Health Tips: ಬಾಯಿಯ ದುರ್ನಾತ ತಡೆಯಲು ನಿಮ್ಮ ಹಲ್ಲು, ಒಸಡುಗಳ ಆರೋಗ್ಯಕ್ಕೆ ಈ ರೀತಿ ಮಾಡಿ ನೋಡಿ

ದಿನಕ್ಕೆ ಕನಿಷ್ಠ 2 ಬಾರಿಯಾದರೂ ನಿಮ್ಮ ಹಲ್ಲುಗಳನ್ನು ಉಜ್ಜಬೇಕು. ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮೊದಲು ಹಲ್ಲುಜ್ಜುವುದರಿಂದ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Health Tips: ಬಾಯಿಯ ದುರ್ನಾತ ತಡೆಯಲು ನಿಮ್ಮ ಹಲ್ಲು, ಒಸಡುಗಳ ಆರೋಗ್ಯಕ್ಕೆ ಈ ರೀತಿ ಮಾಡಿ ನೋಡಿ
ಸಾಂದರ್ಭಿಕ ಚಿತ್ರ
Follow us
ಸುಷ್ಮಾ ಚಕ್ರೆ
|

Updated on: Feb 10, 2023 | 11:04 AM

ಬಾಯಿ ದುರ್ನಾತ ಬಾರದಂತೆ ತಡೆಯಲು ಹಲ್ಲು ಹಾಗೂ ಒಸಡಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಅಗತ್ಯ. ಇತ್ತೀಚಿನ ಅಧ್ಯಯನಗಳು ನಿಮ್ಮ ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಿಮ್ಮ ಮೆದುಳಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಸಾಬೀತುಪಡಿಸಿದೆ. ಸರಿಯಾದ ಮೌಖಿಕ ನೈರ್ಮಲ್ಯವನ್ನು (oral hygiene) ಹೊಂದಿಲ್ಲದಿದ್ದರೆ ಹಲವಾರು ರೀತಿಯ ಹಲ್ಲುಗಳು ಮತ್ತು ವಸಡು ಕಾಯಿಲೆಗಳಿಗೆ ಕಾರಣವಾಗಬಹುದು ಎನ್ನಲಾಗಿದೆ.

ಸರ್ ಹೆಚ್.ಎನ್. ರಿಲಯನ್ಸ್ ಫೌಂಡೇಷನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ದಂತ ಸೇವೆಗಳ ವಿಭಾಗದ ಓರಲ್ ಮತ್ತು ಮ್ಯಾಕ್ಸಿಲೊ-ಫೇಷಿಯಲ್ ಸರ್ಜನ್ ಡಾ. ಪ್ರತಿಭಾ ಮಹಾಜನ್ ಈ ಬಗ್ಗೆ ಇಂಡಿಯಾ ಟುಡೇಗೆ ನೀಡಿರುವ ಸಂದರ್ಶನದಲ್ಲಿ ಹಲವಾರು ಪ್ರಮುಖ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಬಲವಾದ ಮತ್ತು ಆರೋಗ್ಯಕರ ಹಲ್ಲುಗಳು ಮತ್ತು ಒಸಡುಗಳನ್ನು ಹೊಂದಲು ಸರಿಯಾದ ನೈರ್ಮಲ್ಯವನ್ನು ಹೊಂದಿರುವುದು ಮುಖ್ಯ. ನಿಮ್ಮ ಬಾಯಿಯನ್ನು ಸ್ವಚ್ಛವಾಗಿಡುವ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ಬಾಯಿಯ ವಾಸನೆಯನ್ನು ತಡೆಯಬಹುದು.

ನಿಮ್ಮ ಹಲ್ಲುಗಳನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡಲು ಎರಡು ಮಾರ್ಗಗಳಿವೆ: ಸಾಂಪ್ರದಾಯಿಕ ವಿಧಾನಗಳು ಮತ್ತು ಆಧುನಿಕ ವಿಧಾನಗಳು ಎಂದು ಡಾ. ಪ್ರತಿಭಾ ಮಹಾಜನ್ ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: Treatment For Bad Breath: ಪೇರಳೆ ಎಲೆಗಳನ್ನು ಈ ರೀತಿ ಬಳಸಿ, ಬಾಯಿಯ ದುರ್ವಾಸನೆ ದೂರವಾಗಿಸಿ

ದಿನಕ್ಕೆ ಎರಡು ಬಾರಿ ಹಲ್ಲುಜ್ಜಬೇಕು: ಸಾಂಪ್ರದಾಯಿಕ ವಿಧಾನದ ಪ್ರಕಾರ, ದಿನಕ್ಕೆ ಕನಿಷ್ಠ 2 ಬಾರಿಯಾದರೂ ನಿಮ್ಮ ಹಲ್ಲುಗಳನ್ನು ಉಜ್ಜಬೇಕು. ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮೊದಲು ಹಲ್ಲುಜ್ಜುವುದರಿಂದ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗೇ, ಫ್ಲೋಸಿಂಗ್ ಅನ್ನು ಹಲ್ಲು ಮತ್ತು ಒಸಡುಗಳ ನಡುವಿನ ಬಿರುಕುಗಳನ್ನು ತಲುಪಲು ಉಪಯೋಗಿಸಿದರೆ ಒಳಗಿರುವ ಎಲ್ಲ ಗಲೀಜು, ಆಹಾರದ ತುಣುಕುಗಳೂ ಹೊರಬರುತ್ತದೆ.

ಬಯೋಫಿಲ್ಮ್ ಅನ್ನು ರೂಪಿಸುವ ಬಹಳಷ್ಟು ಬ್ಯಾಕ್ಟೀರಿಯಾಗಳು ಇರುವುದರಿಂದ ನಿಮ್ಮ ಹಲ್ಲುಗಳು ಮತ್ತು ವಸಡು ಹಲ್ಲುಗಳನ್ನು ಜೋಡಿಸುವ ಪ್ರದೇಶಗಳನ್ನು ಕೂಡ ಕ್ಲೀನ್ ಮಾಡುವುದು ಅವಶ್ಯಕ. ದಿನವಿಡೀ ನಾವು ತಿನ್ನುತ್ತೇವೆ ಮತ್ತು ಕುಡಿಯುತ್ತೇವೆ. ಇದು ಜೈವಿಕ ಫಿಲ್ಮ್ ಅನ್ನು ರಚಿಸುತ್ತದೆ. ಹೀಗಾಗಿ, ಅದನ್ನು ಸ್ವಚ್ಛಗೊಳಿಸದಿದ್ದರೆ ಬಾಯಿಯ ಆರೋಗ್ಯ ಹಾಳಾಗುತ್ತದೆ.

ಫ್ಲೋಸಿಂಗ್: ನಾವು ಹಲ್ಲುಗಳನ್ನು ಸ್ವಚ್ಛಗೊಳಿಸಿದ ನಂತರವೇ ಜೈವಿಕ ಫಿಲ್ಮ್ ಅನ್ನು ತೆಗೆದುಹಾಕಲಾಗುತ್ತದೆ. ಪ್ಲೇಕ್ ಎಂದು ಕರೆಯಲ್ಪಡುವ ಮೃದುವಾದ ನಿಕ್ಷೇಪಗಳು ಮತ್ತು ಟಾರ್ಟರ್ ಎಂದು ಕರೆಯಲ್ಪಡುವ ಹಾರ್ಡ್ ನಿಕ್ಷೇಪಗಳನ್ನು ತೆಗೆದುಹಾಕಲಾಗುತ್ತದೆ. ಆದರೆ, ಅನೇಕ ಜನರು ಫ್ಲೋಸ್ ಮಾಡುವುದಿಲ್ಲ. ಇದು ಗಮ್ ಕಾಯಿಲೆಗೆ ಕಾರಣವಾಗುತ್ತದೆ.

“ನಾವು ಹಲ್ಲುಜ್ಜುತ್ತೇವೆ, ಆದರೆ ಫ್ಲೋಸ್ ಮಾಡುವುದಿಲ್ಲ. ಫ್ಲೋಸ್ ಮಾಡುವುದು ಸ್ವಲ್ಪ ಸವಾಲಿನ ಸಂಗತಿಯಾಗಿದೆ. ಪ್ರತಿದಿನ ನಿಮ್ಮ ಹಲ್ಲುಗಳನ್ನು ಫ್ಲೋಸ್ ಮಾಡುವ ಸರಿಯಾದ ವಿಧಾನವನ್ನು ಅರ್ಥಮಾಡಿಕೊಳ್ಳಲು ನಿಮ್ಮ ದಂತವೈದ್ಯರನ್ನು ಭೇಟಿ ಮಾಡಿ” ಎಂದು ಡಾ. ಪ್ರತಿಭಾ ಮಹಾಜನ್ ಹೇಳಿದ್ದಾರೆ.

ಇದನ್ನೂ ಓದಿ: Betel Leaves Benefits: ವೀಳ್ಯದೆಲೆ ಕೇವಲ ಬಾಯಿಯ ವಾಸನೆ ಮಾತ್ರವಲ್ಲ ಈ ಆರೋಗ್ಯ ಸಮಸ್ಯೆಯನ್ನೂ ನಿವಾರಿಸುತ್ತೆ

ಗಾರ್ಗ್ಲಿಂಗ್: ಪ್ರತಿ ಊಟದ ನಂತರ ಬಾಯಿ ಮುಕ್ಕಳಿಸುವುದು ಮುಖ್ಯ. ಸಿಹಿ, ತಂಪು ಪಾನೀಯ, ಜ್ಯೂಸ್ ಮತ್ತು ಊಟದ ನಂತರ ನೀವು ಗಾರ್ಗ್ಲಿಂಗ್ ಮಾಡಬೇಕಾಗುತ್ತದೆ. ಏಕೆಂದರೆ ಇದು ಲಾಲಾರಸದ pH ಅನ್ನು ಬದಲಾಯಿಸುತ್ತದೆ. ಇಲ್ಲವಾದರೆ, ಹಲ್ಲುಗಳ ಸಂದಿಯಲ್ಲಿ ಸಣ್ಣ ಸಣ್ಣ ಆಹಾರದ ತುಣುಕುಗಳು ಹಾಗೇ ಉಳಿದು, ಕೊಳೆತು ಹಲ್ಲು ಹುಳುಕಾಗುತ್ತದೆ.

ಆಧುನಿಕ ವಿಧಾನಗಳು: ಆಧುನಿಕ ವಿಧಾನದಲ್ಲಿ ಮೌತ್‌ವಾಶ್ ಅನ್ನು ಬಳಸುವುದು ಬಾಯಿಯನ್ನು ಸ್ವಚ್ಛವಾಗಿಡಲು ಮತ್ತೊಂದು ಮಾರ್ಗವಾಗಿದೆ. ವಿಶೇಷವಾಗಿ ಪ್ರತಿ ಬಾರಿ ಊಟದ ನಂತರ ಬ್ರಷ್ ಮಾಡಲು ನಿಮಗೆ ಸಾಧ್ಯವಾಗದಿದ್ದಾಗ. ನೀವು ನಿಮ್ಮ ಬಾಯಿಯನ್ನು ಮುಚ್ಚಿ ದೀರ್ಘ ಗಂಟೆಗಳ ಕಾಲ ಕೆಲಸ ಮಾಡುವಾಗ, ಸ್ವಲ್ಪ ಸಮಯದ ನಂತರ ನಿಮ್ಮ ಬಾಯಿಯಿಂದ ನಿಮಗೇ ವಾಸನೆ ಬರಲಾರಂಭಿಸುತ್ತದೆ. ಇದು ಜೈವಿಕ ಫಿಲ್ಮ್ ರೂಪುಗೊಳ್ಳುವ ಸಮಯವಾಗಿದೆ. ಹೀಗಾಗಿ, ನೀವು ಮೌತ್​ವಾಶ್​ ಬಳಸಬೇಕು ಎಂದು ಡಾ. ಪ್ರತಿಭಾ ಮಹಾಜನ್ ಸಲಹೆ ನೀಡಿದ್ದಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್