Kim Jong Un: ಮೊದಲ ಬಾರಿಗೆ ಪತ್ನಿ ಹಾಗೂ ಮಗಳೊಂದಿಗೆ ಕಾಣಿಸಿಕೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕಳೆದ 40 ದಿನಗಳಿಂದ ಕಾಣೆಯಾಗಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಮತ್ತೆ ಅವರ ಆರೋಗ್ಯದ ಬಗ್ಗೆ ಊಹಾಪೋಹಗಳು ಎದ್ದಿತ್ತು.
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕಳೆದ 40 ದಿನಗಳಿಂದ ಕಾಣೆಯಾಗಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಮತ್ತೆ ಅವರ ಆರೋಗ್ಯದ ಬಗ್ಗೆ ಊಹಾಪೋಹಗಳು ಎದ್ದಿತ್ತು. ಆದರೆ ಈಗ ಪತ್ನಿ ಹಾಗೂ ಮಗಳ ಜತೆಗೆ ಕಾಣಿಸಿಕೊಂಡಿದ್ದು, ಎಲ್ಲಾ ಅಂತೆ, ಕಂತೆಗಳಿಗೂ ಬೀಗ ಬಿದ್ದಿದೆ. ಕಿಮ್ ಜಾಂಗ್ ಉನ್ ತನ್ನ ಪತ್ನಿ ಹಾಗೂ ಮಗಳೊಂದಿಗೆ ಬ್ಯಾರಕ್ಗೆ ಭೇಟಿ ನೀಡಿದ್ದರು, ಸಶಸ್ತ್ರ ಪಡೆಗಳ ಸ್ಥಾಪನೆಯ 75ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಅದ್ಧೂರಿ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಅವರು ಆಡಳಿತಾರೂಢ ವರ್ಕರ್ಸ್ ಪಾರ್ಟಿಯ ಸೆಂಟ್ರಲ್ ಮಿಲಿಟರಿ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದರು ಮತ್ತು ಹಿರಿಯ ಮಿಲಿಟರಿ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಜೂ ಏ ಕಿಮ್ ಜಾಂಗ್ ಉನ್ ಅವರ ಎರಡನೇ ಮಗು ಎಂದು ನಂಬಲಾಗಿದೆ. ಉತ್ತರ ಕೊರಿಯಾವು ವರ್ಷಗಳಿಂದ ಘನ-ಇಂಧನ ಕ್ಷಿಪಣಿಗಳ ಮೇಲೆ ಕೆಲಸ ಮಾಡುತ್ತಿದೆ ಮತ್ತು ಇತ್ತೀಚಿನ ತಿಂಗಳುಗಳಲ್ಲಿ ಹೊಸ ಎಂಜಿನ್‌ಗಳನ್ನು ಪರೀಕ್ಷಿಸಿದೆ. ಉತ್ತರ ಕೊರಿಯಾವು MIRV ಮತ್ತು ಡಿಕಾಯ್ ತಂತ್ರಜ್ಞಾನಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ.
ಮತ್ತಷ್ಟು ಓದಿ: Kim Jong Un: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ 40 ದಿನಗಳಿಂದ ಕಾಣಿಸ್ತಿಲ್ವಂತೆ, ಆರೋಗ್ಯದ ಬಗ್ಗೆ ಮತ್ತೆ ಊಹಾಪೋಹ
ಉತ್ತರ ಕೊರಿಯಾ 2022 ರಲ್ಲಿ 70 ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ. ವರದಿಗಳ ಪ್ರಕಾರ, ಈ ಕ್ಷಿಪಣಿಗಳನ್ನು ದಕ್ಷಿಣ ಕೊರಿಯಾದ ಮೇಲೆ ದಾಳಿ ಮಾಡಲು ಅಥವಾ ಯುಎಸ್ ಮುಖ್ಯ ಭೂಭಾಗವನ್ನು ತಲುಪಲು ವಿನ್ಯಾಸಗೊಳಿಸಲಾಗಿದೆ. ಕಿಮ್ ಜಾಂಗ್ ಉನ್ ಅವರ ಸೇನಾ ಕಾರ್ಯಾಚರಣೆಯನ್ನು ಅಮೆರಿಕ, ಜಪಾನ್ ಮತ್ತು ದಕ್ಷಿಣ ಕೊರಿಯಾ ನಿರಂತರವಾಗಿ ಪ್ರಶ್ನಿಸುತ್ತಿರುವುದಕ್ಕೆ ಇದೇ ಕಾರಣ.
ಕಿಮ್ ಜಾಂಗ್ ಉನ್ ಹಲವು ಬಾರಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. 2014ರಲ್ಲಿ ಅವರು 40 ದಿನಗಳ ಕಾಲ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿರಲಿಲ್ಲ. 2021 ರ ಅಂತ್ಯದ ವೇಳೆಗೆ, ಕಿಮ್ ಜೊಂಗ್ ಸುಮಾರು 30 ದಿನಗಳವರೆಗೆ ಕಾಣಿಸಲಿಲ್ಲ. ಮೇ 2021 ಮತ್ತು ಏಪ್ರಿಲ್ 2020 ರಲ್ಲಿ ಕಿಮ್ ಜಾಂಗ್ ಬಹಳ ಸಮಯದವರೆಗೆ ಕಾಣೆಯಾಗಿದ್ದರು. ಆಗಲೂ ಅವರ ಅನಾರೋಗ್ಯದ ಬಗ್ಗೆ ಊಹಾಪೋಹಗಳು ಎದ್ದಿದ್ದವು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ