ ನಷ್ಟ

ಗ್ಲೋಬಲ್ ಬಾಂಡ್ ಇಂಡೆಕ್ಸ್​ಗೆ ಭಾರತದ ಸೇರ್ಪಡೆಯಿಂದ ಅನುಕೂಲಗಳೇನು?

  1. ಭಾರತವೂ ಜಾಗತಿಕ ಹೂಡಿಕೆ ವ್ಯವಸ್ಥೆಯ ಭಾಗವಾಗಬಹುದು. ಭಾರತದ ಹಣಕಾಸು ಜಾಗತೀಕರಣದತ್ತ ಒಂದು ಹೆಜ್ಜೆ ಇದಾಗಿರಲಿದೆ.
  2. ಭಾರತಕ್ಕೆ ಫಾರೀನ್ ಪೋರ್ಟ್​ಫೋಲಿಯೋ ಹೂಡಿಕೆಗಳು ಹರಿದುಬರುವುದು ಹೆಚ್ಚಲಿದೆ
  3. ಡಾಲರ್ ಎದುರು ರುಪಾಯಿಯ ಬಲವರ್ಧನೆ ಆಗಬಹುದು
  4. ಭಾರತಕ್ಕೆ ಸಾಲ ವೆಚ್ಚ ಕಡಿಮೆ ಆಗುತ್ತದೆ. ಇದರಿಂದಾಗಿ ವಿತ್ತೀಯ ಕೊರತೆ ಕಡಿಮೆ ಆಗುತ್ತದೆ.
  5. ಭಾರತದ ಬ್ಯಾಂಕಿಂಗ್ ವಲಯ ಇನ್ನಷ್ಟು ಪ್ರಬಲಗೊಳ್ಳಬಹುದು.

ಇದನ್ನೂ ಓದಿ: ವಾಷಿಂಗ್ ಪೌಡರ್​ನಿಂದ ಶುರುವಾಗಿ ಎಪಿಐಗೆ ಬಂದಿಳಿಯುವ ನಿರ್ಮಾ; 5,651 ಕೋಟಿ ರೂಗೆ ಗ್ಲೆನ್​ಮಾರ್ಕ್ ಲೈಫ್ ಸೈನ್ಸಸ್ ಷೇರು ಖರೀದಿಗೆ ಮುಂದು

ಜೆಪಿ ಮಾರ್ಗನ್ ವಿವಿಧ ಇಂಡೆಕ್ಸ್​ಗಳು

ಜೆಪಿ ಮಾರ್ಗನ್ ಚೇಸ್ ಅಂಡ್ ಕೋ ಸಂಸ್ಥೆ ವಿವಿಧ ಸೂಚ್ಯಂಕಗಳನ್ನು ಹೊಂದಿದೆ. ಉದಯೋನ್ಮುಖ ಮಾರುಕಟ್ಟೆಗಳ ಸೂಚ್ಯಂಕವೆನಿಸಿದ ಇಎಂಬಿಐ ಇದೆ. ಇದರಲ್ಲಿ ಚೀನಾ, ಇಂಡೋನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್, ಚೆಕ್ ರಿಪಬ್ಲಿಕ್, ಹಂಗೆರಿ, ಪೋಲ್ಯಾಂಡ್, ರೋಮೇನಿಯಾ, ಟರ್ಕಿ, ಬ್ರೆಜಿಲ್, ಚಿಲಿ, ಕೊಲಂಬಿಯಾ, ಮೆಕ್ಸಿಕೋ, ಪೆರು, ಈಜಿಪ್ಟ್ ಮತ್ತು ಸೌತ್ ಆಫ್ರಿಕಾ ದೇಶಗಳ ಬಾಂಡ್​ಗಳನ್ನು ಒಳಗೊಳ್ಳಲಾಗಿದೆ.

ಜೆಪಿ ಮಾರ್ಗನ್ ಸಂಸ್ಥೆ ಮುಂದುವರಿದ ದೇಶಗಳ ಮಾರುಕಟ್ಟೆಗಳ ಸರ್ಕಾರಿ ಬಾಂಡ್​ಗಳಿಗೆ ವಿವಿಧ ಸೂಚ್ಯಂಕಗಳನ್ನು ಹೊಂದಿದೆ. ಎಲ್ಲವನ್ನೂ ಸೇರಿಸಲಾದ ಗ್ಲೋಬಲ್ ಅಗ್ರಿಗೇಟ್ ಬಾಂಡ್ ಇಂಡೆಕ್ಸ್ ಇದೆ. ಇದರಲ್ಲಿ 60 ದೇಶಗಳಿಂದ ಸಾಲಪತ್ರಗಳು ಸಿಗುತ್ತವೆ. ಇವುಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯ 20 ಟ್ರಿಲಿಯನ್ ಡಾಲರ್ (ಸುಮಾರು 1,600 ಲಕ್ಷ ಕೋಟಿ ರೂ) ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:11 pm, Fri, 22 September 23

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ