ಬೆಳೆ ಸಮೀಕ್ಷೆಗೆ ಸರ್ಕಾರದಿಂದ ಪ್ರತ್ಯೇಕ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಬಿಡುಗಡೆ
GCES App for crop estimation: ದೇಶದಲ್ಲಿ ಕೃಷಿ ಚಟುವಟಿಕೆಗಳಲ್ಲಿ ಗಮನಾರ್ಹ ಪರಿವರ್ತನೆ ತರಬಲ್ಲಂತಹ ಬೆಳೆ ಸಮೀಕ್ಷೆ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಆದ ಜಿಸಿಇಎಸ್ ಅನ್ನು ಸರ್ಕಾರ ಬಿಡುಗಡೆ ಮಾಡಿದೆ. ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮನೋಜ್ ಅಹುಜಾ ಜಿಸಿಇಎಸ್ ಪೋರ್ಟಲ್ ಅನ್ನು ಅನಾವರಣಗೊಳಿಸಿದ್ದಾರೆ. ಜನರಲ್ ಕ್ರಾಮ್ ಎಸ್ಟಿಮೇಶನ್ ಸರ್ವೆನಲ್ಲಿ ಸಾಕಷ್ಟು ಫೀಚರ್ಗಳಿದ್ದು. ಗ್ರಾಮವಾರು ಜಿಸಿಇಎಸ್ ಪ್ಲಾನ್, ಬೆಳೆ ತೂಕ, ಇತ್ಯಾದಿ ಸಮಗ್ರ ಬೆಳೆ ಇಳುವರಿ ಅಂದಾಜು ವರದಿ ನೀಡಬಹುದು. ಈ ಆ್ಯಪ್ನಲ್ಲಿ ಜಿಯೋ ರೆಫರೆನ್ಸಿಂಗ್ ಫೀಚರ್ ಕೂಡ ಇದೆ.
ನವದೆಹಲಿ, ಸೆಪ್ಟೆಂಬರ್ 22: ದೇಶದಲ್ಲಿ ಕೃಷಿ ಚಟುವಟಿಕೆಗಳಲ್ಲಿ ಗಮನಾರ್ಹ ಪರಿವರ್ತನೆ ತರಬಲ್ಲಂತಹ ಬೆಳೆ ಸಮೀಕ್ಷೆ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಆದ GCES ಅನ್ನು ಸರ್ಕಾರ ಬಿಡುಗಡೆ ಮಾಡಿದೆ. ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮನೋಜ್ ಅಹುಜಾ ಜಿಸಿಇಎಸ್ (general crop estimation survey) ಪೋರ್ಟಲ್ ಅನ್ನು ಅನಾವರಣಗೊಳಿಸಿದ್ದಾರೆ. ಕೃಷಿಯಲ್ಲಿ ರಿಯಲ್ ಟೈಮ್ ಸಮೀಕ್ಷೆ ಮತ್ತು ತಂತ್ರಜ್ಞಾನ, ನಿಖರ ಡಾಟಾ ಅವಶ್ಯಕತೆ ಇದೆ ಎಂದು ಹೇಳಿದ ಅಹುಜಾ, ಎಲ್ಲಾ ರಾಜ್ಯಗಳೂ ಕೂಡ ಜಿಸಿಇಎಸ್ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಅನ್ನು ಅಳವಡಿಸಿಕೊಂಡು ವಿಶ್ವಾಸಾರ್ಹತೆ ಹೆಚ್ಚುವಂತೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಪ್ರಮೋದ್ ಕುಮಾರ್ ಮೆಹೆರ್ಡಾ ಕೂಡ ಇದನ್ನು ಪುನರುಚ್ಚರಿಸಿ, ಸರಿಯಾದ ರೀತಿಯಲ್ಲಿ ಬೆಳೆ ಸಮೀಕ್ಷೆ ಬರಲು ಎಲ್ಲಾ ರಾಜ್ಯಗಳೂ ಜಿಸಿಇಎಸ್ ಅಪ್ಲಿಕೇಶನ್ಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಜೆಪಿ ಮಾರ್ಗನ್ನ ಗ್ಲೋಬಲ್ ಬಾಂಡ್ ಇಂಡೆಕ್ಸ್ನಲ್ಲಿ ಭಾರತವೂ ಸೇರ್ಪಡೆ; ಏನಿದರ ಅನುಕೂಲಗಳು?
ಹೊಸ ವ್ಯವಸ್ಥೆಯಿಂದ ಏನು ಪ್ರಯೋಜನ?
ಸದ್ಯ, ರಾಜ್ಯಗಳಲ್ಲಿ ಬೆಳೆ ಸಮೀಕ್ಷೆಯಲ್ಲಿ ಮ್ಯಾನುಯಲ್ ಆಗಿ ಮಾಡಲಾಗುತ್ತಿದೆ. ಡಾಟಾ ಸಂಗ್ರಹ, ಬೆಳೆ ಇಳುವರಿ ಅಂದಾಜು ಇತ್ಯಾದಿಯನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ಮಾಡಲಾಗುತ್ತಿದೆ. ಇದರಿಂದ ಪ್ರಕ್ರಿಯೆ ವಿಳಂಬವಾಗುತ್ತಿದೆ. ಹೊಸ ವಿಧಾನದಲ್ಲಿ, ಜಿಪಿಎಸ್ ಚಾಲಿತ ಮೊಬೈಲ್ ಆ್ಯಪ್ಗಳಿಂದ ಬೆಳೆ ಸಮೀಕ್ಷೆ ವಿವರ ಸಂಗ್ರಹಿಸಲಾಗುತ್ತದೆ. ಇದರ ದತ್ತಾಂಶವು ಸರ್ವರ್ನಲ್ಲಿ ಸಂಗ್ರಹವಾಗುತ್ತದೆ. ಇದನ್ನು ರಿಯಲ್ ಟೈಮ್ನಲ್ಲಿ ನೋಡಲು ಸಾಧ್ಯವಾಗುತ್ತದೆ. ಈ ಹೊಸ ವ್ಯವಸ್ಥೆ ಪಾರದರ್ಶಕವೂ ಆಗಿರುತ್ತದೆ.
ಇದನ್ನೂ ಓದಿ: ಕೆನಡಾದಲ್ಲಿದ್ದ ಮಹೀಂದ್ರ ಅಂಗಸಂಸ್ಥೆ ಬಂದ್; ದಿಢೀರ್ ಮುಚ್ಚಿದ ಪರಿಣಾಮ ಭಾರತೀಯ ಕಂಪನಿಗೆ ಸಾವಿರಾರು ಕೋಟಿ ನಷ್ಟ
ಜನರಲ್ ಕ್ರಾಮ್ ಎಸ್ಟಿಮೇಶನ್ ಸರ್ವೆನಲ್ಲಿ ಸಾಕಷ್ಟು ಫೀಚರ್ಗಳಿದ್ದು. ಗ್ರಾಮವಾರು ಜಿಸಿಇಎಸ್ ಪ್ಲಾನ್, ಬೆಳೆ ತೂಕ, ಇತ್ಯಾದಿ ಸಮಗ್ರ ಬೆಳೆ ಇಳುವರಿ ಅಂದಾಜು ವರದಿ ನೀಡಬಹುದು. ಈ ಆ್ಯಪ್ನಲ್ಲಿ ಜಿಯೋ ರೆಫರೆನ್ಸಿಂಗ್ ಫೀಚರ್ ಕೂಡ ಇದೆ. ಪ್ರಾಯೋಗಿಕ ಜಮೀನಿನ ಅಳತೆ ರಚಿಸುವ ಮತ್ತು ಅದರ ಹಾಗೂ ಬೆಳೆಗಳ ಫೋಟೋ ಅಪ್ಲೋಡ್ ಮಾಡಲು ಅವಕಾಶ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ