ಪ್ರಧಾನಿ ಮೋದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ರಾಜ್ಯ ಭೋಜನ ಆಯೋಜಿಸಲಿದ್ದಾರೆ: ವರದಿ

|

Updated on: Mar 18, 2023 | 11:54 AM

ಭಾರತ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ 20 ನಾಯಕರ ಗುಂಪಿನ ಶೃಂಗಸಭೆಯನ್ನು ಆಯೋಜಿಸುತ್ತಿದೆ, ಅಲ್ಲಿ ರಷ್ಯಾದ ಉಕ್ರೇನ್ ಆಕ್ರಮಣವು ಚರ್ಚೆಯ ಮುಖ್ಯ ವಿಷಯಗಳಲ್ಲಿ ಒಂದಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಟದಲ್ಲಿ ಪಾಲ್ಗೊಳ್ಳುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ

ಪ್ರಧಾನಿ ಮೋದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ರಾಜ್ಯ ಭೋಜನ ಆಯೋಜಿಸಲಿದ್ದಾರೆ: ವರದಿ
ಜೋ ಬೈಡನ್- ನರೇಂದ್ರ ಮೋದಿ
Follow us on

ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಈ ಬೇಸಿಗೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ರಾಜ್ಯ ಭೋಜನಕ್ಕೆ ಆಯೋಜಿಸಲು ಯೋಜಿಸಿದ್ದಾರೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಜನರು ಹೇಳಿರುವುದಾಗಿ ಬ್ಲೂಮ್ ಬರ್ಗ್ ವರದಿ ಮಾಡಿದೆ.ಔಪಚಾರಿಕ ರಾಜ್ಯ ಭೇಟಿಯು ಅಮೆರಿಕ (US)-ಭಾರತದ ಬಾಂಧವ್ಯವನ್ನು ಗಾಢವಾಗಿಸುವ ಸಂಕೇತವಾಗಿದೆ, ಏಕೆಂದರೆ ಚೀನಾದ ಬೆದರಿಕೆಯನ್ನು ಎದುರಿಸಲು ಆಡಳಿತವು ಮುಕ್ತ ಇಂಡೋ-ಪೆಸಿಫಿಕ್‌ಗಾಗಿ ನೀತಿಗಳು ಮತ್ತು ಉಪಕ್ರಮಗಳನ್ನು ಎದುರು ನೋಡುತ್ತಿದೆ. ಶ್ವೇತಭವನವು ಜೂನ್‌ನಲ್ಲಿ ರಾಜ್ಯ ಭೋಜನವನ್ನು ನಡೆಸುವ ಗುರಿಯನ್ನು ಹೊಂದಿದೆ ಆದರೆ ಸಮಯವು ಬದಲಾಗಬಹುದು ಎಂದು ಮೂಲಗಳು ಹೇಳಿವೆ. ಆದಾಗ್ಯೂ, ಈ ಬಗ್ಗೆ ಪ್ರತಿಕ್ರಿಯಿಸಲು ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರು ನಿರಾಕರಿಸಿದ್ದಾರೆ.

ಭಾರತ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ 20 ನಾಯಕರ ಗುಂಪಿನ ಶೃಂಗಸಭೆಯನ್ನು ಆಯೋಜಿಸುತ್ತಿದೆ, ಅಲ್ಲಿ ರಷ್ಯಾದ ಉಕ್ರೇನ್ ಆಕ್ರಮಣವು ಚರ್ಚೆಯ ಮುಖ್ಯ ವಿಷಯಗಳಲ್ಲಿ ಒಂದಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಟದಲ್ಲಿ ಪಾಲ್ಗೊಳ್ಳುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.ಬೈಡನ್ ಅವರು ಆಸ್ಟ್ರೇಲಿಯಾ ಮತ್ತು ಜಪಾನ್ ನಾಯಕರೊಂದಿಗೆ ಕ್ವಾಡ್ ಶೃಂಗಸಭೆಗಾಗಿ ಮೇ ತಿಂಗಳಲ್ಲಿ ಮೋದಿಯವರನ್ನು ಆಸ್ಟ್ರೇಲಿಯಾದಲ್ಲಿ ಭೇಟಿ ಮಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ:ಸ್ವಾಮಿ ನಿತ್ಯಾನಂದನ ನಕಲಿ ಕೈಲಾಸದೊಂದಿಗೆ ಅಮೆರಿಕದ 30 ನಗರಗಳು ಕೈಜೋಡಿಸಿವೆಯಂತೆ! ನಿತ್ಯಾನಂದನ ವಂಚನೆ ಪುರಾಣ ಕೇಳಿ ಬೇಸ್ತು ಬಿದ್ದ ಅಮೆರಿಕನ್ನರು!

ಮೋದಿ ಜತೆಗಿನ ಔತಣಕೂಟವು ಬೈಡನ್ ಅವರ ಮೂರನೇ ಔಪಚಾರಿಕ ರಾಜ್ಯ ಭೇಟಿ ಮತ್ತು ಭೋಜನವಾಗಿದೆ. ಯುಎಸ್ ಮತ್ತು ಭಾರತವು ಕಳೆದ ತಿಂಗಳು ಕ್ರಿಟಿಕಲ್ ಮತ್ತು ಎಮರ್ಜಿಂಗ್ ಟೆಕ್ನಾಲಜಿಯ ಒಂದು ಉಪಕ್ರಮವನ್ನು ಘೋಷಿಸಿತು, ಇದು ಜನರಲ್ ಎಲೆಕ್ಟ್ರಿಕ್ ಕೋ ಜೆಟ್ ಎಂಜಿನ್‌ಗಳ ಜಂಟಿ ಉತ್ಪಾದನೆ ಸೇರಿದಂತೆ ಸುಧಾರಿತ ರಕ್ಷಣಾ ಮತ್ತು ಕಂಪ್ಯೂಟಿಂಗ್ ತಂತ್ರಜ್ಞಾನವನ್ನು ಹಂಚಿಕೊಳ್ಳುವ ಯೋಜನೆಯಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ