Ministry of External Affairs: ಬೇಹುಗಾರಿಕೆ ಆರೋಪದ ಮೇಲೆ ವಿದೇಶಾಂಗ ಸಚಿವಾಲಯದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಬೇಹುಗಾರಿಕೆ ಆರೋಪದ ಮೇಲೆ ವಿದೇಶಾಂಗ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಚಾಲಕನನ್ನು ದೆಹಲಿಯ ಜವಾಹರ್ ಲಾಲ್ ನೆಹರು ಭವನದಲ್ಲಿ ಇಂದು ಬಂಧಿಸಲಾಗಿದೆ.
ದೆಹಲಿ: ಬೇಹುಗಾರಿಕೆ ಆರೋಪದ ಮೇಲೆ ವಿದೇಶಾಂಗ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಚಾಲಕನನ್ನು ದೆಹಲಿಯ ಜವಾಹರ್ ಲಾಲ್ ನೆಹರು ಭವನದಲ್ಲಿ ಇಂದು ಬಂಧಿಸಲಾಗಿದೆ. ಆತ ಪೂನಂ ಶರ್ಮಾ ಎಂಬ ಮಹಿಳೆಯಂತೆ ವೇಷ ಮರೆಸಿಕೊಂಡು ಪಾಕಿಸ್ತಾನಿ ವ್ಯಕ್ತಿಗೆ ಹಣಕ್ಕಾಗಿ ದೇಶ ಗುಪ್ತ ಮಾಹಿತಿ ಮತ್ತು ದಾಖಲೆಗಳನ್ನು ವರ್ಗಾಯಿಸುತ್ತಿದ್ದ ಎಂದು ಹೇಳಲಾಗಿದೆ. ಇದೀಗ ಆರೋಪಿಯನ್ನು ಬಂಧಿಸಿರುವ ದೆಹಲಿ ಪೊಲೀಸರ ಅಪರಾಧ ವಿಭಾಗದ ಮೂಲಗಳು ಈ ಚಾಲಕ ಹನಿ ಟ್ರ್ಯಾಪ್ ಮೂಲಕ ದೇಶದ ಗುಪ್ತವಿಚಾರಗಳನ್ನು ಪಾಕಿಸ್ತಾನಕ್ಕೆ ನೀಡಲು ಪ್ರಯತ್ನಿಸುತ್ತಿದ್ದ ಹೇಳಿದೆ.
ಪಾಕಿಸ್ತಾನಕ್ಕೆ ಗೌಪ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ್ದಕ್ಕಾಗಿ ದೆಹಲಿ ಪೊಲೀಸರು ಭದ್ರತಾ ಏಜೆನ್ಸಿಗಳ ಸಹಾಯದಿಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ (ಎಂಇಎ) ಕೆಲಸ ಮಾಡುತ್ತಿದ್ದ ಚಾಲಕನನ್ನು ಬಂಧಿಸಿದ್ದಾರೆ. ಚಾಲಕನನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹನಿಟ್ರ್ಯಾಪ್ ಮಾಡಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. MEAನಲ್ಲಿ ಕೆಲಸ ಮಾಡುವ ಹೆಚ್ಚಿನ ಉದ್ಯೋಗಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂದು ಕಂಡುಹಿಡಿಯಲು ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳು ತನಿಖೆಯನ್ನು ಪ್ರಾರಂಭಿಸಿದವು. ಆದರೆ MEA ನಿಂದ ಅಧಿಕೃತ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಇದನ್ನು ಓದಿ: ನೇಪಾಳಿ ಸನ್ಯಾಸಿಯಂತೆ ಬದುಕುತ್ತಿದ್ದ ಚೀನಾ ಮಹಿಳೆ, ಬೇಹುಗಾರಿಕೆ ಆರೋಪದ ಮೇಲೆ ಬಂಧನ
ಆಗಸ್ಟ್‌ನಲ್ಲಿ ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ 46 ವರ್ಷದ ವ್ಯಕ್ತಿಯನ್ನು ರಾಜಸ್ಥಾನ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಈ ವ್ಯಕ್ತಿ 2016ರಲ್ಲಿ ಭಾರತೀಯ ಪೌರತ್ವ ಪಡೆದಿದ್ದರು. ಭಗ್ಚಂದ್ ಎಂದು ಗುರುತಿಸಲಾಗಿರುವ ಈ ಗೂಢಚಾರಿ ಪಾಕಿಸ್ತಾನದಲ್ಲಿ ಹುಟ್ಟಿದ್ದು, 1998ರಲ್ಲಿ ಕುಟುಂಬ ಸಮೇತ ದೆಹಲಿಗೆ ಬಂದಿದ್ದ. 46 ವರ್ಷದ ಈತ 2016ರಲ್ಲಿ ಭಾರತೀಯ ಪೌರತ್ವ ಪಡೆದು ದೆಹಲಿಯಲ್ಲಿ ಟ್ಯಾಕ್ಸಿ ಚಾಲಕ ಮತ್ತು ಕಾರ್ಮಿಕನಾಗಿ ಕೆಲಸ ಮಾಡಲು ಆರಂಭಿಸಿದ್ದ. ವರದಿಯ ಪ್ರಕಾರ ಭಾಗ್ಚಂದ್ ಪಾಕಿಸ್ತಾನದಲ್ಲಿರುವ ತನ್ನ ಸಂಬಂಧಿಕರ ಮೂಲಕ ತನ್ನ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದನು.
ಬೌದ್ಧ ಸನ್ಯಾಸಿ ಎಂದ ಚೀನಾದ ಗೂಢಚಾರಿ ಬಂಧನ
ಅಕ್ಟೋಬರ್‌ನಲ್ಲಿ, ‘ಬೌದ್ಧ ಸನ್ಯಾಸಿ’ ಎಂದು ಹೇಳಿಕೊಂಡ 50 ವರ್ಷದ ಚೀನಾ ಮಹಿಳೆಯನ್ನು ಚೀನಾದ ಗೂಢಚಾರಿಕೆ ಎಂದು ಶಂಕಿಸಿ ದೆಹಲಿ ಪೊಲೀಸರು ಬಂಧಿಸಿದ್ದರು. ಸುದ್ದಿ ಸಂಸ್ಥೆ IANS ಪ್ರಕಾರ, ಕೈ ರುವೋ ಎಂದು ಗುರುತಿಸಲ್ಪಟ್ಟ ಮಹಿಳೆ, “ಚೀನಾದ ಕಮ್ಯುನಿಸ್ಟ್ ನಾಯಕರು ತನ್ನನ್ನು ಕೊಲ್ಲಲು ಬಯಸಿದ್ದರು ಮತ್ತು ಆದ್ದರಿಂದ ಅವರು ಬಂದಿದ್ದಾರೆ ಎಂದು ಹೇಳುವ ಮೂಲಕ ತನಿಖಾಧಿಕಾರಿಗಳನ್ನು ದಾರಿತಪ್ಪಿಸಲು ಪ್ರಯತ್ನಿಸಿದರು. ಅವಳು ನೇಪಾಳದ ಪ್ರಜೆಯಾದ ಡೋಲಾ ಲಾಮಾ ಎಂದು ಭಾರತದಲ್ಲಿ ವಾಸಿಸುತ್ತಿದ್ದಳು. ನಂತರ ಪರಿಶೀಲನೆ ನಡೆಸಿದಾಗ ಆಕೆಯ ಹೆಸರಿನಲ್ಲಿ ಚೈನೀಸ್ ಪಾಸ್ ಪೋರ್ಟ್ ಇದ್ದು, ಆ ಪಾಸ್ ಪೋರ್ಟ್ ಆಧಾರದ ಮೇಲೆ ಆಕೆ ಭಾರತದಲ್ಲಿ ನೆಲೆಸಿದ್ದಾಳೆ ಎಂದು ಪೊಲೀಸರಿಗೆ ತಿಳಿದು ಬಂದಿದೆ.
Published On - 5:05 pm, Fri, 18 November 22