AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕೊರಿಯ ಅಧ್ಯಕ್ಷ ಕಿಮ್ ಜಾಂಗ್ ಉನ್ ಮಗಳು ಮೊಟ್ಟಮೊದಲ ಬಾರಿ ಮಾಧ್ಯಮಗಳ ಮುಂದೆ ಪ್ರತ್ಯಕ್ಷಳಾದಳು!

ಕಿಮ್ ಅವರ ಖಾಸಗಿ ಬದುಕು ಮತ್ತು ಅವರ ಫ್ಯಾಮಿಲಿ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ಇಲ್ಲ. ಕೆ ಸಿ ಎನ್ ಎ ತನ್ನ ವರದಿಯಲ್ಲಿ ಕಿಮ್ ಜೊತೆ ಅವರ ಮಗಳು ಕಾಣಿಸಿಕೊಂಡಳು ಅಂತ ಹೇಳಿದೆಯೇ ಹೊರತು ಅವಳ ಕುರಿತು ವಿವರಗಳನ್ನು ನೀಡಿಲ್ಲ.

ಉತ್ತರ ಕೊರಿಯ ಅಧ್ಯಕ್ಷ ಕಿಮ್ ಜಾಂಗ್ ಉನ್ ಮಗಳು ಮೊಟ್ಟಮೊದಲ ಬಾರಿ ಮಾಧ್ಯಮಗಳ ಮುಂದೆ ಪ್ರತ್ಯಕ್ಷಳಾದಳು!
ಮಗಳ ಜೊತೆ ಕಿಮ್ ಜಾಂಗ್ ಉನ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 19, 2022 | 11:27 AM

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (Kim Jong Un) ಅವರ ಮಗಳು ಎಲ್ಲಿದ್ದಾಳೆ, ಏನು ಮಾಡುತ್ತಿದ್ದಾಳೆ ಇಷ್ಟಕ್ಕೂ ಅವಳು ಬದುಕಿದ್ದಾರೆಯೇ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಶುಕ್ರವಾರದ ಕಿಮ್ ಜಾಂಗ್ ಉನ್ ಅವರು ಹೊಚ್ಚ ಹೊಸ ಬಗೆಯ ಅಂತರಖಂಡ ಬ್ಯಾಲಿಸ್ಟಿಕ್ ಕ್ಷಿಪಣಿ (Intercontinental Ballistic Missile) ಲಾಂಚ್ ಮಾಡುವ ಸಂದರ್ಭದಲ್ಲಿ ಅವರ ಜೊತೆ ಮಗಳು ಕಾಣಿಸಿಕೊಂಡಳು. ಅವರಿಬ್ಬರು ಪರಸ್ಪರ ಕೈಗಳನ್ನು ಹಿಡಿದು ಕ್ಷಿಪಣಿ ಮೊಬೈಲ್ ಲಾಂಚ್ ಪ್ಯಾಂಡ್ ನತ್ತ ನಡೆದು ಬರುತ್ತಿರುವ ಪೋಟೋಗಳನ್ನು ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ (ಕೆ ಸಿ ಎನ್ ಎ) ಬಿಡುಗಡೆ ಮಾಡಿದೆ. ಕಿಮ್ ಅವರಿಂದ ಹಾಸಂಗ್-17 (Hwasong-17) ಎಂದು ಕರೆಯಲ್ಪಟ್ಟಿರುವ ಹೊಸ ಕ್ಷಿಪಣಿಗಳನ್ನು ಪ್ಯಾಂಗ್ಯಾಂಗ್ ಅಂತರರಾಷ್ಟ್ರೀಯ ಏರ್ ಫೀಲ್ಡ್ ನಿಂದ ಲಾಂಚ್ ಮಾಡಲಾಗಿದ್ದು ಅವು 992.2 ಕಿಮೀಳಷ್ಟು ದೂರವನ್ನು ಕ್ರಮಿಸುವ ಕ್ಷಮತೆ ಹೊಂದಿವೆ.

ಶತ್ರುರಾಷ್ಟ್ರಗಳು ನಡೆಸುತ್ತಿರುವ ಯುದ್ಧ ಪೂರ್ವಭಾವಿ ತಯಾರಿಗಳಿಗೆ ಪ್ರತಿಯಾಗಿ ಉತ್ತರ ಕೊರಿಯಾದ ಸಾಮರ್ಥ್ಯವನ್ನು ಪ್ರದರ್ಶಿಸಿ ಒಂದು ಸ್ಪಷ್ಟ ಸಂದೇಶವನ್ನು ಕಳಿಸುವುದೇ ಕ್ಷಿಪಣಿ ಲಾಂಚ್ ಹಿಂದಿನ ಉದ್ದೇಶವಾಗಿದೆ ಕಿಮ್ ಹೇಳಿದರು. ಶತ್ರುರಾಷ್ಟ್ರಗಳು ಪದೇಪದೆ ನ್ಯೂಕ್ಲಿಯರ್ ಬಾಂಬ್ ಗಳ ಬೆದರಿಕೆಯೊಡ್ಡಿ ಉತ್ತರ ಕೊರಿಯಾವನ್ನು ಹೆದರಿಸುವುದು ಮುಂದುವರಿಸಿದರೆ, ನಮ್ಮ ಪಕ್ಷ ಮತ್ತು ಸರ್ಕಾರ ಇಂಥ ಬೆದರಿಕೆಗಳಿಗೆ ಮತ್ತು ನ್ಯೂಕ್ಲಿಯರ್ ಬಾಂಬ್ ದಾಳಿಗಳಿಗೆ ಉಗ್ರವಾಗಿ ಪ್ರತಿಕ್ರಿಯಿಸುತ್ತದೆ ಮತ್ತು ಅಂಥ ಒಂದು ಸ್ಥಿತಿ ಉದ್ಭವಗೊಂಡರೆ ಡಿ ಪಿ ಆರ್ ಕೆ ಅದಕ್ಕೆ ತಕ್ಕ ಉತ್ತರ ನೀಡುತ್ತದೆ ಅಂತ ಕಿಮ್ ಜಾಂಗ್ ಉನ್ ಘೋಷಿಸಿದ್ದಾರೆ,’ ಎಂದು ಕೆಸಿಎನ್ ಎ ವರದಿ ಮಾಡಿದೆ.

ಇದನ್ನೂ ಓದಿ: Ministry of External Affairs: ಬೇಹುಗಾರಿಕೆ ಆರೋಪದ ಮೇಲೆ ವಿದೇಶಾಂಗ ಸಚಿವಾಲಯದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಹಾಗೆ ನೋಡಿದರೆ, ಕಿಮ್ ಅವರ ಖಾಸಗಿ ಬದುಕು ಮತ್ತು ಅವರ ಫ್ಯಾಮಿಲಿ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ಇಲ್ಲ. ಕೆ ಸಿ ಎನ್ ಎ ತನ್ನ ವರದಿಯಲ್ಲಿ ಕಿಮ್ ಜೊತೆ ಅವರ ಮಗಳು ಕಾಣಿಸಿಕೊಂಡಳು ಅಂತ ಹೇಳಿದೆಯೇ ಹೊರತು ಅವಳ ಕುರಿತು ವಿವರಗಳನ್ನು ನೀಡಿಲ್ಲ. ಆಕೆ ಮೊದಲಬಾರಿಗೆ ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿದ್ದಳು ಅನ್ನೋದು ಮಾತ್ರ ಸತ್ಯ.

ಮಾಜಿ ಬಾಸ್ಕೆಟ್ ಬಾಲ್ ಆಟಗಾರ ಡೆನಿಸ್ ರಾಡ್ಮನ್ 2013 ರಲ್ಲಿ ಬ್ರಿಟನ್ನಿನ ಗಾರ್ಡಿಯನ್ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ‘ಕಿಮ್ ಅವರಿಗೆ ಜು ಯೆ ಹೆಸರಿನ ಮಗಳಿದ್ದಾಳೆ’ ಎಂದು ಹೇಳಿದ್ದರು.

ತಾನು ಕಿಮ್ ಜಾಂಗ್ ಉನ್ ಅವರ ಕುಟುಂಬದ ಜೊತೆ ಸ್ವಲ್ಪ ಸಮಯವನ್ನು ಕಳೆದಿದ್ದೆ ಮತ್ತು ಅವರು ‘ಒಬ್ಬ ಉತ್ತಮ ತಂದೆ’ ಅನ್ನೋದು ನನಗೆ ಮನವರಿಕೆಯಾಗಿತ್ತು ಎಂದು ಡೆನಿಸ್ ರಾಡ್ಮನ್ ಹೇಳಿದ್ದರು.

‘ಅವರ ಮಗಳು ಜು ಯೆ ಅನ್ನು ಎತ್ತಿ ಆಡಿಸಿದ್ದೆ ಮತ್ತು ಶ್ರೀಮತಿ ರಿ ಅವರೊಂದಿಗೂ ಮಾತಕತೆ ನಡೆಸಿದ್ದೆ’ ಎಂದು ಅವರು ಪತ್ರಿಕೆಗೆ ಹೇಳಿದ್ದರು.

ಉತ್ತರ ಕೊರಿಯಾದ ರಾಷ್ಟ್ರೀಯ ಮಾಧ್ಯಮಗಳು ಜುಲೈ 2012 ರವರೆಗೆ  ಕಿಮ್ ಮತ್ತು ರಿ ಅವರ ವಿವಾಹವನ್ನು ವರದಿ ಮಾಡಿರಲಿಲ್ಲ. ಆದರೆ ದಕ್ಷಿಣ ಕೊರಿಯಾದ ರಾಷ್ಟ್ರೀಯ ಗುಪ್ತಚರ ಸೇವೆ (ಎನ್ ಐ ಎಸ್) ಬಹಿರಂಗಪಡಿಸಿರುವ ಮಾಹಿತಿ ಪ್ರಕಾರ ಕಿಮ್ ಮತ್ತು ರಿ ದಂಪತಿಗೆ ಮೂರು ಮಕ್ಕಳಿವೆ.

ಇನ್ನಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ