Watch: ಮನೆಯ ಹೊರಗೆ ಗ್ಯಾಸ್ ಮಾಸ್ಕ್‌ನಲ್ಲಿ ಕಾಣಿಸಿಕೊಂಡ ಇಮ್ರಾನ್ ಖಾನ್
ಇಮ್ರಾನ್ ಖಾನ್‌ಗೆ ಹಾನಿ ಮಾಡಲು ಕಳುಹಿಸಲಾದ ಪೊಲೀಸರು ಮತ್ತು ರೇಂಜರ್‌ಗಳನ್ನು ಜನರು ಹಿಮ್ಮೆಟ್ಟಿಸಿದರು" ಎಂದು ಅವರ ಅಧಿಕೃತ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷವು ಅವರ ಮನೆಯ ಹೊರಗೆ ಬೆಂಬಲಿಗರು ಸಂಭ್ರಮಾಚರಣೆ ಮಾಡುತ್ತಿರುವ ವಿಡಿಯೊ ಟ್ವೀಟ್ ಮಾಡಿದೆ
ದೆಹಲಿ: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಇಂದು (ಬುಧವಾರ) ತಮ್ಮ ಮನೆಯಿಂದ ಭದ್ರತಾ ಪಡೆಗಳನ್ನು ಹಿಂತೆಗೆದುಕೊಂಡ ನಿಮಿಷಗಳ ನಂತರ ಗ್ಯಾಸ್ ಮಾಸ್ಕ್‌ನಲ್ಲಿ (Gas Mask) ಕಾಣಿಸಿಕೊಂಡಿದ್ದಾರೆ. ನೂರಾರು ಬೆಂಬಲಿಗರೊಂದಿಗೆ ಹಿಂಸಾತ್ಮಕ ಘರ್ಷಣೆಯ ನಂತರ ಅವರ ನಿವಾಸದ ಮುತ್ತಿಗೆಯನ್ನು ಕೊನೆಗೊಳಿಸಿ ರಸ್ತೆ ತಡೆ ಮತ್ತು ಚೆಕ್‌ಪೋಸ್ಟ್‌ಗಳ ನಿರ್ಬಂಧಿಸುವುದನ್ನು ಕೈಬಿಟ್ಟ ನಂತರ ಪೊಲೀಸರು ಮತ್ತು ಅರೆಸೈನಿಕ ರೇಂಜರ್ ಪಡೆಯನ್ನು ಹಿಂತೆಗೆದುಕೊಂಡಿದ್ದಾರೆ.
ಇಮ್ರಾನ್ ಖಾನ್ ತಮ್ಮ ಮನೆಯ ಹೊರಗೆ ನಿಂತು, ಪಾರದರ್ಶಕ ಗ್ಯಾಸ್ ಮಾಸ್ಕ್ ಧರಿಸಿ ಬೆಂಬಲಿಗರೊಂದಿಗೆ ಮಾತನಾಡುತ್ತಿರುವ ವಿಡಿಯೊ ಟ್ವಿಟರ್ ನಲ್ಲಿ ಕಾಣಿಸಿಕೊಂಡಿದೆ.
Imran khan seen wearing protective gas mask in his residence while his supporters are risking their lives on streets. #imrankhanPTI #ImranKhanArrest #Zaman_Park_Lahore #ZamanPark_under_attack pic.twitter.com/Ak0TTSt7YV
— ntg (@9_0_9_0_1) March 15, 2023
ಇದಕ್ಕೂ ಮೊದಲು, ಭದ್ರತಾ ಪಡೆಗಳು ಖಾನ್ ಅವರ ನೂರಾರು ಬೆಂಬಲಿಗರ ಮೇಲೆ ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಪ್ರಯೋಗಿಸಿದ್ದರು.ಇಮ್ರಾನ್ ಖಾನ್ ಬಂಧನವನ್ನು ತಡೆಯುವ ಪ್ರಯತ್ನದಲ್ಲಿ ಬೆಂಬಲಿಗರು ಅವರ ಮನೆಗೆ ಸುತ್ತುವರಿದಿದ್ದರು. ತಾತ್ಕಾಲಿಕ ಪರಿಹಾರವಾಗಿ, ಭ್ರಷ್ಟಾಚಾರ ಪ್ರಕರಣದಲ್ಲಿ ಅವರನ್ನು ಬಂಧಿಸಲು ಮಾಜಿ ಪ್ರಧಾನಿ ಅವರ ನಿವಾಸದ ಹೊರಗೆ ಕಾರ್ಯಾಚರಣೆಯನ್ನು ಗುರುವಾರದವರೆಗೆ ನಿಲ್ಲಿಸುವಂತೆ ಪಾಕಿಸ್ತಾನದ ನ್ಯಾಯಾಲಯವು ಪೊಲೀಸರಿಗೆ ಆದೇಶಿಸಿದೆ.
ಇದನ್ನೂ ಓದಿ: Imran Khan: ಇಮ್ರಾನ್ ಖಾನ್ ಬಂಧನ ಮಾಡದಂತೆ ಪೊಲೀಸರಿಗೆ ಲಾಹೋರ್ ನ್ಯಾಯಾಲಯ ಆದೇಶ
“ಇಮ್ರಾನ್ ಖಾನ್‌ಗೆ ಹಾನಿ ಮಾಡಲು ಕಳುಹಿಸಲಾದ ಪೊಲೀಸರು ಮತ್ತು ರೇಂಜರ್‌ಗಳನ್ನು ಜನರು ಹಿಮ್ಮೆಟ್ಟಿಸಿದರು” ಎಂದು ಅವರ ಅಧಿಕೃತ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷವು ಅವರ ಮನೆಯ ಹೊರಗೆ ಬೆಂಬಲಿಗರು ಸಂಭ್ರಮಾಚರಣೆ ಮಾಡುತ್ತಿರುವ ವಿಡಿಯೊ ಟ್ವೀಟ್ ಮಾಡಿದೆ. ಹೆಚ್ಚು ಜನರು ಜಮಾನ್ ಪಾರ್ಕ್‌ಗೆ ಬರುತ್ತಿದ್ದಾರೆ. ಈ ಆಮದು ಮಾಡಿಕೊಂಡ ಸರ್ಕಾರದ ದುಷ್ಟ ಉದ್ದೇಶಗಳನ್ನು ಎಂದಿಗೂ ಯಶಸ್ವಿಯಾಗಲು ಬಿಡುವುದಿಲ್ಲ, ದೇವರ ಇಚ್ಛೆ” ಎಂದು ಪಕ್ಷ ಹೇಳಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:24 pm, Wed, 15 March 23