Imran Khan: ಪಾಕಿಸ್ತಾನದ ಮಾಜಿ ಪಿಎಂ ಇಮ್ರಾನ್ ಖಾನ್​​ಗೆ 9 ಪ್ರಕರಣಗಳಲ್ಲಿ ರಕ್ಷಣಾ ಜಾಮೀನು

ಇಮ್ರಾನ್ ಖಾನ್ ನ್ಯಾಯಾಲಯಕ್ಕೆ ಹಾಜರಾದ ನಂತರ  8 ಭಯೋತ್ಪಾದನಾ ಪ್ರಕರಣ ಮತ್ತು ಒಂದು ಸಿವಿಲ್ ಪ್ರಕರಣದಲ್ಲಿ ರಕ್ಷಣಾ ಜಾಮೀನು ನೀಡಲಾಗಿದೆ.

Imran Khan: ಪಾಕಿಸ್ತಾನದ ಮಾಜಿ ಪಿಎಂ ಇಮ್ರಾನ್ ಖಾನ್​​ಗೆ 9 ಪ್ರಕರಣಗಳಲ್ಲಿ ರಕ್ಷಣಾ ಜಾಮೀನು
ಇಮ್ರಾನ್ ಖಾನ್
Follow us
|

Updated on:Mar 17, 2023 | 9:28 PM

ಲಾಹೋರ್‌: ಎಂಟು ಭಯೋತ್ಪಾದನೆ ಪ್ರಕರಣಗಳಲ್ಲಿ ಮತ್ತು ಸಿವಿಲ್ ಪ್ರಕರಣದಲ್ಲಿ ಲಾಹೋರ್ ಹೈಕೋರ್ಟ್ (Lahore High Court), ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರಿಗೆ ರಕ್ಷಣಾ ಜಾಮೀನು ಮಂಜೂರು ಮಾಡಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಮಾರ್ಚ್ 18 ರವರೆಗೆ ಬಂಧನ ವಾರೆಂಟ್ ರದ್ದು ಮಾಡಿದ ಬೆನ್ನಲ್ಲೇ ನ್ಯಾಯಾಲಯ ಈ ರಕ್ಷಣಾ ಜಾಮೀನು ನೀಡಿದೆ. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಮುಖ್ಯಸ್ಥ, 70ರ ಹರೆಯದ ಖಾನ್, ಒಂಬತ್ತು ಪ್ರಕರಣಗಳಲ್ಲಿ ರಕ್ಷಣಾತ್ಮಕ ಜಾಮೀನು ಪಡೆಯಲು ಬುಲೆಟ್ ಪ್ರೂಫ್ ವಾಹನದಲ್ಲಿ ಲಾಹೋರ್ ಹೈಕೋರ್ಟ್ (LHC) ಬಂದಿದ್ದರು.ಎಲ್‌ಎಚ್‌ಸಿಯ ದ್ವಿಸದಸ್ಯ ಪೀಠ, ನ್ಯಾಯಮೂರ್ತಿ ತಾರಿಕ್ ಸಲೀಮ್ ಶೇಖ್ ಮತ್ತು ನ್ಯಾಯಮೂರ್ತಿ ಫಾರೂಕ್ ಹೈದರ್ ಅವರನ್ನೊಳಗೊಂಡ ಪೀಠವು ಭಯೋತ್ಪಾದನೆ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳ ವಿರುದ್ಧ ಸಲ್ಲಿಸಲಾದ ಜಾಮೀನು ಅರ್ಜಿಗಳ ವಿಚಾರಣೆಯನ್ನು ನಡೆಸಿತು ಎಂದು ಜಿಯೋ ಟಿವಿ ವರದಿ ಮಾಡಿದೆ.

ಇಸ್ಲಾಮಾಬಾದ್‌ನಲ್ಲಿನ ಐದು ಪ್ರಕರಣಗಳಿಗೆ ನ್ಯಾಯಾಲಯವು ಮಾರ್ಚ್ 24 ರವರೆಗೆ ಪಿಟಿಐ ಮುಖ್ಯಸ್ಥರಿಗೆ ಜಾಮೀನು ನೀಡಿದೆ. ಲಾಹೋರ್‌ನಲ್ಲಿನ ಮೂರು ಪ್ರಕರಣಗಳಿಗೆ ಖಾನ್ ಮಾರ್ಚ್ 27 ರವರೆಗೆ ಜಾಮೀನು ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.

ಏತನ್ಮಧ್ಯೆ, ನ್ಯಾಯಮೂರ್ತಿ ಸಲೀಂ ಅವರು ತಮ್ಮ ವಿರುದ್ಧ ದಾಖಲಾಗಿರುವ ಸಿವಿಲ್ ಪ್ರಕರಣದ ವಿರುದ್ಧ ಖಾನ್ ಸಲ್ಲಿಸಿರುವ ಜಾಮೀನು ಅರ್ಜಿಗಳನ್ನೂ ಆಲಿಸಿದ್ದಾರೆ.

ಇದನ್ನೂ ಓದಿ: ಸ್ಕಾಟ್ಲೆಂಡ್​ನಲ್ಲಿ ಹೀಗೊಂದು ಘಟನೆ; ಮಗು ಸತ್ತು 48 ವರ್ಷಗಳ ಬಳಿಕ ಮೃತದೇಹದ ಅವಶೇಷ ಪಡೆದ ತಾಯಿ!

ಇದಕ್ಕೂ ಮೊದಲು, ಇಸ್ಲಾಮಾಬಾದ್ ಹೈಕೋರ್ಟ್ ಖಾನ್ ವಿರುದ್ಧ ಹೊರಡಿಸಲಾದ ಜಾಮೀನು ರಹಿತ ಬಂಧನ ವಾರಂಟ್‌ಗಳನ್ನು ಮಾರ್ಚ್ 18 ರವರೆಗೆ ರದ್ದುಗೊಳಿಸಿದ್ದು, ತೋಷಖಾನಾ ಪ್ರಕರಣದ ವಿಚಾರಣೆಗಾಗಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಲು ಅವರಿಗೆ ಅವಕಾಶವನ್ನು  ನೀಡಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:45 pm, Fri, 17 March 23