Sign In

By signing in or creating an account, you agree with Associated Broadcasting Company's Terms & Conditions and Privacy Policy.

Betel Leaves Benefits: ವೀಳ್ಯದೆಲೆ ಕೇವಲ ಬಾಯಿಯ ವಾಸನೆ ಮಾತ್ರವಲ್ಲ ಈ ಆರೋಗ್ಯ ಸಮಸ್ಯೆಯನ್ನೂ ನಿವಾರಿಸುತ್ತೆ

ಬಾಯಿಯ ತಾಜಾತನವನ್ನು ಕಾಪಾಡಿಕೊಳ್ಳಲು ಅನೇಕ ಮಂದಿ ವೀಳ್ಯದೆಲೆಯನ್ನು ಸೇವಿಸುತ್ತಾರೆ. ಹಾಗೆಯೇ ತಿನ್ನುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಅನೇಕ ವಿಷಯಕಾರಿ ಅಂಶಗಳು ಹೊರಬರುತ್ತವೆ.

Betel Leaves Benefits: ವೀಳ್ಯದೆಲೆ ಕೇವಲ ಬಾಯಿಯ ವಾಸನೆ ಮಾತ್ರವಲ್ಲ ಈ ಆರೋಗ್ಯ ಸಮಸ್ಯೆಯನ್ನೂ ನಿವಾರಿಸುತ್ತೆ
ವೀಳ್ಯದೆಲೆ
Follow us
ನಯನಾ ರಾಜೀವ್
|

Updated on: Feb 10, 2023 | 8:00 AM

ಬಾಯಿಯ ತಾಜಾತನವನ್ನು ಕಾಪಾಡಿಕೊಳ್ಳಲು ಅನೇಕ ಮಂದಿ ವೀಳ್ಯದೆಲೆಯನ್ನು ಸೇವಿಸುತ್ತಾರೆ. ಹಾಗೆಯೇ ತಿನ್ನುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಅನೇಕ ವಿಷಯಕಾರಿ ಅಂಶಗಳು ಹೊರಬರುತ್ತವೆ. ವೀಳ್ಯದೆಲೆಯು ಬಾಯಿಯನ್ನು ತಾಜಾವಾಗಿಡುವುದರ ಜೊತೆಗೆ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಇವುಗಳಲ್ಲಿ ಯೂರಿಕ್ ಆಮ್ಲವೂ ಒಂದು, ಇಂದಿನ ಯುಗದಲ್ಲಿ, ಈ ರೋಗವು ಬಹಳ ವೇಗವಾಗಿ ಬೆಳೆಯುತ್ತಿದೆ, ವೀಳ್ಯದೆಲೆಯು ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಸಮತೋಲನಗೊಳಿಸಲು ಸಹಾಯಕವಾಗಿದೆಯೆಂದು ಸಾಬೀತುಪಡಿಸುತ್ತದೆ.

ವೀಳ್ಯದೆಲೆಯು ಯೂರಿಕ್ ಆಮ್ಲವನ್ನು ಹೇಗೆ ನಿಯಂತ್ರಿಸುತ್ತದೆ ವೀಳ್ಯದೆಲೆಯು ದೇಹದಲ್ಲಿ ಪ್ಯೂರಿನ್ ಅನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ ವೀಳ್ಯದೆಲೆಯಿಂದ ಗ್ಯಾಸ್ಟ್ರಿಕ್ ಅಲ್ಸರ್ ಕೂಡ ಗುಣವಾಗುತ್ತದೆ. ವೀಳ್ಯದೆಲೆಯಲ್ಲಿ ಅನೇಕ ನಿರ್ವಿಶೀಕರಣ ಗುಣಗಳು ಕಂಡುಬರುತ್ತವೆ, ಇದು ದೇಹದಿಂದ ವಿಷಕಾರಿ ಅಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಯೂರಿಕ್ ಆಸಿಡ್​ನಿಂದ ಬಳಲುತ್ತಿರುವವರು ವೀಳ್ಯದೆಲೆಯಿಂದ ಮಾಡಿದ ಶರಬತ್ತನ್ನು ಕುಡಿಯಬಹುದು ಅಥವಾ ನೇರವಾಗಿ ತಿನ್ನುವುದರಿಂದ ಆರೋಗ್ಯ ಲಾಭ ಪಡೆಯಬಹುದು.

ನಮ್ಮ ಹಿರಿಯರು ಶೀತ, ಜ್ವರ, ಎದೆ ಬಿಗಿತ ಮತ್ತು ಉಸಿರಾಟದ ತೊಂದರೆಗಳನ್ನು ತೊಡೆದುಹಾಕಲು ವೀಳ್ಯದೆಲೆಗಳನ್ನು ಬಳಸುತ್ತಿದ್ದರು. ಉಸಿರಾಟ ಸಮಸ್ಯೆ ದೂರವಾಗಲು ವೀಳ್ಯದೆಲೆಯನ್ನು ಲವಂಗದ ನೀರಿನಲ್ಲಿ ಕುದಿಸಿ ಒಂದು ಗುಟುಕು ಚಹಾದಂತೆ ಕುಡಿಯಿರಿ. ಇದು ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನವನ್ನು ನೀಡುತ್ತದೆ. ವೀಳ್ಯದೆಲೆಯು ತಲೆನೋವಿನಿಂದಲೂ ಪರಿಹಾರವನ್ನು ನೀಡುತ್ತದೆ. ಇದಕ್ಕಾಗಿ ವೀಳ್ಯದೆಲೆಯನ್ನು ನೆನೆಸಿ ತಲೆಯ ಮೇಲೆ ಇಟ್ಟುಕೊಳ್ಳಬೇಕು.

ಯೂರಿಕ್ ಆಮ್ಲದ ಲಕ್ಷಣಗಳು ಕೀಲು ನೋವು ಮತ್ತು ಚಲನೆಯಲ್ಲಿ ತೊಂದರೆ ಊದಿಕೊಂಡ ಬೆರಳುಗಳು ಕೀಲುಗಳಲ್ಲಿ ನೋವು ಪಾದಗಳು ಮತ್ತು ಕೈಗಳ ಬೆರಳುಗಳಲ್ಲಿ ನೋವು ಕೆಲವೊಮ್ಮೆ ಈ ನೋವು ಅಸಹನೀಯವಾಗುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ