Sign In

By signing in or creating an account, you agree with Associated Broadcasting Company's Terms & Conditions and Privacy Policy.

North Korea: ಮತ್ತೆ ಖಂಡಾಂತರ ಕ್ಷಿಪಣಿ ಉಡಾವಣೆ ಮಾಡಿದ ಉತ್ತರ ಕೊರಿಯಾ

ಉತ್ತರ ಕೊರಿಯಾವು ಗುರುವಾರ ಬೆಳಗ್ಗೆ ಮತ್ತೊಂದು ಖಂಡಾಂತರ ಕ್ಷಿಪಣಿಯನ್ನು ಉಡಾವಣೆ ಮಾಡಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸ್ಥಳೀಯ ಕಾಲಮಾನ ಬೆಳಗ್ಗೆ 7:10ಕ್ಕೆ ಪ್ಯೊಂಗ್‌ಯಾಂಗ್‌ನಿಂದ ಉಡಾಯಿಸಲಾಯಿತು ಮತ್ತು ಕೊರಿಯನ್ ಪರ್ಯಾಯ ದ್ವೀಪದ ಪೂರ್ವಕ್ಕೆ ಸಮುದ್ರ ವಲಯಕ್ಕೆ ಹಾರಿತು ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಹೇಳಿದೆ

North Korea: ಮತ್ತೆ ಖಂಡಾಂತರ ಕ್ಷಿಪಣಿ ಉಡಾವಣೆ ಮಾಡಿದ ಉತ್ತರ ಕೊರಿಯಾ
ಖಂಡಾಂತರ ಕ್ಷಿಪಣಿImage Credit source: NDTV
Follow us
ನಯನಾ ರಾಜೀವ್
|

Updated on:Mar 16, 2023 | 8:26 AM

ಉತ್ತರ ಕೊರಿಯಾವು ಗುರುವಾರ ಬೆಳಗ್ಗೆ ಮತ್ತೊಂದು ಖಂಡಾಂತರ ಕ್ಷಿಪಣಿಯನ್ನು ಉಡಾವಣೆ ಮಾಡಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸ್ಥಳೀಯ ಕಾಲಮಾನ ಬೆಳಗ್ಗೆ 7:10ಕ್ಕೆ ಪ್ಯೊಂಗ್‌ಯಾಂಗ್‌ನಿಂದ ಉಡಾಯಿಸಲಾಯಿತು ಮತ್ತು ಕೊರಿಯನ್ ಪರ್ಯಾಯ ದ್ವೀಪದ ಪೂರ್ವಕ್ಕೆ ಸಮುದ್ರ ವಲಯಕ್ಕೆ ಹಾರಿತು ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಹೇಳಿದೆ. ಉತ್ತರ ಕೊರಿಯಾ ಒಂದು ವಾರದಲ್ಲಿ ಮೂರನೇ ಬಾರಿಗೆ ಕ್ಷಿಪಣಿ ಪರೀಕ್ಷೆ ನಡೆಸಿದೆ. ಈ ಮಾಹಿತಿಯನ್ನು ದಕ್ಷಿಣ ಕೊರಿಯಾ ನೀಡಿದೆ. ಉತ್ತರ ಕೊರಿಯಾದ ಪ್ರಕಾರ, ಈ ದೀರ್ಘ-ಶ್ರೇಣಿಯ ಕ್ಷಿಪಣಿಯನ್ನು ಪಯೋಂಗ್ಯಾಂಗ್‌ನ ಸುನಾನ್ ಪ್ರದೇಶದಿಂದ ಹಾರಿಸಲಾಗಿದೆ.

ನಾಲ್ಕು ದಿನಗಳ ಹಿಂದೆ ಕಿಮ್ ಜಲಾಂತರ್ಗಾಮಿ ನೌಕೆಯಿಂದ ಎರಡು ಕ್ಷಿಪಣಿಗಳನ್ನು ಪರೀಕ್ಷಿಸಿದ್ದರು. ಅಮೆರಿಕ-ದಕ್ಷಿಣ ಕೊರಿಯಾ ನಡುವೆ ನಡೆಯುತ್ತಿರುವ ಸೇನಾ ಸಮರಾಭ್ಯಾಸದ ನಡುವೆ ಇದೀಗ ಉತ್ತರ ಕೊರಿಯಾ ಕೂಡ ತನ್ನ ದುರ್ವರ್ತನೆ ತೋರಲು ಆರಂಭಿಸಿದೆ. ಅದೇ ಸಮಯದಲ್ಲಿ, ಜಪಾನ್ ದ್ವೀಪದಿಂದ 250 ಕಿಮೀ ದೂರದಲ್ಲಿ ಕ್ಷಿಪಣಿ ಬಿದ್ದಿದೆ ಎಂದು ಜಪಾನ್ ರಕ್ಷಣಾ ಸಚಿವಾಲಯ ತಿಳಿಸಿದೆ.

ಕ್ಷಿಪಣಿ ಪರೀಕ್ಷೆಯ ನಂತರ ಜಪಾನ್ ಮತ್ತು ದಕ್ಷಿಣ ಕೊರಿಯಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಗೆ ಒತ್ತಾಯಿಸಬಹುದು. ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್-ಯೋಲ್ ಜಪಾನ್‌ಗೆ ಭೇಟಿ ನೀಡುತ್ತಿದ್ದಾರೆ. ಅವರು ಟೋಕಿಯೊದಲ್ಲಿ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ಇದಲ್ಲದೆ, ಉತ್ತರ ಕೊರಿಯಾ ಮತ್ತು ಇತರ ಸವಾಲುಗಳನ್ನು ಎದುರಿಸಲು ನಾವು ಉತ್ತಮ ಸಹಕಾರವನ್ನು ಚರ್ಚಿಸುತ್ತೇವೆ. ಕ್ಷಿಪಣಿ ಪರೀಕ್ಷೆಯಲ್ಲಿ, ಉತ್ತರ ಕೊರಿಯಾ ಈ ಜಂಟಿ ಸಮರಾಭ್ಯಾಸವನ್ನು ವಿರೋಧಿಸಿ ಜಲಾಂತರ್ಗಾಮಿಯಿಂದ ಕ್ಷಿಪಣಿಯನ್ನು ಪರೀಕ್ಷಿಸಿದೆ ಎಂದು ಹೇಳಿದೆ.

ವಾಸ್ತವವಾಗಿ, B-1B ಕಾರ್ಯತಂತ್ರದ ಪಾಲುದಾರಿಕೆಯ ಅಡಿಯಲ್ಲಿ, US ಸೈನ್ಯ ಮತ್ತು ದಕ್ಷಿಣ ಕೊರಿಯಾದ ಸೈನ್ಯವು ಜಂಟಿ ಸಮರಾಭ್ಯಾಸವನ್ನು ನಡೆಸುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:25 am, Thu, 16 March 23