Vladimir Putin: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್
ಉಕ್ರೇನಿಯನ್ ಮಕ್ಕಳನ್ನು ಕಾನೂನುಬಾಹಿರ ಗಡಿಪಾರು ಮಾಡಿದ್ದಕ್ಕಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಗೆ ಬಂಧನ ವಾರೆಂಟ್ ಹೊರಡಿಸಿದ ಐಸಿಸಿ.
ಹೇಗ್: ಉಕ್ರೇನಿಯನ್ ಮಕ್ಕಳನ್ನು ಕಾನೂನುಬಾಹಿರ ಗಡಿಪಾರು ಮಾಡಿದ್ದಕ್ಕಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(International Criminal Court) ಶುಕ್ರವಾರ ಬಂಧನ ವಾರಂಟ್ (Arrest Warrant) ಹೊರಡಿಸಿರುವುದಾಗಿ ಎಎಫ್ಪಿ ವರದಿ ಮಾಡಿದೆ.ಅದೇ ರೀತಿಯ ಆರೋಪದ ಮೇಲೆ ಮಕ್ಕಳ ಹಕ್ಕುಗಳ ರಷ್ಯಾದ ಅಧ್ಯಕ್ಷೀಯ ಕಮಿಷನರ್ ಮರಿಯಾ ಲ್ವೊವಾ-ಬೆಲೋವಾ ವಿರುದ್ಧವೂ ವಾರಂಟ್ ಹೊರಡಿಸಿದೆ ಎಂದು ಹೇಗ್ ಮೂಲದ ಐಸಿಸಿ ಹೇಳಿದೆ. ಉಕ್ರೇನ್ ಮೇಲೆ ತನ್ನ ಪಡೆಗಳು ದೌರ್ಜನ್ಯ ಎಸಗಿವೆ ಎಂಬ ಆರೋಪವನ್ನು ಮಾಸ್ಕೊ ಪದೇ ಪದೇ ನಿರಾಕರಿಸಿದೆ.
ಮಕ್ಕಳನ್ನು ಕಾನೂನುಬಾಹಿರವಾಗಿ ಗಡಿಪಾರು ಮಾಡಿದ ಮತ್ತು ಉಕ್ರೇನ್ ಪ್ರದೇಶದಿಂದ ರಷ್ಯಾದ ಒಕ್ಕೂಟಕ್ಕೆ ಜನರನ್ನು ಕಾನೂನುಬಾಹಿರವಾಗಿ ವರ್ಗಾಯಿಸಿದ ಶಂಕೆಯ ಮೇಲೆ ಪುಟಿನ್ ಬಂಧನಕ್ಕೆ ಐಸಿಸಿ ವಾರಂಟ್ ಹೊರಡಿಸಿದೆ.
ಈ ವಾರದ ಆರಂಭದಲ್ಲಿ ನ್ಯಾಯಾಲಯವು ವಾರಂಟ್‌ಗಳನ್ನು ಹೊರಡಿಸುವ ನಿರೀಕ್ಷೆಯಿದೆ ಎಂದು ರಾಯಿಟರ್ಸ್ ವರದಿ ಮಾಡಿತ್ತು, ಇದು ಉಕ್ರೇನ್ ಸಂಘರ್ಷದ ತನಿಖೆಯಲ್ಲಿ ಮೊದಲನೆಯದು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:41 pm, Fri, 17 March 23