Ballistic Missile: ಉತ್ತರ ಕೊರಿಯಾದಿಂದ 48 ಗಂಟೆಗಳಲ್ಲಿ 2 ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪರೀಕ್ಷೆ
ಉತ್ತರ ಕೊರಿಯಾವು ಕಳೆದ 48 ಗಂಟೆಗಳಲ್ಲಿ 2 ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪ್ರಯೋಗವನ್ನು ನಡೆಸಿದೆ. ಉತ್ತರ ಕೊರಿಯಾ ಮತ್ತೊಮ್ಮೆ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ನಡೆಸಿದೆ.
ಉತ್ತರ ಕೊರಿಯಾವು ಕಳೆದ 48 ಗಂಟೆಗಳಲ್ಲಿ 2 ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪ್ರಯೋಗವನ್ನು ನಡೆಸಿದೆ. ಉತ್ತರ ಕೊರಿಯಾ ಮತ್ತೊಮ್ಮೆ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ನಡೆಸಿದೆ. ದಕ್ಷಿಣ ಕೊರಿಯಾದ ಪ್ರಕಾರ, ಉತ್ತರ ಕೊರಿಯಾ ತನ್ನ ಪೂರ್ವ ಸಮುದ್ರದ ಕಡೆಗೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸಿದೆ. ಸೋಮವಾರ ಬೆಳಗ್ಗೆ ಉಡಾವಣೆ ಮಾಡಲಾಗಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ಹೇಳಿದ್ದಾರೆ. ಯುಎಸ್-ದಕ್ಷಿಣ ಕೊರಿಯಾ ಜಂಟಿ ವಾಯು ಅಭ್ಯಾಸದ ನಂತರ ಉತ್ತರ ಕೊರಿಯಾ ಪೂರ್ವ ಸಮುದ್ರದ ಕಡೆಗೆ ಎರಡು ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ.
48 ಗಂಟೆಗಳಲ್ಲಿ ನಡೆದ ಎರಡನೇ ದಾಳಿ ಇದಾಗಿದೆ. ಉತ್ತರ ಕೊರಿಯಾದ ಸುಖೋನ್ ಪ್ರದೇಶದಿಂದ ಬೆಳಿಗ್ಗೆ 7 ಗಂಟೆಗೆ ಉಡಾವಣೆ ಪತ್ತೆಯಾಗಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು (ಜೆಸಿಎಸ್) ತಿಳಿಸಿದ್ದಾರೆ.
395 ಕಿಮೀ ಮತ್ತು 337 ಕಿಮೀ ದೂರದ ಗುರಿಗಳ ಮೇಲೆ ಎರಡು ಸ್ಪೋಟಕಗಳನ್ನು ಹಾರಿಸಿರುವುದಾಗಿ ಉತ್ತರ ಕೊರಿಯಾ ಹೇಳಿದೆ. B-1B ಸ್ಟ್ರಾಟೆಜಿಕ್ ಪಾಲುದಾರಿಕೆಯ ಭಾಗವಾಗಿ ಯುಎಸ್ ಮತ್ತು ದಕ್ಷಿಣ ಕೊರಿಯಾ ಭಾನುವಾರ ಜಂಟಿ ಏರ್ ಡ್ರಿಲ್ಗಳನ್ನು ನಡೆಸಿದ ಒಂದು ದಿನದ ನಂತರ ಉತ್ತರ ಕೊರಿಯಾ ಪರೀಕ್ಷೆ ನಡೆಸಿದೆ.
ಮತ್ತಷ್ಟು ಓದಿ: ಉಕ್ರೇನ್ ಮೇಲೆ ಸಿಡಿತಲೆರಹಿತ ಪರಮಾಣು ಕ್ಷಿಪಣಿ ಪ್ರಯೋಗಿಸುತ್ತಿರುವ ರಷ್ಯಾ; ಕಾರಣ ಇಲ್ಲಿದೆ
ಆದಾಗ್ಯೂ, ದಕ್ಷಿಣ ಕೊರಿಯಾ ತನ್ನ ಕಣ್ಗಾವಲು ಮತ್ತು ಜಾಗರೂಕತೆಯನ್ನು ಬಲಪಡಿಸುವ ಜೊತೆಗೆ ಯುಎಸ್ ಜೊತೆ ನಿಕಟ ಸಂಬಂಧವನ್ನು ಉಳಿಸಿಕೊಳ್ಳುವುದಾಗಿ ಹೇಳಿದೆ.
ಉತ್ತರ ಕೊರಿಯಾ ಶನಿವಾರ ಅಪಾಯಕಾರಿ ದೂರಗಾಮಿ ಕ್ಷಿಪಣಿಯನ್ನು ಪರೀಕ್ಷಿಸಿದೆ. ಪ್ರತಿಸ್ಪರ್ಧಿಗಳ ವಿರುದ್ಧ ಮಾರಣಾಂತಿಕ ಪರಮಾಣು ದಾಳಿಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವುದು ಈ ಪರೀಕ್ಷೆಯ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಜಂಟಿ ಕಸರತ್ತು ನಡೆಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಉತ್ತರ ಕೊರಿಯಾ ಅಮೆರಿಕ ಮತ್ತು ದಕ್ಷಿಣ ಕೊರಿಯಾಗಳಿಗೆ ಎಚ್ಚರಿಕೆ ನೀಡಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:13 am, Mon, 20 February 23