Ballistic Missile: ಉತ್ತರ ಕೊರಿಯಾದಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಯೋಗ: ಜಪಾನ್, ದಕ್ಷಿಣ ಕೊರಿಯಾದಲ್ಲಿ ಉದ್ವಿಗ್ನ ವಾತಾವರಣ

ಉತ್ತರ ಕೊರಿಯಾ(North Korea) ಮತ್ತೊಮ್ಮೆ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ನಡೆಸಿದೆ. ಉತ್ತರ ಕೊರಿಯಾದ ಈ ಕ್ಷಿಪಣಿ ಜಪಾನ್ ಬಳಿ ಸಮುದ್ರದಲ್ಲಿ ಬಿದ್ದಿದೆ.

Ballistic Missile: ಉತ್ತರ ಕೊರಿಯಾದಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಯೋಗ: ಜಪಾನ್, ದಕ್ಷಿಣ ಕೊರಿಯಾದಲ್ಲಿ ಉದ್ವಿಗ್ನ ವಾತಾವರಣ
ಉತ್ತರ ಕೊರಿಯಾ, ಕ್ಷಿಪಣಿ
Follow us
ನಯನಾ ರಾಜೀವ್
|

Updated on: Feb 19, 2023 | 9:43 AM

ಉತ್ತರ ಕೊರಿಯಾ(North Korea) ಮತ್ತೊಮ್ಮೆ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ನಡೆಸಿದೆ. ಉತ್ತರ ಕೊರಿಯಾದ ಈ ಕ್ಷಿಪಣಿ ಜಪಾನ್ ಬಳಿ ಸಮುದ್ರದಲ್ಲಿ ಬಿದ್ದಿದೆ. ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳ ಬೆದರಿಕೆ ನಿರ್ಲಕ್ಷಿಸಿರುವ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆಗಳನ್ನು ಮುಂದುವರೆಸಿದೆ. ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆ ಜಾಗತಿಕ ಶಾಂತಿಗೆ ಮಾರಕ ಎಂದು ಅಮೆರಿಕ ಹೇಳಿದೆ. ಕ್ಷಿಪಣಿ (Missile) ಪರೀಕ್ಷೆಯನ್ನು ಖಚಿತಪಡಿಸಿದ ದಕ್ಷಿಣ ಕೊರಿಯಾ, ಉತ್ತರ ಕೊರಿಯಾ ಕನಿಷ್ಠ ಒಂದು ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸಮುದ್ರಕ್ಕೆ ಹಾರಿಸಿದೆ ಎಂದು ಹೇಳಿದೆ.

ದೇಶದ ಭದ್ರತೆ ಖಾತರಿಪಡಿಸಲು ಕ್ಷಿಪಣಿ ಪರೀಕ್ಷೆ ಅನಿವಾರ್ಯ ಎಂದು ಉತ್ತರ ಕೊರಿಯಾ ಪ್ರತ್ಯುತ್ತರ ನೀಡಿದೆ. ಯಾವ ರೀತಿಯ ಕ್ಷಿಪಣಿಯನ್ನು ಹಾರಿಸಲಾಗಿದೆ ಮತ್ತು ಅದು ಎಷ್ಟು ದೂರಕ್ಕೆ ಬಿದ್ದಿದೆ ಎಂಬುದನ್ನು ತಕ್ಷಣ ಹೇಳಲು ಸಾಧ್ಯವಿಲ್ಲ ಎಂದು ಜಂಟಿ ಮುಖ್ಯಸ್ಥರು ಹೇಳಿದ್ದಾರೆ.

ಉತ್ತರ ಕೊರಿಯಾದ ವಿದೇಶಾಂಗ ಸಚಿವಾಲಯ ಒಂದು ದಿನದ ಹಿಂದೆ ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಜಪಾನ್‌ಗೆ ಬೆದರಿಕೆ ಹಾಕಿತ್ತು. ಇದರಲ್ಲಿ ಅವರು ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಮಿಲಿಟರಿ ಡ್ರಿಲ್ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಬಹುದು ಎಂದು ಎಚ್ಚರಿಸಿದ್ದರು.

ಮತ್ತಷ್ಟು ಓದಿ: ಉತ್ತರ ಕೊರಿಯಾದಲ್ಲಿ ಕೋವಿಡ್ ಉಲ್ಬಣವಾಗಿದ್ದಾಗ ತೀವ್ರ ಅಸ್ವಸ್ಥರಾಗಿದ್ದರು ಕಿಮ್ ಜಾಂಗ್ ಉನ್

ಇದು ಉತ್ತರ ಕೊರಿಯಾದ ಅತ್ಯಂತ ಶಕ್ತಿಶಾಲಿ ಕ್ಷಿಪಣಿ ಎಂದು ಜಪಾನ್ ಹೇಳಿದೆ. ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆಯ ನಂತರ ಅದು ಉಡಾವಣೆಯಾದ ಒಂದು ಗಂಟೆಗೂ ಹೆಚ್ಚು ಸಮಯದ ನಂತರ ಜಪಾನ್‌ನ ವಿಶೇಷ ಆರ್ಥಿಕ ವಲಯದೊಳಗಿನ ಸಮುದ್ರದಲ್ಲಿ ಚಿಮ್ಮಿತು ಎಂದು ಜಪಾನಿನ ಅಧಿಕಾರಿಗಳು ತಿಳಿಸಿದ್ದಾರೆ.

ಈ ಶಸ್ತ್ರಾಸ್ತ್ರವು ಉತ್ತರ ಕೊರಿಯಾದ ಅತಿದೊಡ್ಡ ಕ್ಷಿಪಣಿಗಳಲ್ಲಿ ಒಂದಾಗಿದೆ ಎಂದು ಜಪಾನ್ ಹೇಳಿಕೊಂಡಿದೆ. ಜನವರಿ 1ರ ನಂತರ ಉತ್ತರ ಕೊರಿಯಾ ನಡೆಸಿದ ಮೊದಲ ಕ್ಷಿಪಣಿ ಪರೀಕ್ಷೆ ಇದಾಗಿದೆ. ಕಳೆದ ವರ್ಷ ಉತ್ತರ ಕೊರಿಯಾ ದಾಖಲೆಯ ಕ್ಷಿಪಣಿ ಪರೀಕ್ಷೆ ನಡೆಸಿತ್ತು. ಪರಮಾಣು ಶಸ್ತ್ರಸಜ್ಜಿತ ಉತ್ತರ ಕೊರಿಯಾ ಕಳೆದ ವರ್ಷ ಹೆಚ್ಚಿನ ಸಂಖ್ಯೆಯ ಕ್ಷಿಪಣಿಗಳನ್ನು ಹಾರಿಸಿತು. ಇದು ಖಂಡಾಂತರ ಕ್ಷಿಪಣಿಗಳನ್ನೂ (ICBM) ಒಳಗೊಂಡಿದೆ.

ಮತ್ತಷ್ಟು ಓದಿ: Agni V ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ನಡುವೆಯೇ ಭಾರತದಿಂದ ಅಗ್ನಿ 5 ಕ್ಷಿಪಣಿ ಪರೀಕ್ಷೆ ಯಶಸ್ವಿ

ಉತ್ತರ ಕೊರಿಯಾ ತನ್ನ ಕ್ಷಿಪಣಿಗಳು ಯುಎಸ್‌ನಲ್ಲಿ ಎಲ್ಲಿ ಬೇಕಾದರೂ ಹೊಡೆಯುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಿಕೊಂಡಿದೆ. ಅದೇ ಸಮಯದಲ್ಲಿ, ಉತ್ತರ ಕೊರಿಯಾ ಇತ್ತೀಚಿನ ದಿನಗಳಲ್ಲಿ ಪರಮಾಣು ಪರೀಕ್ಷೆಗೆ ತಯಾರಿ ನಡೆಸುತ್ತಿದೆ. ಉತ್ತರ ಕೊರಿಯಾ ಇತ್ತೀಚೆಗೆ ತನ್ನ ಸೇನೆಯ ಸ್ಥಾಪನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ತನ್ನ ಅತಿದೊಡ್ಡ ಕ್ಷಿಪಣಿ ಸಂಗ್ರಹವನ್ನು ಪ್ರದರ್ಶಿಸಿತು. ಇದು ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಕ್ರೂಸ್ ಕ್ಷಿಪಣಿಗಳನ್ನು ಸಹ ಒಳಗೊಂಡಿತ್ತು.

ಉತ್ತರ ಕೊರಿಯಾ ಏಕೆ ಕ್ಷಿಪಣಿ ಪರೀಕ್ಷೆ ನಡೆಸುತ್ತಿದೆ? ಪ್ಯೊಂಗ್ಯಾಂಗ್ ಬಳಿಯ ಸುನಾನ್ ಪ್ರದೇಶದಿಂದ ದೂರಗಾಮಿ ಕ್ಷಿಪಣಿಯನ್ನು ಹಾರಿಸಲಾಯಿತು ಎಂದು ದಕ್ಷಿಣ ಕೊರಿಯಾದ ಮಿಲಿಟರಿ ತಿಳಿಸಿದೆ. ಉತ್ತರ ಕೊರಿಯಾ ತನ್ನ ಇತ್ತೀಚಿನ ICBM ಪರೀಕ್ಷೆಗಳನ್ನು ನಡೆಸಿರುವ ಪ್ಯೋಂಗ್ಯಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಳ ಸುನಾನ್.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್